Advertisement

ಬಾರ್‌ಗಳಿಗೆ ಬೀಗ: ಹಿಂಬಾಗಿಲಿನಿಂದ ಮದ್ಯ ಮಾರಾಟ

06:07 PM Apr 22, 2020 | mahesh |

ಬಂಗಾರಪೇಟೆ: ತಾಲೂಕಿನಲ್ಲಿರುವ ಬಾರ್‌ಗಳಿಗೆ ಅಬಕಾರಿ ಇಲಾಖೆ ಬೀಗ ಹಾಕಿ ಸೀಲ್‌  ಮಾಡಿದ್ದರೂ ಅಕ್ರಮ ವಾಗಿ ದುಬಾರಿ ಬೆಲೆಗೆ ಮದ್ಯ ಮಾರಾಟ ಮಾಡುತ್ತಿರುವ ಪ್ರಕರಣಗಳು ನಡೆಯುತ್ತಿವೆ. ಇದಕ್ಕೆ ತಾಲೂಕಿನ ಕಾಮ ಸಮುದ್ರ ದಲ್ಲಿ ಸಿಕ್ಕಿರುವ ಮದ್ಯದ ಪ್ಯಾಕೆಟ್‌ಗಳೇ ಸಾಕ್ಷಿ. ತಾಲೂಕಿನಲ್ಲಿ 80ಕ್ಕೂ ಹೆಚ್ಚು ಬಾರ್‌ಗಳಿದ್ದು, ಅಬಕಾರಿ ಇಲಾಖೆಯವರು ಮುಂಬಾಗಿಲಿಗೆ
ಮಾತ್ರ ಬೀಗ ಹಾಕಿ, ಸೀಲ್‌ ಮಾಡಿದ್ದಾರೆ. ಆದರೆ, ಮಾಲಿಕರು ಹಿಂಬಾಗಿಲಿ ನಿಂದ ಮದ್ಯ ವನ್ನು ಹೊರತಂದು ಅಕ್ರಮವಾಗಿ ಮಾರಾಟ ಮಾಡುತ್ತಿದ್ದಾರೆ. ಪಟ್ಟಣ ಸೇರಿದಂತೆ ಬೂದಿ
ಕೋಟೆ, ಕಾಮಸಮುದ್ರ ಹೋಬಳಿ, ವಿ. ಕೋಟೆ ಗಡಿ ಭಾಗ, ರಾಜ್‌ಪೇಟ್‌ ರೋಡ್‌ ಬಳಿ ಇರುವ ಬಾರ್‌ಗಳಲ್ಲಿ ಶೇಖರಣೆ ಮಾಡಿದ್ದ ಮದ್ಯ ಅಕ್ರಮವಾಗಿ ಮಾರಾಟ ಮಾಡಲಾಗಿದೆ ಎನ್ನಲಾಗುತ್ತಿದೆ. ಪಟ್ಟಣದ ಬಸ್‌ ನಿಲ್ದಾಣದಲ್ಲಿರುವ ಕಳಿಂಗ ಬಾರ್‌ನಲ್ಲಿ ಭಾನುವಾರ ರಾತ್ರಿ ಶೇಖರಣೆ ಮಾಡಲಾಗಿದ್ದ 508 ಪ್ಯಾಕೇಟ್‌ ಮದ್ಯವನ್ನು ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದ ಸಂದರ್ಭದಲ್ಲಿ ಕಾಮಸಮುದ್ರ ಪೊಲೀ ಸರು ಮಾಲು ಸಮೇತ ಸೆರೆಹಿಡಿದ್ದಾರೆ.

Advertisement

ಲಾಕ್‌ಡೌನ್‌ ಆಗಿರುವ ಈ ಸಮಯದಲ್ಲಿ ಬಾರ್‌ಗಳ ಮಾಲಿಕರು ಅಕ್ರಮ ವಾಗಿ ಮದ್ಯ ವನ್ನು ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ ಎಂಬ ಆರೋಪಗಳು ಸ್ಥಳೀಯವಾಗಿ ಕೇಳಿ ಬರುತ್ತಿದೆ. ಕೂಡಲೇ ಅಬಕಾರಿ ಇಲಾಖೆ ಯವರು ಲಾಕ್‌ಡೌನ್‌ ಆದಾಗಿ ನಿಂದ ಶೇಖ ರಣೆಯಾಗಿರುವ ಮದ್ಯದ ಸ್ಟಾಕ್‌ ಅನ್ನು ಪರಿಶೀಲಿಸಿ, ಅಕ್ರಮವಾಗಿ ಮದ್ಯ ಮಾರಾಟ ಮಾಡುವ ಬಾರ್‌ಗಳ ವಿರುದ್ಧ ಕ್ರಮ ಕೈಗೊಳ್ಳಬೇಕಾಗಿದೆ.

ಕಾಮಸಮುದ್ರದಲ್ಲಿ 508 ಮದ್ಯದ ಪ್ಯಾಕೆಟ್‌ಗಳು ಸಿಕ್ಕಿವೆ. ಇದು ಯಾವ ಬಾರ್‌ಗೆ ಸೇರಿದೆ ಎಂಬುದರ ಬಗ್ಗೆ ತನಿಖೆ ಮಾಡಬೇಕಾಗಿದೆ. ಅಬಕಾರಿ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇರುವುದರಿಂದ ದೂರು ದಾಖಲಿಸಲು ವಿಳಂಬವಾಗುತ್ತಿದೆ. ಬಸ್‌ ನಿಲ್ದಾಣದ ಬಳಿ ಇರುವ ಕಳಿಂಗ ಬಾರ್‌ಗೆ ಸೇರಿದ ಐದು ಜನರ ಮೇಲೆ ಎಫ್ಐಆರ್‌ ದಾಖಲಿಸಲಾಗಿದೆ. ಲಾಕ್‌ ಆಗಿರುವ ಮದ್ಯವನ್ನು ಅಕ್ರಮ ವಾಗಿ ಮಾರಾಟ ಮಾಡಿದ್ದಲ್ಲಿ ಅಬಕಾರಿ ಇಲಾಖೆಯಿಂದ ಮೇಲಧಿಕಾರಿ ಗಳಿಂದ ಸೂಚನೆ ಬಂದಲ್ಲಿ ಎಲ್ಲಾ ಬಾರ್‌ ಗಳಲ್ಲಿ ಸ್ಟಾಕ್‌ ಅನ್ನು ಚೆಕ್‌ ಮಾಡಿ ಸೂಕ್ತ ಕ್ರಮಕೈಗೊಳ್ಳಲಾಗುವುದು.
●ಆರ್‌.ಸುಮಾ, ಸರ್ಕಲ್‌ ಇನ್ಸ್‌ಪೆಕ್ಟರ್‌, ಅಬಕಾರಿ ಇಲಾಖೆ

Advertisement

Udayavani is now on Telegram. Click here to join our channel and stay updated with the latest news.

Next