Advertisement

ಲಾಕ್‌ಡೌನ್‌: ಸಹಾಯವಾಣಿಗೆ 300 ಕರೆಗಳು

07:20 PM Apr 19, 2020 | Suhan S |

ಮುಂಬಯಿ,ಎ. 18: ಲಾಕ್‌ ಡೌನ್‌ ಜಾರಿಗೆ ಬಂದಾಗಿನಿಂದ ಆಹಾರ ಮತ್ತು ಆಶ್ರಯದ ಅಗತ್ಯವಿರುವ ವಲಸೆ ಕಾರ್ಮಿಕರಿಂದ ದಿನಕ್ಕೆ ಸರಾಸರಿ 10 ರಿಂದ 20 ರವರೆಗೆ ಸುಮಾರು 300 ಕರೆಗಳು ಬಂದಿವೆ ಎಂದು ಮುಂಬಯಿ ಪೊಲೀಸರು ತಿಳಿಸಿದ್ದಾರೆ.

Advertisement

ಇತ್ತೀಚಿನ ಬಾಂದ್ರಾ ಪರಿಸ್ಥಿತಿಯ ಪುನರಾವರ್ತನೆ ಇಲ್ಲ ಎಂದು ಖಚಿತಪಡಿಸಿಕೊಳ್ಳಲು ಪೊಲೀಸರು ಯಾವ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ಕೇಳಿದಾಗ, ಸುಮಾರು 2,000 ವಲಸೆ ಕಾರ್ಮಿಕರು ಮಂಗಳವಾರ ಮನೆಗೆ ಮರಳಬೇಕೆಂದು ಒತ್ತಾಯಿಸಿ ಬಾಂದ್ರಾ ರೈಲ್ವೇ ನಿಲ್ದಾಣದಲ್ಲಿ ಜಮಾಯಿಸಿದರು. ಮುಂಬಯಿ ಅಶೋಕ್‌, ಎಲ್ಲಾ ಪೊಲೀಸ್‌ ಠಾಣೆಗಳು ಮತ್ತು ಸಂಚಾರ ಪೊಲೀಸರನ್ನು ಕಾರ್ಮಿಕರನ್ನು ವಾಹನಗಳಲ್ಲಿ ಇರಿಸದಂತೆ ಮತ್ತು ನಗರದಿಂದ ಹೊರಗೆ ಕರೆದೊ ಯ್ಯದಂತೆ ಖಚಿತಪಡಿಸಿಕೊಳ್ಳಲು ನಾಕಾಬಂದಿಯನ್ನು ಬಲಪಡಿಸುವಂತೆ ಕೋರಿದ್ದಾರೆ. ಅಗತ್ಯ ಸೇವಾ ವಾಹನಗಳನ್ನು ವಿಶೇಷವಾಗಿ ಪರಿ ಶೀಲಿಸಲಾಗುತ್ತಿದೆ. ವಲಸೆ ಕಾರ್ಮಿಕರು ತಮ್ಮ ಸಮಸ್ಯೆಗಳನ್ನು ಕಂಡುಹಿಡಿಯಲು ಮತ್ತು ಪರಿ ಹರಿಸಲು ಉಳಿದುಕೊಂಡಿರುವ ಪ್ರದೇಶಗಳಲ್ಲಿ ನಾವು ನಮ್ಮ ಗಸ್ತು ಹೆಚ್ಚಿಸಿದ್ದೇವೆ. ಬಿಎಂಸಿಯೊಂದಿಗೆ ನಾವು ಅವರಿಗೆ ಆಹಾರ, ಪಡಿತರದಂತಹ ಮೂಲಭೂತ ಸೌಲಭ್ಯ ಗಳನ್ನು ಪಡೆಯುವುದನ್ನು ಖಾತ್ರಿ ಪಡಿಸಿಕೊಳ್ಳುತ್ತಿದ್ದೇವೆ ಮತ್ತು ಅವರಿಗೆ ವಸತಿ ಸೌಕರ್ಯಗಳಿಲ್ಲದಿದ್ದರೆ, ಎನ್‌ ಜಿಒಗಳ ಸಹಾಯದಿಂದ ನಾವು ಅವರಿಗೆ ಆಶ್ರಯ ಮನೆಗಳಲ್ಲಿ ಸ್ಥಾನ ನೀಡುತ್ತಿದ್ದೇವೆ ಎಂದು ಅಶೋಕ್‌ ಹೇಳಿದರು.

ಪ್ರತಿದಿನ 20 ಕರೆಗಳು ಲಾಕ್‌ಡೌನ್‌ ಆದಾಗಿನಿಂದ 100 ಸಂಖ್ಯೆಯಲ್ಲಿ 300ಕ್ಕೂ ಹೆಚ್ಚು ಫೋನ್‌ ಕರೆಗಳು ಮತ್ತು ವಲಸೆ ಕಾರ್ಮಿಕರಿಂದ ಪ್ರತಿದಿನ 10 ರಿಂದ 20 ಕರೆಗಳು ಬಂದಿವೆ ಎಂದು ಡಿಸಿಪಿ ಅಶೋಕ್‌ ಅವರು ತಿಳಿಸಿದ್ದಾರೆ. ನಾವು ಅವರ ವಿಳಾಸವನ್ನು ತೆಗೆದುಕೊಂಡು ಕರೆ ಮಾಡಿದ ನಂತರ ಪೊಲೀಸ್‌ ತಂಡವನ್ನು ಸ್ಥಳಕ್ಕೆ ಕಳುಹಿಸುತ್ತೇವೆ ಮತ್ತು ಆಹಾರ ಅಥವಾ ಆಶ್ರಯದಂತಹ ಸಮಸ್ಯೆಗಳನ್ನು ಗುರುತಿಸುತ್ತೇವೆ. ನಾವು ಅದನ್ನು ಬಿಎಂಸಿ ಅಥವಾ ಎನ್‌ಜಿಒಗಳ ಸಹಾಯದಿಂದ ಒದಗಿಸುತ್ತೇವೆ ಎಂದು ಅಶೋಕ್‌ ಹೇಳಿದರು. ಮುಂಬಯಿ ನಗರದಲ್ಲಿ 15,000 ರಿಂದ 20,000 ವಲಸೆ ಕಾರ್ಮಿಕರು ವಿವಿಧ ಕಡೆಗಳಲ್ಲಿ ವಾಸಿಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next