Advertisement

ಲಾಕ್‌ ಯುವರ್‌ ಸ್ಮಾರ್ಟ್‌ಫೋನ್‌, ಅನ್ಲಾಕ್‌ ಯುವರ್‌ ಮೈಂಡ್‌

04:46 PM Sep 22, 2020 | Karthik A |

ಸಾಮಾಜಿಕ ಜಾಲತಾಣಗಳಿಗೆ ಮನಸೋತು ನೈಜ ಜೀವನ ಹಾಗೂ ಅಸ್ತಿತ್ವವನ್ನು ಮರೆತು ಬದುಕುವವರ ಸಂಖ್ಯೆ ಹೆಚ್ಚುತ್ತಿದೆ.

Advertisement

ಸಮಾಜದಲ್ಲಿ ಏನೇನು ನಡೆಯುತ್ತಿದೆ? ಪ್ರಕೃತಿಯಲ್ಲಿ ಏನೆಲ್ಲ ಒಳಿತು-ಕೆಡಕು ಘಟಿಸುತ್ತಿದೆ? ಗೆಳೆಯರು-ಬಳಗದವರ ಜೀವನದಲ್ಲಿ ಏನೆಲ್ಲಾ ಆಗುತ್ತಿದೆ? ಎಂದು ತಿಳಿಯಲು, ಅಪಡೇಟ್‌ ಆಗಿರಲು ಸಾಮಾಜಿಕ ಜಾಲತಾಣ ಬಳಸುತ್ತಿದ್ದೇವೆ ಎಂದು ನಾವಂದುಕೊಂಡಿದ್ದೇವೆ.

ಆದರೆ ವಾಸ್ತವ ಬೇರೆ! ನಮಗೆ ಗೊತ್ತಿಲ್ಲದಂತೆಯೇ ನಾಮಗೆ ನಾವು ಇನ್ನೊಬ್ಬರೊಂದಿಗೆ ಹೋಲಿಕೆ ಮಾಡಿಕೊಳ್ಳತೊಡಗಿದ್ದೇವೆ. ಜನ ನಮ್ಮನ್ನು ಹೆಚ್ಚು ಗಮನಿಸದಿದ್ದಾಗ, ಲೈಕ್‌ ಕೊಡದಿದ್ದಾಗ ಮಾನಸಿಕ ಒತ್ತಡಕ್ಕೆ ಒಳಗಾಗಿ ಆತ್ಮವಿಶ್ವಾಸವನ್ನು ಕಳೆದುಕೊಳ್ಳುತ್ತಿದ್ದೇವೆ.

ಇದೂ ಒಂದು ಜೂಜು!
ಸ್ಮಾರ್ಟ್‌ ಫೋನ್‌ಗಳು ತಂತ್ರಜ್ಞಾನ ಹೆಚ್ಚಿದಂತೆಲ್ಲಾ ಹೆಚ್ಚೆಚ್ಚು ಸ್ಮಾರ್ಟ್‌ ಆಗುತ್ತಿವೆ. ಆದರ ಅದರ ಗೀಳಿಗೆ ಬಿದ್ದಿರುವ ಮನುಷ್ಯ ಮಾತ್ರ ಮೂರ್ಖನಾಗುತ್ತಿದ್ದಾನೆ. ಹೀಗೆ ಹೇಳಲು ಕಾರಣವೇನೆಂದರೆ ಫೇಸ್‌ಬುಕ್‌‌, ಇನ್‌ಸ್ಟಾಗ್ರಾಮ್‌, ವಾಟ್ಸಪ್‌ ಸೇರಿದಂತೆ ಅತಿಹೆಚ್ಚು ಬಳಕೆಯಲ್ಲಿರುವ ಜನಪ್ರಿಯ ಆ್ಯಪ್‌ಗ್ಳನ್ನು ಇನ್ನಷ್ಟು ಆಕರ್ಷಣೀಯಗೊಳಿಸಲು, ಜನ ಹೆಚ್ಚು ಇಷ್ಟಪಡುವಂತೆ ಮಾಡಲು ಜತೆಗೆ ಹೆಚ್ಚೆಚ್ಚು ಕಾಲ ಆ ಆ್ಯಪ್‌ನಲ್ಲಿ ಕಾಲ ಕಳೆಯುವಂತೆ ಮಾಡಲು ಕಂಪೆನಿಗಳು ವಿವಿಧ ಮಾರ್ಗಗಳನ್ನು ಹುಡುಕುತ್ತಿರುತ್ತವೆ.

ಅದರಲ್ಲಿ ಅವು ಅನುಸರಿಸುತ್ತಿರುವ ಪ್ರಮುಖ ಮಾರ್ಗ ಎಂದರೆ ಜೂಜಿಗಾಗಿ ಬಳಕೆಯಾಗುವ ತಾಂತ್ರಿಕತೆಯ ಬಳಕೆ. ಒಂದು ಹಂತದಲ್ಲಿ ಸೋತರೂ, ಮತ್ತೆ ಇನ್ನೊಮ್ಮೆ ಗೆಲ್ಲುತ್ತೇವೆ ಎಂಬ ಹುಸಿ ಭರವಸೆ-ವಿಶ್ವಾಸದಿಂದ ಜೂಜಾಡುವಂತೆ. ಮತ್ತೆ ಏನೋ ಇದೆ, ಇನ್ನೇನೋ ಕಾಣಲು ಸಿಗುತ್ತೆ ಎಂಬ ಹಸಿ ಭರವಸೆಯೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ನಮ್ಮ ಅಮೂಲ್ಯ ಸಮಯವನ್ನು ಕಳೆಯುತ್ತಿರುತ್ತೇವೆ.

Advertisement

ದುರ್ಬಲ ಮನಸ್ಸು, ಸ್ಮಾರ್ಟ್‌ಫೋನ್‌ ಅಡಿಕ್ಷನ್‌
ನಾವು ಮಾನಸಿಕ ದುರ್ಬಲರೆಂದು ಯಾರೆಲ್ಲರನ್ನೂ ಕರೆತ್ತೇವೋ, ಅಂಥವರಲ್ಲಿ ಜೂಜಿಗೆ ಬೀಳುವ ವಿಚಿತ್ರ ಮನಃಸ್ಥಿತಿಯೂ ಒಂದು ಹಂತಕ್ಕೆ ನಿರ್ಮಾಣಗೊಂಡಿರುತ್ತೆ. ಇಲ್ಲದ್ದನ್ನೆಲ್ಲಾ ತೋರಿಸಿ, ಅವುಗಳ ಆಕರ್ಷಣೆಗೆ ಬೀಳುವಂತೆ ಮಾಡಿ ಕೊನೆಗೆ ನಮ್ಮನ್ನು ಮಾನಸಿಕವಾಗಿ ಕುಗ್ಗಿಸುವ ಸಂಗತಿಗಳು ಇಂತಹ ಆ್ಯಪ್‌ಗ್ಳಲ್ಲಿ ಸಾಕಷ್ಟಿವೆ. ಮೊದಲಿಗೆ ನಾವು ಕುತೂಹಲಕ್ಕೆ ವಿಷಯಗಳನ್ನು ಗಮನಿಸುತ್ತೇವಾದರೂ, ಅನಂತರದ ಹಂತಗಳಲ್ಲಿ ನಮಗರಿವಿಲ್ಲದಂತೆ ಮೆಲ್ಲನೇ ಅವುಗಳೊಂದಿಗೆ ನಮ್ಮನ್ನು-ನಮ್ಮ ಜೀವನವನ್ನು ಹೋಲಿಕೆ ಮಾಡಿಕೊಳ್ಳತೊಡಗುತ್ತೇವೆ, ಇದಾದ ನಂತರದ ಹಂತದಲ್ಲಿ ಸಣ್ಣಗೆ ನಮ್ಮಲ್ಲಿ ಆತ್ಮವಿಶ್ವಾಸದ ಕೊರತೆ ಮನೆಮಾಡತೊಡಗುತ್ತೆ. ಅದು ಮೆಲ್ಲನೇ ಒತ್ತಡಕ್ಕೆ ಜಾರುತ್ತೆ. ಇದು ನಿರಂತರ ಒಂದು ಸಮಯದವರೆಗೆ ನಡೆದು, ಕೊನೆಯ ಹಂತದಲ್ಲಿ ನಮ್ಮ ಮನಸ್ಸು ದುರ್ಬಲಗೊಂಡು ನಾವು ಅವುಗಳಿಗೆ ಶರಣಾಗಿ, ದಾಸರಾಗಿಬಿಡುತ್ತೇವೆ. ಇದನ್ನೇ ಸ್ಮಾರ್ಟ್‌ಫೋನ್‌ ಅಡಿಕ್ಷನ್‌ ಎಂದು ಕರೆಯುವುದು.

ಹೆಚ್ಚುತ್ತಿರುವ ಆತ್ಮಹತ್ಯೆ
ಜೀವನದಲ್ಲಿ ಕಷ್ಟಗಳು, ಏರಿಳಿತಗಳನ್ನು ಅನುಭವಿಸಿ ಒಂದು ಹಂತಕ್ಕೆ ಗಟ್ಟಿಯಾದ ಮನಸ್ಥಿತಿಯನ್ನು ಬೆಳೆಸಿಕೊಂಡವರು, ಹುಟ್ಟಿನಿಂದ ಗಟ್ಟಿಮನಸ್ಸಿನವರು ಈ ರೀತಿಯ ಸ್ಮಾರ್ಟ್‌ಫೋನ್‌ ಅಡಿಕ್ಷನ್‌ಗೆ ಒಳಗಾಗುವುದು ಕಡಿಮೆ. ಆದರೆ ದುರ್ಬಲ ಮನಸ್ಸಿನವರು, ಈಗೀಗ ಪ್ರಪಂಚದ ಸವಾಲುಗಳಿಗೆ ತೆರೆದುಕೊಳ್ಳುತ್ತಿರುವ ಇನ್ನೂ ಎಳೆ ಮನಸ್ಸಿನ ಯುವಕರು, ಮಕ್ಕಳು ಈ ಗೀಳಿಗೆ ಅಂಟಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. ಇತ್ತೀಚಿನ ಕೆಲವು ಅಧ್ಯಯನಗಳ ಪ್ರಕಾರ ಸ್ಮಾರ್ಟ್‌ಫೋನ್‌/ಸಾಮಾಜಿಕ ಜಾಲತಾಣಗಳನ್ನು ಹೆಚ್ಚಾಗಿ ಬಳಸುತ್ತಿರುವವರಲ್ಲಿ ಆತ್ಮಹತ್ಯೆಯ ಪ್ರಕರಣಗಳು ಹೆಚ್ಚುತ್ತಿವೆ. ತಮ್ಮ ವಾಸ್ತವ ಜೀವನವನ್ನು ಮರೆತು, ಸ್ಮಾರ್ಟ್‌ಫೋನ್ನ ಮಿಥ್ಯ ಪ್ರಪಂಚದಲ್ಲಿಯೇ ಹೆಚ್ಚಿನ ಕಾಲ ಕಳೆದು, ಕೊನೆಗೆ ಅತಿಯಾದ ಒತ್ತಡಕ್ಕೆ ಗುರಿಯಾಗಿ ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚುತ್ತಿದೆ. ಇದರಲ್ಲಿ ಹೆಚ್ಚಿನವರು ಮಕ್ಕಳು ಮತ್ತು ಯುವಕರು!

ದೊಡ್ಡವರಲ್ಲಿ ಸ್ಮಾರ್ಟ್‌ಫೋನ್‌ ಗೀಳು
ಇತ್ತೀಚಿನ ದಿನಗಳಲ್ಲಿ ಪೋಷಕರು, ಮನೆಯ ಹಿರಿಯರು(ಉದಾಹರಣೆಗೆ ನಿವೃತ್ತಿ ಜೀವನ ಕಳೆಯುತ್ತಿರುವವರು, ಜವಾಬ್ದಾರಿಗಳನ್ನು ಪೂರೈಸಿ ಜೀವನದ ಸಂಧ್ಯಾಕಾಲದಲ್ಲಿರುವವರು) ಕೂಡ ಸ್ಮಾರ್ಟ್‌ಫೋನ್‌ ಹೆಚ್ಚಾಗಿ ಬಳಸುತ್ತಿರುವುದನ್ನು ನೋಡುತ್ತಿದ್ದೇವೆ. ಜೀವನದ ಕೆಲವು/ಹಲವು ಸಾಧಕ-ಬಾಧಕಗಳ ಅನುಭವ ಇರುವ ಇವರು ಕೇವಲ ಟೈಮ್‌-ಪಾಸ್‌ ಮಾಡಲು ಅಥವಾ ತಮ್ಮ ಮೆದುಳಿಗೆ ಒಂದಷ್ಟು ಕೆಲಸ ಕೊಡಲು ಇಂತಹ ಅಭ್ಯಾಸ ಬೆಳೆಸಿಕೊಂಡಿರುವ ಸಾಧ್ಯತೆ ಇರುತ್ತದೆ. ಹಾಗಾಗಿ ಇದನ್ನು ಅಡಿಕ್ಷನ್‌ ಅಥವಾ ಅಪಾಯಕಾರಿ ಅಭ್ಯಾಸ ಎಂದು ಹೇಳಲು ಬರುವುದಿಲ್ಲ. ಇಂಥವರು ಸಮಯ ಬಂದಾಗ ಇತರೆ ವಿಷಯಗಳ ಕಡೆ ಗಮನ ಹರಿಸುವ, ತುರ್ತು ಸಂದರ್ಭಗಳು ಬಂದಾಗ ಅವುಗಳನ್ನು ಎದುರಿಸುವ ಸಹಜವಾದ ಸಾಮರ್ಥ್ಯವನ್ನೂ ಹೊಂದಿರುತ್ತಾರೆ. ಹಾಗಾಗಿ ಇದನ್ನು ಅಪಾಯಕಾರಿ ಅಭ್ಯಾಸ ಎಂದು ಹೇಳಲು ಬರುವುದಿಲ್ಲ. ಇದರಿಂದ ಅವರಲ್ಲಿ ಒತ್ತಡ ಉಂಟಾಗುವ ಸಾಧ್ಯತೆಯೂ ಕಡಿಮೆ! ಹಾಗಾಗಿ ಇಂತಹ ವಿಚಾರಗಳಲ್ಲಿ ಯುವಕರು ಮತ್ತು ಮಕ್ಕಳು ತಮ್ಮನ್ನು ಅವರೊಂದಿಗೆ ಹೋಲಿಕೆ ಮಾಡಿಕೊಳ್ಳುವುದು ಸರಿಯಲ್ಲ. ಸ್ಮಾರ್ಟ್‌ಫೋನ್‌ ಅವರ ಮೇಲೆ ಒಂದಷ್ಟು ಖುಣಾತ್ಮಕ ಪರಿಣಾಮ ಬೀರುತ್ತಿದ್ದರೂ, ಅದನ್ನು ಎದುರಿಸುವ, ಗೀಳಿನ ಸಾಧ್ಯತೆಯಿಂದ ಹೊರಬರುವ ಮಾನಸಿಕ ಸಾಮರ್ಥ್ಯ ಅವರಲ್ಲಿರುತ್ತದೆ. ಹಾಗಾಗಿ ಅವರಿಗೆ ಹೋಲಿಕೆ ಮಾಡಿಕೊಂಡು ಅಥವಾ ಪೈಪೋಟಿಗೆ ಬಿದ್ದು ಸ್ಮಾರ್ಟ್‌ಫೋನ್‌ ಬಳಕೆಯ ಅಭ್ಯಾಸ ಮಾಡಿಕೊಳ್ಳುವುದು ಸರಿಯಲ್ಲ.

ಲಾಕ್‌ ಯುವರ್‌ಸ್ಮಾರ್ಟ್‌ಫೋನ್‌, ಅನ್ಲಾಕ್‌‌ ಯುವರ್‌ಮೈಂಡ್‌‌
ಈ ಸ್ಮಾರ್ಟ್‌ಫೋನ್ನ ಸಹವಾಸದಿಂದಾಗಿ ಮಕ್ಕಳು ತಮ್ಮ ಆಟ-ಪಾಠ ಮರೆಯುತ್ತಿದ್ದಾರೆ. ಯುವಕರು ತಮ್ಮ ಸಾಧನೆ, ನೀವನ ಕಟ್ಟಿಕೊಳ್ಳುವ ಮಾರ್ಗವನ್ನು(ಕೆರಿರ್ಯ) ಮರೆಯುತ್ತಿದ್ದಾರೆ. ಹಾಗಾಗಿ ಮುಂದೆ ಈ ಇಬ್ಬರಿಗೂ ಸಮಸ್ಯೆ ಅಥವಾ ಜೀವನ ಸವಾಲು ಕಟ್ಟಿಟ್ಟ ಬುತ್ತಿ. ಆದ್ದರಿಂದ ಮಕ್ಕಳು ಗೈಮ್‌ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಎಷ್ಟು ಹಣ ಕೊಟ್ಟರೂ ಬಾರದ ತಮ್ಮ ಅಮೂಲ್ಯವಾದ ಸಮಯವನ್ನು ವ್ಯಯ ಮಾಡದೇ, ತಮ್ಮ ಮನಸ್ಥಿತಿಯನ್ನು ಹಾಳು ಮಾಡಿಕೊಳ್ಳದೇ, ಕಲಿಕೆ, ರಚನಾತ್ಮಕ ಹಾಗೂ ಗುಣಾತ್ಮಕ ಕಾರ್ಯಗಳಲ್ಲಿ ತೊಡಗಿಸಿಕೊಂಡು, ಆತ್ಮವಿಶ್ವಾಸ ಜೊತೆಗೆ ಸಾಧನೆಯ ಮಾರ್ಗ ಕಟ್ಟಿಕೊಳ್ಳಬೇಕು. ಹಾಗಿದ್ದಾಗ ಮಾತ್ರ ನಾವಂದುಕೊಂಡದ್ದನ್ನು ಸಾಧಿಸಿ, ಎಲ್ಲರಿಂದ ಭೇಷ್‌ ಎನ್ನಿಸಿಕೊಂಡು ಸುಖ, ಸಮೃದ್ಧಯ ಜೀವನ ನಡೆಸಲು ಸಾಧ್ಯವಾಗುತ್ತೆ.

 ವಿಜಯ್‌ ಎ. ಸರೋದೆ, ರಾಯಚೂರು 

 

 

Advertisement

Udayavani is now on Telegram. Click here to join our channel and stay updated with the latest news.

Next