Advertisement

ತಾಪಂ ಕಚೇರಿಗೆ ಬೀಗ-ಪ್ರತಿಭಟನೆ

11:47 AM Jan 29, 2020 | Team Udayavani |

ಬಾಗಲಕೋಟೆ: ತಾಲೂಕಿನ ಶೀಗಿಕೇರಿ ಗ್ರಾಮದ ಸರ್ಕಾರಿ ಗೋಮಾಳ ಜಾಗೆಯನ್ನು ಅಕ್ರಮವಾಗಿ ಮಾರಾಟ ಮಾಡಿದ್ದಾರೆ ಎಂದು ಆರೋಪಿಸಿ ಮಹಿಳೆಯರು ತಾಪಂ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು.

Advertisement

ನವನಗರದ ತಾಪಂಕಚೇರಿಗೆ ಬೀಗ ಜಡಿದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಮಹಿಳೆಯರು, ಗ್ರಾಮದ ರಿಸಿನಂ 124/1ಎ ಕ್ಷೇತ್ರದ ಪೈಕಿ 5-35 ಗುಂಟೆ ಸರ್ಕಾರದ ಗೋಮಾಳ ಜಾಗೆಯನ್ನು ಜನರಿಗೆ ಅಕ್ರಮವಾಗಿ ಮಾರಾಟ ಮಾಡಿದ್ದಾರೆ. ಶಿಗಿಕೇರಿ ಗ್ರಾಮದ ಹಿಂದಿನ ಪಿಡಿಒ ಮತ್ತು ಸದ್ಯ ಕಾರ್ಯನಿರ್ವಹಿಸುತ್ತಿರುವ ಪಿಡಿಒ ಹಾಗೂ ಶಿರಗುಪ್ಪಿ ತಾಂಡಾದ ಮಹಿಳಾಸದಸ್ಯರು ಸೇರಿಕೊಂಡು ಸರ್ಕಾರದ ಜಾಗವನ್ನು ಒಬ್ಬ ವ್ಯಕ್ತಿಯಿಂದ ರೂ.4 ಲಕ್ಷ ಪಡೆದು ಕನಿಷ್ಠ 35 ಜನರಿಗೆ ಮಾರಾಟ ಮಾಡಿದ್ದಾರೆ. ಆ ಜಾಗದಲ್ಲಿ ಮನೆಯನ್ನು ಕಟ್ಟಿಕೊಂಡಿದ್ದಾರೆ. ಅಲ್ಲದೇ ಸರ್ಕಾರಿ ಜಾಗ ಖಾಸಗಿಯವರಿಗೆ ಮಾರಾಟ ಮಾಡಿ, ಗಣಕೀಕೃತ ಪಹಣಿ ಕೂಡ ನೀಡಲಾಗಿದೆ ಎಂದು ಮಹಿಳೆಯರು ಆರೋಪಿಸಿದರು.

ಅಕ್ರಮ ಎಸಗಿದ ಪಿಡಿಒ ಮತ್ತು ಮಹಿಳಾ ಸದಸ್ಯರ ವಿರುದ್ಧ ಕ್ರಮ ಕೈಗೊಳ್ಳಬೇಕು. ಸೂಕ್ತ ತನಿಖೆ ಮಾಡಿ ನ್ಯಾಯ ದೊರಕಿಸಬೇಕು ಎಂದು ಒತ್ತಾಯಿಸಿದರು. ಗ್ರಾಮದ ದಾನಮ್ಮದೇವಿ ಸಂಘದ ಅಧ್ಯಕ್ಷೆ ಶಂಕ್ರವ್ವ ಮಾಚಕನೂರ, ಉಪಾಧ್ಯಕ್ಷ ರೇಣವ್ವ ಕಮತರ ಮುಂತಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next