Advertisement

Unlock ಒಂದನೇ ಹಂತದ ಮಾರ್ಗಸೂಚಿ ಪ್ರಕಟ: ಧಾರ್ಮಿಕ ಕೇಂದ್ರಗಳು ನಾಳೆ ತೆರೆಯುವುದಿಲ್ಲ

05:19 PM May 31, 2020 | Hari Prasad |

ನವದೆಹಲಿ: ಕೋವಿಡ್ 19 ವೈರಸ್ ಸಂಬಂಧಿತ ಲಾಕ್ ಡೌನ್ ನ ಐದನೇ ಹಂತದಲ್ಲಿ ಅನ್ ಲಾಕ್ ಸಂಬಂಧಿತ ಮಾರ್ಗಸೂಚಿಯನ್ನು ಕೇಂದ್ರ ಸರಕಾರ ಇಂದು ಬಿಡುಗಡೆಗೊಳಿಸಿದೆ.

Advertisement

ಜೂನ್ 01 ರಿಂದ 30ರವರೆಗೆ ಈ ಲಾಕ್ ಡೌನ್ ಘೋಷಿಸಲಾಗಿದೆ. ಈ ಬಾರಿಯ ಲಾಕ್ ಡೌನ್ ನಲ್ಲಿ ಕಂಟೈನ್ಮೆಂಟ್ ಪ್ರದೇಶಗಳನ್ನು ಹೊರತುಪಡಿಸಿ ಉಳಿದ ಕಡೆಗಳಲ್ಲಿ ಬಹಳಷ್ಟು ಚಟುವಟಿಕೆಗಳಿಗೆ ಅವಕಾಶಗಳನ್ನು ನೀಡಲಾಗಿದೆ.

ಇದಕ್ಕೂ ಮೊದಲು ರಾಜ್ಯ ಸರಕಾರವು ಜೂನ್ 1ರಿಂದಲೇ ರಾಜ್ಯದಲ್ಲಿನ ಧಾರ್ಮಿಕ ಕೇಂದ್ರಗಳನ್ನು ಭಕ್ತರ ಪ್ರವೇಶಕ್ಕೆ ಮುಕ್ತವಾಗಿಸುವ ನಿರ್ಧಾರವನ್ನು ಮಾಡಿತ್ತು. ಆದರೆ ಇದೀಗ ಕೇಂದ್ರದ ಮಾರ್ಗಸೂಚಿ ಹೊರಬಿದ್ದಿರುವುದರಿಂದ ದೇವರ ದರ್ಶನಕ್ಕೆ ಭಕ್ತಾದಿಗಳು ಇನ್ನೂ ಒಂದು ವಾರಗಳ ಕಾಲ ಕಾಯುವುದು ಅನಿವಾರ್ಯವಾಗಲಿದೆ.

ಈ ಬಾರಿ ದೇಶಾದ್ಯಂತ ಕಂಟೈನ್ಮೆಂಟ್ ಪ್ರದೇಶಗಳನ್ನು ಹೊರತುಪಡಿಸಿ ಉಳಿದ ಕಡೆಗಳಲ್ಲಿ ಆರ್ಥಿಕ ಸಹಿತ ಬಹುತೇಕೆ ಚಟುವಟಿಕೆಗಳನ್ನು ಮೂರು ಹಂತಗಳಲ್ಲಿ ಪ್ರಾರಂಭಿಸಲು ನಿರ್ಧರಿಸಲಾಗಿದೆ.

ಇದರ ಪ್ರಕಾರ ಅನ್ ಲಾಕ್ ನ ಮೊದಲನೇ ಹಂತ ಜೂನ್ 8ರಂದು ಪ್ರಾರಂಭಗೊಳ್ಳಲಿದ್ದು ಇದರಲ್ಲಿ ಎಲ್ಲಾ ಧರ್ಮದವರ ಧಾರ್ಮಿಕ ಶ್ರದ್ಧಾ ಕೇಂದ್ರಗಳನ್ನು ಭಕ್ತಾದಿಗಳ ಭೇಟಿಗೆ ಮುಕ್ತಗೊಳಿಸಲಾಗುವುದು. ಹೊಟೇಲ್ ಗಳು, ರೆಸ್ಟೋರೆಂಟ್ ಗಳು ಮತ್ತು ಇನ್ನಿತರ ಹಾಸ್ಪಿಟಾಲಿಟಿ ಸೇವೆಗಳನ್ನು ಪ್ರಾರಂಭಿಸಲು ಅನುಮತಿ ನೀಡಲಾಗಿದೆ. ಇದರೊಂದಿಗೆ ಶಾಪಿಂಗ್ ಮಾಲ್ ಗಳನ್ನೂ ಸಹ ತೆರೆಯಲು ಅನುಮತಿಯನ್ನು ನೀಡಲಾಗಿದೆ.

Advertisement

ಇನ್ನು ಎರಡನೇ ಹಂತದ ಅನ್ ಲಾಕ್ ನಲ್ಲಿ ಶಾಲಾ, ಕಾಲೇಜುಗಳು, ಶೈಕ್ಷಣಿಕ/ತರಬೇತು/ಕೋಚಿಂಗ್ ಸಂಸ್ಥೆಗಳನ್ನು ತೆರೆಯಲು ಅವಕಾಶವನ್ನು ನೀಡಲಾಗಿದೆ. ಈ ನಿಟ್ಟಿನಲ್ಲಿ ಮಕ್ಕಳ ಹೆತ್ತವರು ಹಾಗೂ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರೊಂದಿಗೆ ಆಯಾಯ ರಾಜ್ಯ ಸರಕಾರಗಳು ಸಭೆ ನಡೆಸಿ ಸೂಕ್ತ ನಿರ್ಧಾರವನ್ನು ಕೈಗೊಳ್ಳುವ ಅಧಿಕಾರವನ್ನು ನೀಡಲಾಗಿದೆ.

ಮತ್ತು ಇಲ್ಲಿ ವ್ಯಕ್ತವಾಗುವ ಅಭಿಪ್ರಾಯಗಳನ್ನು ಆಧರಿಸಿ ಶಿಕ್ಷಣ ಸಂಸ್ಥೆಗಳನ್ನು ಜುಲೈ ತಿಂಗಳಿನಲ್ಲಿ ಪುನರಾರಂಭಿಸಲು ಕೇಂದ್ರ ಅವಕಾಶ ಮಾಡಿಕೊಟ್ಟಿದೆ.

ಕೇಂದ್ರ ಗೃಹ ಸಚಿವಾಲಯದ ಅನುಮತಿಯನ್ನು ಪಡೆದುಕೊಂಡು ಅಂತಾರಾಷ್ಟ್ರೀಯ ಪ್ರಯಾಣಿಕ ವಿಮಾನಗಳ ಸಂಚಾರಕ್ಕೆ ಅವಕಾಶ. ಮೆಟ್ರೋ ರೈಲು ಸೇವೆಗಳನ್ನು ಪುನರಾರಂಭಿಸಲು ಅವಕಾಶ. ಸಿನೆಮಾ ಮಂದಿರಗಳು, ಜಿಮ್ ಗಳ, ಸ್ವಿಮ್ಮಿಂಗ್ ಪೂಲ್ ಗಳ, ಮನರಂಜನಾ ಪಾರ್ಕ್ ಗಳ, ಥಿಯೇಟರ್ ಗಳು, ಬಾರ್ ಹಾಗೂ ಅಡಿಟೋರಿಯಂಗಳ ಕಾರ್ಯಾರಂಭಕ್ಕೆ ಅನುಮತಿ ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next