Advertisement

ಲಾಕ್ ಡೌನ್ 4.0: ಇನ್ನಷ್ಟು ವಲಯಗಳಿಗೆ ರಿಯಾಯ್ತಿ ಸಾಧ್ಯತೆ

08:31 AM May 18, 2020 | Hari Prasad |

ನವದೆಹಲಿ: ಕೋವಿಡ್ ಸೋಂಕು ಪಸರಿಸುವಿಕೆ ನಿಯಂತ್ರಣಕ್ಕಾಗಿ ಕೇಂದ್ರ ಸರಕಾರವು ಮಾರ್ಚ್ 25ರಂದು ವಿಧಿಸಿದ್ದ ದೇಶವ್ಯಾಪಿ ಲಾಕ್ ಡೌನ್ ಇದೀಗ ಮೂರನೇ ಹಂತವನ್ನು ಪೂರೈಸಿ ನಾಲ್ಕನೇ ಹಂತಕ್ಕೆ ಕಾಲಿರಿಸಿದೆ.

Advertisement

ಮೊದಲೆರಡು ಹಂತಗಳಲ್ಲಿ ಬಿಗುವಾಗಿದ್ದ ಲಾಕ್ ಡೌನ್ ಸ್ಥಿತಿಯನ್ನು ಮೂರನೇ ಹಂತದಲ್ಲಿ ಬಹಳಷ್ಟು ಸಡಿಲಗೊಳಿಸಲಾಗಿತ್ತು. ಮತ್ತು ಕಂಟೈನ್ ಮೆಂಟ್ ಪ್ರದೇಶಗಳನ್ನು ಹೊರತುಪಡಿಸಿ ಉಳಿದ ಭಾಗಗಳಲ್ಲಿ ಹಲವಾರು ಆರ್ಥಿಕ ಚಟುವಟಿಕೆಗಳಿಗೆ ಷರತ್ತುಬದ್ಧ ಅನುಮತಿಯನ್ನು ನೀಡಲಾಗಿತ್ತು.

ಇದೀಗ ಮೇ 18ರ ಸೋಮವಾರದಿಂದ ಎರಡು ವಾರಗಳ ಕಾಲ ಲಾಕ್ ಡೌನ್ ಮುಂದುವರೆಸಿ ಕೇಂದ್ರ ಗೃಹ ಸಚಿವಾಲಯ ಎಲ್ಲಾ ರಾಜ್ಯಗಳಿಗೆ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಈಗಾಗಲೇ ನಿರ್ದೇಶನವನ್ನು ನೀಡಿದೆ.

ನಾಲ್ಕನೇ ಹಂತದ ಲಾಕ್ ಡೌನ್ ನ ಮಾರ್ಗಸೂಚಿಗಳು ಇನ್ನೇನು ಕೆಲವೇ ಹೊತ್ತಿನಲ್ಲಿ ಕೇಂದ್ರದಿಂದ ಬಿಡುಗಡೆಯಾಗಲಿದೆ. ಈ ನಡುವೆ ಈ ಬಾರಿಯ ಲಾಕ್ ಡೌನ್ ಹೇಗಿರಬಹುದು ಎಂಬ ಅಂದಾಜು ವರದಿ ಇಲ್ಲಿದೆ.

ಈ ಮೊದಲಿದ್ದಂತೇ ಕಂಟೇನ್ಮೆಂಟ್ ಪ್ರದೇಶಗಳನ್ನು ಹೊರತಡುಪಡಿಸಿ ಉಳಿದ ಕಡೆಗಳಲ್ಲಿ ಆಟೋ ರಿಕ್ಷಾಗಳು, ಬಸ್ಸುಗಳು ಮತ್ತು ಕ್ಯಾಬ್ ಗಳ ಓಡಾಟಕ್ಕೆ ಷರತ್ತುಬದ್ಧ ಅನುಮತಿ ಸಿಗುವ ಸಾಧ್ಯತೆಗಳಿವೆ.

Advertisement

ಇದೇ ರೀತಿಯಲ್ಲಿ ದೇಶದ ಎಲ್ಲಾ ಜಿಲ್ಲೆಗಳಲ್ಲಿ ಕಂಟೇನ್ಮೆಂಟ್ ಪ್ರದೇಶಗಳನ್ನು ಹೊರತುಪಡಿಸಿ ಉಳಿದ ಕಡೆಗಳಲ್ಲಿ ಅತ್ಯಗತ್ಯ ವಸ್ತುಗಳ ಜೊತೆಗೆ ಇತರೇ ವಸ್ತುಗಳನ್ನೂ ಗ್ರಾಹಕರಿಗೆ ತಲುಪಿಸಲು ಇ-ಕಾಮರ್ಸ್ ಸಂಬಂಧಿತ ಮಾರ್ಕೆಟಿಂಗ್ ಚಟುವಟಿಕೆಗಳಿಗೆ ಅನುಮತಿ ಸಿಗುವ ಸಾಧ್ಯತೆಗಳಿವೆ.

ಇನ್ನು ಕಛೇರಿ ಹಾಗೂ ಕಾರ್ಖಾನೆಗಳಲ್ಲಿ ಈಗಿರುವ ಸಂಖ್ಯೆಗಿಂತ ಹೆಚ್ಚಿನ ಉದ್ಯೋಗಿಗಳು ಕಾರ್ಯನಿರ್ವಹಿಸಲು ಅನುಮತಿ ಸಿಗುವ ಸಾದ್ಯತೆಗಳಿವೆ. ಸದ್ಯಕ್ಕೆ ಇಲ್ಲೆಲ್ಲಾ 33% ಸಿಬ್ಬಂದಿ ಸಾಮರ್ಥ್ಯಕ್ಕೆ ಅವಕಾಶ ಕಲ್ಪಿಸಲಾಗಿದ್ದು ಇದನ್ನು 50 ಪ್ರತಿಶತಕ್ಕೆ ಏರಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಮತ್ತು ಇದೇ ಸಂದರ್ಭದಲ್ಲಿ ದೇಶಾದ್ಯಂತ ಕೆಂಪು ವಲಯಗಳ ಘೋಷಣೆಯ ಮಾನದಂಡವನ್ನು ಕೇಂದ್ರ ಮರುವ್ಯಾಖ್ಯಾನಿಸುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next