Advertisement
ಕೋವಿಡ್ ಆಸ್ಪತ್ರೆ, ಫೀವರ್ ಕ್ಲಿನಿಕ್, ಕ್ವಾರಂ ಟೈನ್ ಕೇಂದ್ರಗಳ ಪರಿಸ್ಥಿತಿ, ದಿನಸಿ, ತರಕಾರಿಕೊಳ್ಳಲು ಜನ ಸಾಮಾನ್ಯರಿಗೆ ಕಲ್ಪಿಸಿರುವ ಅನು ಕೂಲ, ಉಚಿತ ಹಾಲು ವಿತರಣೆ ಇತ್ಯಾದಿಗಳನ್ನು ಕುರಿತ ಫ್ಯಾಕ್ಟ್ ಚೆಕ್ ಇಲ್ಲಿದೆ ಕೆಳಗಿನಂತಿದೆ. ಪಡಿತರ ವಿತರಣೆ: ಬಿಪಿಎಲ್‌ಗೆ 2 ತಿಂಗಳ ಪಡಿತರ ವಿತರಿಸಲಾಗುತ್ತಿದೆ. ಜಿಲ್ಲೆಯಲ್ಲಿ 2.91 ಲಕ್ಷ ಮಂದಿ ಬಿಪಿಎಲ್ ಪಡಿತರದಾರರಿದ್ದು, ಅವರಿಗೆ 96,980 ಕ್ವಿಂಟಲ್ ಅಕ್ಕಿ, 10 ಕ್ವಿಂಟಲ್ ಗೋಧಿ ವಿತರಣೆ ಮಾಡಲಾಗುತ್ತಿದೆ.
Related Articles
Advertisement
ಅಂತರವಿರಲಿ: ಹಾಪ್‌ಕಾಮ್ಸ್ ದಿನವಿಡೀ ತೆರೆಯುತ್ತಿದೆ. ದಿನಸಿ ಅಂಗಡಿಗಳಲ್ಲಿ, ತರಕಾರಿ ಕೊಳ್ಳಲು ಸಾಮಾಜಿಕ ಅಂತರ ಕಟ್ಟುನಿಟ್ಟಾಗಿ ಪಾಲಿಸಬೇಕು. ಜಿಲ್ಲೆಯ 10 ಸಾವಿರ ಕುಟುಂಬಗಳಿಗೆ ತಲಾ ಒಂದು ಲೀಟರ್ ಉಚಿತ ಹಾಲು ವಿತರಿಸಲಾಗುತ್ತಿದೆ. 66 ಸ್ಲಂಗಳ 9005 ಕುಟುಂಬ, 600 ಮಂದಿ ವಲಸಿಗ ಕಾರ್ಮಿಕರು, ಹೊರಗಿನಿಂದ ಬಂದ 150 ಕಟ್ಟಡ ಕಾರ್ಮಿಕರ ಕುಟುಂಬಗಳಿಗೆ ಹಾಲನ್ನು ವಿತರಿಸಲಾಗುತ್ತಿದೆ.
ಆಸ್ಪತ್ರೆಗಳಲ್ಲೂ ಅಗತ್ಯ ಸೌಲಭ್ಯ : ಜಿಲ್ಲಾಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯನ್ನಾಗಿ ಪರಿವರ್ತಿಸ ಲಾಗಿದೆ. ಇಲ್ಲಿ 18 ಹಾಸಿಗೆಗಳ ಐಸೋಲೇಷನ್ ವಾರ್ಡ್ ಇದೆ. 100 ಹಾಸಿಗೆಗಳ ವಾರ್ಡ್, 50 ಹಾಸಿಗೆಗಳ ಐಸಿಯು ಕೇರ್ ಸೆಂಟರ್ ಸಿದ್ಧವಾಗುತ್ತಿದೆ. ಪ್ರಸ್ತುತ 4 ವೆಂಟಿಲೇಟರ್ ಇದ್ದು, ಇನ್ನೂ 10 ವೆಂಟಿಲೇಟರ್‌ಗಳನ್ನು ಬೆಂಗಳೂರಿನಿಂದ ತರಿಸಿಕೊಳ್ಳಲಾಗುತ್ತಿದೆ. ವಾರದಲ್ಲಿ ಸಿದ್ಧವಾಗಲಿವೆ ಎಂದು ಡಿಎಚ್‌ಒ ಡಾ.ಎಂ.ಸಿ.ರವಿ ತಿಳಿಸಿದರು.
ಐಸೋಲೇಷನ್: ನಗರದ ಸರ್ಕಾರಿ ಮೆಡಿಕಲ್ ಕಾಲೇಜು, ಸರ್ಕಾರಿ ಎಂಜಿನಿಯ ರಿಂಗ್ ಕಾಲೇಜು, ಜೆಎಸ್‌ಎಸ್ ಆಸ್ಪತ್ರೆ, ಹೋಲಿಕ್ರಾಸ್, ಬಸವ ರಾಜೇಂದ್ರ ಆಸ್ಪತ್ರೆ ಸೂಪರ್‌ವೈಸ್ ಐಸೋಲೇಷನ್ ಸೆಂಟರ್‌ಗಳಾಗಿ ಪರಿವರ್ತಿಸಲಾಗಿದೆ.
ಕ್ವಾರಂಟೈನಲ್ಲಿ ಅಗತ್ಯ ವ್ಯವಸ್ಥೆ : ಚಾಮರಾಜನಗರದಲ್ಲಿ 2, ಗುಂಡ್ಲುಪೇಟೆ, ಯಳಂದೂರು, ಹನೂರಿನಲ್ಲಿ ತಲಾ ಒಂದೊಂದು ಫೀವರ್ ಕ್ಲಿನಿಕ್ ಇವೆ. ಅಂಬೇಡ್ಕರ್ ಭವನವನ್ನು ಕ್ವಾರಂಟೈನ್ ಕೇಂದ್ರವಾಗಿ ಪರಿವರ್ತಿಸಲಾಗಿದ್ದು ಊಟ, ಟೀವಿ, ಪತ್ರಿಕೆ, ಮ್ಯಾಗ ಜೀನ್, ಒಳಾಂಗಣ ಆಟದ ಸೌಲಭ್ಯವಿದ್ದು 10 ಮಂದಿ ಕ್ವಾರಂ ಟೈನ್‌ನಲ್ಲಿದ್ದಾರೆ. 191 ಮಂದಿ ಅವಧಿ ಪೂರ್ಣಗೊಳಿಸಿದ್ದಾರೆಂದು ಡಿಎಚ್‌ಒ ಡಾ.ರವಿ ತಿಳಿಸಿದ್ದಾರೆ.
– ಕೆ.ಎಸ್. ಬನಶಂಕರ ಆರಾಧ್ಯ