Advertisement
ತರಕಾರಿ, ದಿನಸಿ ತರಲು ವಾಹನದಲ್ಲಿ ಬಂದವರಿಗೆ ಪೊಲೀಸರು ಲಾಠಿ ಏಟು ಕೊಟ್ಟದ್ದಷ್ಟೇ ಅಲ್ಲ, ವಾಹನಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ವಾಹನಗಳ ಓಡಾಟಕ್ಕೆ ಗ್ರಾಮೀಣ ಪ್ರದೇಶದಲ್ಲೂ ಅಡ್ಡಿ ಮಾಡಿದ್ದು, ಭಾರೀ ಸಮಸ್ಯೆಯುಂಟಾಗಿದೆ. ಮೂರ್ನಾಲ್ಕು ಕಿ.ಮೀ. ನಡೆದು ದಿನಸಿ ವಸ್ತುಗಳು, ತರಕಾರಿ ಮತ್ತಿತರ ಅಗತ್ಯ ವಸ್ತುಗಳನ್ನು ತರಲು ಸಾಧ್ಯವೇ, ಹೈನುಗಾರರು ಡೇರಿಗಳಿಗೆ ಹಾಲು ಹಾಕಲು ಸಾಧ್ಯವೇ ಎಂದು ಜನರು ಪ್ರಶ್ನಿಸಿದ್ದಾರೆ.ಅಗತ್ಯ ವಸ್ತು ತರಲು ವಾಹನ ಬಳಸಬಹುದು: ಡಿಜಿಪಿ
ವಾಹನ ರಸ್ತೆಗಿಳಿಯಬಾರದು ಎಂದು ಸರಕಾರ ಹೇಳಿದ್ದರಿಂದ ಜನ ಬಹಳಷ್ಟು ಸಮಸ್ಯೆ ಎದುರಿಸಬೇಕಾಯಿತು. ವಾಹನದಲ್ಲಿ ಬಂದವರಿಗೆ ಪೊಲೀಸರು ಲಾಠಿ ಪರಾಕ್ರಮ ತೋರಿಸಿದರು.
Related Articles
Advertisement
ಅಗತ್ಯ ವಸ್ತುಗಳ ಖರೀದಿಗೆ ನೀಡಿದ್ದ ಸಮಯಾವಕಾಶ ಮುಗಿಯುತ್ತಲೇ ರಸ್ತೆಗಿಳಿದ ಪೊಲೀಸರು ಅಂಗಡಿಗಳನ್ನು ಮುಚ್ಚಿಸಿದರು. ವಾಹನಗಳನ್ನು ಅಡ್ಡಗಟ್ಟಿ ಅನಗತ್ಯ ಸಂಚರಿಸು ತ್ತಿದ್ದವರ ಮೇಲೆ ಲಾಠಿ ಪ್ರಹಾರ ಮಾಡಿದರು. ನೂರಾರು ಕಾರು, ಬೈಕ್ ವಶಕ್ಕೆ ಪಡೆದು ಪ್ರಕರಣ ದಾಖಲಿಸಿದರು.
ಲಾಠಿ ಏಟಿಗೆ ಆಕ್ರೋಶ ಜನರು ಮತ್ತು ವ್ಯಾಪಾರಿಗಳ ಮೇಲೆ ನಡೆಸಿದ ಲಾಠಿ ಚಾರ್ಜ್‌ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳ ಮಹಾಪೂರವೇ ಹರಿದು ಬಂದಿತು. ಸಾರ್ವಜನಿಕರ ಮೇಲೆ ಲಾಠಿ ಚಾರ್ಜ್ ಮಾಡುವ ಅಧಿಕಾರ ಪೊಲೀಸರಿಗೆ ಇದೆಯೇ ಎಂದು ಸಾಮಾಜಿಕ ಜಾಲತಾಣಗಳ ಮೂಲಕ ಗೃಹ ಸಚಿವರನ್ನು ಪ್ರಶ್ನಿಸಲಾಯಿತು. ಈ ಹಿನ್ನೆಲೆಯಲ್ಲಿ ಮಧ್ಯಾಹ್ನದ ಬಳಿಕ ಲಾಠಿ ಚಾರ್ಜ್ ಮಾಡಬೇಡಿ, ಪ್ರಕರಣ ದಾಖಲಿಸಿ, ವಾಹನ ವಶಕ್ಕೆ ಪಡೆಯಿರಿ ಎಂಬ ಸೂಚನೆಯನ್ನು ಜಿಲ್ಲಾ ಎಸ್‌ಪಿಗಳು ಮತ್ತು ಮಹಾ ನಗರದ ಡಿಸಿಪಿಗಳು ನೀಡಿದರು. ಆದರೆ ಅಷ್ಟು ಹೊತ್ತಿಗೆ ಹಲವೆಡೆ ಲಾಠಿ ರುಚಿ ಉಂಡ ಸಾರ್ವಜನಿಕರು ಹೈರಾಣಾಗಿದ್ದರು. ಜಿಲ್ಲಾಡಳಿತಕ್ಕೆ ಅಧಿಕಾರ ಕೊಡಿ
ಒಂದು ಜಿಲ್ಲೆಯಲ್ಲಿ ಹೆಚ್ಚು, ಮತ್ತೂಂದು ಜಿಲ್ಲೆಯಲ್ಲಿ ಕಡಿಮೆ ಕೊರೊನಾ ಪ್ರಕರಣಗಳು ಕಂಡು ಬರುತ್ತಿವೆ. ಹೀಗಾಗಿ ಇಡೀ ರಾಜ್ಯಕ್ಕೆ ಒಂದೇ ರೀತಿಯ ನಿರ್ಬಂಧ ಬೇಡ ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ. ನಿರ್ಬಂಧ ನಿರ್ಧಾರಗಳನ್ನು ಆಯಾ ಜಿಲ್ಲಾಡಳಿತಗಳೇ ತೆಗೆದುಕೊಳ್ಳಲಿ ಎಂಬ ಸಲಹೆಗಳೂ ಇವೆ. ಬೆಂಗಳೂರಿಗೆ ಇರುವಂಥ ನಿಯಮವು ಅತ್ಯಂತ ಕಡಿಮೆ ಪ್ರಕರಣ ಇರುವ ಪ್ರದೇಶಕ್ಕೆ ಏಕೆ ಎಂಬುದು ಜನರ ಪ್ರಶ್ನೆ. ಹೀಗಾಗಿ, ಎಲ್ಲೆಡೆ ಒಂದೇ ನಿಯಮದ ಬದಲು ಆಯಾ ಪ್ರದೇಶಕ್ಕೆ ಅನುಗುಣವಾಗಿ ನಿರ್ಬಂಧ ವಿಧಿಸುವ ಅಧಿಕಾರವನ್ನು ಜಿಲ್ಲಾಡಳಿತಗಳಿಗೆ ನೀಡಲಿ ಎಂಬುದು ಉದಯವಾಣಿಯ ಆಶಯವೂ ಆಗಿದೆ.