ಮನೆಯಲ್ಲಿ ಕೂತು ಬರೀ ಬೋರು ಅನ್ನೋಹಾಗಿಲ್ಲ. ಏಕೆಂದರೆ, ಮೊಬೈಲ್ ತುಂಬ ಹತ್ತಾರು ಆ್ಯಪ್‌ಗ್ಳು ನಿಮ್ಮ ಬೇಸರ ನೀಗಲೆಂದೇ ಇವೆ… ನಿಮ್ಮ ಬಳಿ ಸ್ಮಾರ್ಟ್‌ಫೋನ್ ಇದ್ದರೆ, (ಈಗ ಸ್ಮಾರ್ಟ್‌ಫೋನ್ ಯಾರ ಬಳಿ ಇಲ್ಲ?) ಲಾಕ್‌ಡೌನ್ ಒಂದು ಸಮಸ್ಯೆ ಅನ್ನಿಸುವುದೇ ಇಲ್ಲ. ಅದರಲ್ಲೂ ನೀವು ಕನ್ನಡ ಪುಸ್ತಕಪ್ರಿಯರಾದರೆ, ಕರ್ನಾಟಕ ಸರ್ಕಾರದ ಡಿಜಿಟಿಲ್ ಲೈಬ್ರರಿ ಇದೆ. ಇದರಲ್ಲಿ ಎಲ್ಲ ರೀತಿಯ ಓದುವ ಪುಸ್ತಕಗಳು ದೊರೆಯುತ್ತವೆ. ಕನ್ನಡ, ಇಂಗ್ಲೀಷ್, ಹಿಂದಿ ಸೇರಿದಂತೆ, ಹಲವು ಭಾಷೆಯ ಪುಸ್ತಕಗಳು ಉಂಟು. ಸುಮಾರು 600ಕ್ಕೂ ಹೆಚ್ಚು ವಿಡಿಯೋಗಳು ಅಪ್‌ಲೋಡ್ ಆಗಿವೆ. ಶಾಲೆಯ ಪಠ್ಯಗಳೂ ಇವೆ. ಸ್ಪರ್ಧಾತ್ಮಕ ಪರೀಕ್ಷೆಗೂ ತಯಾರಾಗಬಹುದು. ಕನ್ನಡ ಕ್ಲಾಸಿಕ್ ಕಾದಂಬರಿಗಳ ಆಗರ ಈ ಆ್ಯಪ್. ನೀವು ಓದಬಹುದು. ಮಕ್ಕಳಿಗೂ ಓದಿಸಬಹುದು.
ಮನರಂಜನೆ- ಪಾಠ, ಎರಡೂ ಆಗುತ್ತದೆ. ಲಾಕ್‌ಡೌನ್ ಸಮಯದಲ್ಲಿ ಮನಸ್ಸನ್ನು ಸರಿಯಾಗಿಟ್ಟು ಕೊಳ್ಳಬೇಕು. ಚಿಂತೆ ಬೇಡ. ಈಗ ಅದಕ್ಕೂ ಆ್ಯಪ್ ಬಂದಿದೆ. ಅದರ ಹೆಸರು
“ಕಾಮ್’ ಅಂತ. ಇದು ನಿಮ್ಮ ಮೊಬೈಲ್‌ನಲ್ಲಿ ಇದ್ದರೆ ಸಾಕು ಮನೆಯ ಸದಸ್ಯರೆಲ್ಲರೂ ಮೆಡಿಟೇಷನ್ ಮಾಡಬಹುದು. ಉಸಿರಾಟ ತರಬೇತಿ, ಸಂಗೀತದ ಮೂಲಕ ಮೆದುಳಿನಲ್ಲಿರುವ ಒತ್ತಡ ನಿವಾರಣೆ ಮಾಡುತ್ತದೆ. 25 ನಿಮಿಷದ ತನಕ ಧ್ಯಾನ ಮಾಡುವುದು ಹೇಗೆ ಅಂತ ಹೇಳಿಕೊಡುತ್ತದೆ. ಇದು ಕೂಡ ಗೂಗಲ್ ಆ್ಯಪ್‌ನಲ್ಲಿ ದೊರೆಯುತ್ತದೆ.