ನೀವು ಮಕ್ಕಳ ಜೊತೆಯಲ್ಲಿ, ಹೆಂಡತಿ ಜೊತೆಯಲ್ಲಿ ಆಟ ಆಡಬೇಕು ಅನಿಸಿದರೆ ಮುಕೋ ಪಾರ್ಟಿ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ. ಇದರಲ್ಲಿ, ಮೊಸಾಯಿಕ್, ರಾಂಡಮ್, ಡ್ಯುಯಲ್, ಟಿಕ್‌ಟಾಕ್ ಟೋಯ್, ಹಾಟ್ ಸೀಟ್, ಲೀಗ್- ಹೀಗೆ ಅನೇಕ ಆಟಗಳು ಇವೆ. ಇವಲ್ಲದೆ ಕಾರ್ ರೇಸ್, ಸ್ನೂಕರ್, ಫಿಶಿಂಗ್‌ನಂಥ ಆಟವೂ ಉಂಟು. ಮುಕೋ ಪಾರ್ಟಿ ಮೂಲಕ, ನಮ್ಮನ್ನು ನಾನಾ ಅವತಾರಗಳಲ್ಲಿ ತೋರಿಸುವ ಸೆಲ್ಫಿ ಉಂಟು. ಆಂಡ್ರಾಯ್ಡ್, ಗೂಗಲ್ ಪ್ಲೇ, ಆ್ಯಪಲ್ ಸ್ಟೋರ್‌ಗಳಲ್ಲಿ ಇದು ಉಚಿತವಾಗಿ ಸಿಗುತ್ತದೆ.
Advertisement
ಲೂಡೋ ಉಂಟುಲೂಡೋ ಕಿಂಗ್ ಆ್ಯಪ್ ಮೂಲಕ, ಇಡೀ ಕುಟುಂಬದವರನ್ನು ಗುಡ್ಡೆ ಹಾಕಿಕೊಂಡು ಆಟ ಆಡಬಹುದು. ಇದರಲ್ಲಿ ನೇಚರ್, ಈಜಿಫ್ಟ್, ನೈಟ್ ಮೋಡ್ ಅನ್ನೋ ಥೀಮ್ ಇದೆ. ಯಾವುದನ್ನು
ಬೇಕಾದರೂ ಆಯ್ಕೆ ಮಾಡಬಹುದು. ನಿಮ್ಮ ಗೆಳೆಯರು, ಬಂಧುಗಳು, ಪ್ರಪಂಚದ ಯಾವುದೇ ಮೂಲೆಯಲ್ಲಿದ್ದರೂ ನಿಮ್ಮ ಜೊತೆ ಆಟ ಆಡಬಹುದು. ಒಟ್ಟು 2ರಿಂದ 6 ಜನರನ್ನು
ಸೇರಿಸಿಕೊಳ್ಳಬಹುದು. ಲೂಡೋ, ಸ್ನೇಕ್ ಆ್ಯಂಡ್ ಲ್ಯಾಡರ್ ಬೋರ್ ಆಯ್ತು. ಸ್ವಲ್ಪ ಚಾಲೆಂಜಾಗಿರೋದು ಏನಾದರೂ ಬೇಕು ಅನ್ನೋದಾದರೆ, ವರ್ಡ್ಸ್ ವಿತ್ ಫ್ರೆಂಡ್ಸ್ 2 ಅನ್ನೋ ಆ್ಯಪ್ ಇದೆ. ಇದು ವರ್ಡ್ ಪಸಲ್ ಹೆಚ್ಚು ಕಮ್ಮಿ, 50 ಸಾವಿರ ಪದಗಳ ಸಂಗ್ರಹ ಇದರಲ್ಲಿದೆ. ಇದರಿಂದ, ಪದಗಳ ಪರಿಚಯದ ಜೊತೆಗೆ, ಅದರ ಉಚ್ಚಾರಣೆಯನ್ನೂ ಕಲಿಯಬಹುದು. ಗೂಗ ಪ್ಲೇ ಸ್ಟೋರ್, ಆ್ಯಪಲ್ ಪ್ಲೇನಲ್ಲಿ ಇದು ಸಿಗುತ್ತದೆ.
ಇದು, ನಿಮ್ಮ ಬದುಕಿನ ಹಳೆ ನೆನಪುಗಳನ್ನು ತಂದು ನಿಮ್ಮೆದುರು ಗುಡ್ಡೆ ಹಾಕುತ್ತದೆ. ಕೆಲವೊಂದು ಫೋಟೋಗಳನ್ನು ಚೆಂದ ಮಾಡಿ ಪ್ರಸ್ತುತಪಡಿಸುವುದರಿಂದ, ಕುಟುಂಬದ ಹಳೆಯ ನೆನಪುಗಳೊಂದಿಗೆ ಬೆರೆಯಲು ಅನುಕೂಲ ವಾಗುತ್ತದೆ. ಇದರಲ್ಲಿ ಪ್ರದೇಶವಾರು, ದಿನವಾರು ಘಟನೆಗಳನ್ನು ಮೆಲುಕು ಹಾಕುವ ಅವಕಾಶವೂ ಉಂಟು.