Advertisement

ರಾಚವಿ ವಿಸ್ತರಣೆಗೆ ಸ್ಥಳ ಪರಿಶೀಲನೆ

11:55 AM Jun 01, 2020 | Suhan S |

ಹಿರೇಬಾಗೇವಾಡಿ: ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಅಭಿವೃದ್ಧಿ ನಿಟ್ಟಿನಲ್ಲಿ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಸ್ಥಳ ಪರಿಶೀಲನೆ ನಡೆಸಿದರು.

Advertisement

ಈ ಸಂದರ್ಭದಲ್ಲಿ ಅವರು ಮಾತನಾಡಿ, ಹಿರೇಬಾಗೇವಾಡಿ ಗ್ರಾಮದ ಮಲ್ಲಪ್ಪನ ಗುಡ್ಡದ ಸರಕಾರಿ ಗಾಯರಾಣ ಪ್ರದೇಶ ರಾಚವಿ ವಿಸ್ತರಣೆಗೆ ಸೂಕ್ತವಾಗಿದ್ದು, ಇದು ಬೆಳಗಾವಿ ನಗರ ಹಾಗೂ ರಾಷ್ಟ್ರೀಯ ಹೆದ್ದಾರಿಗೆ ಸಮೀಪವಾಗಿದೆ.ಆದಷ್ಟು ಬೇಗನೆ ಮುಖ್ಯಮಂತ್ರಿಯವರೊಡನೆ ಚರ್ಚೆ ಮಾಡಿ ಸ್ಥಳ ಮಂಜೂರು ಮಾಡಿಸುವುದಾಗಿ ತಿಳಿಸಿದರು.

ಅಲ್ಲದೇ ಬೆಳಗಾವಿ-ಧಾರವಾಡ ರೈಲು ಮಾರ್ಗ ಇಲ್ಲಿಂದಲೇ ಹಾದು ಹೋಗುವುದರಿಂದ ವಿ.ವಿ ಅಭಿವೃದ್ಧಿಗೆ ಅನುಕೂಲವಾಗುವಂತೆ ಕೇಂದ್ರ ಮತ್ತುರಾಜ್ಯಸರ್ಕಾರದ ಜೊತೆ ಚರ್ಚಿಸಿ ರೇಲ್ವೆ ನಿಲ್ದಾಣ ಮಾಡಿಸುವುದಾಗಿ ಹೇಳಿದರು.

ರಾಚವಿ ಕುಲಪತಿ ಪ್ರೊ| ರಾಮಚಂದ್ರಗೌಡ ಮಾತನಾಡಿ, ಈಗಿನ ವಿಶ್ವವಿದ್ಯಾಲಯ ಪ್ರದೇಶವು ಕೇಂದ್ರದ ಅರಣ್ಯ ಮತ್ತು ಪರಿಸರ ಇಲಾಖೆಯ ಅಧೀನದಲ್ಲಿರುವುದರಿಂದ ಯಾವುದೇ ರೀತಿ ಅಭಿವೃದ್ಧಿಗೆ ಅವಕಾಶವಿಲ್ಲದೆ ವಿ.ವಿ ಬೆಳವಣಿಗೆಗೆ ಅಡ್ಡಿಯಾಗಿದೆ ಎಂದರು.

ರಾಚವಿ ಹೋರಾಟ ಸಮಿತಿ ಸಂಚಾಲಕ ಮಂಜುನಾಥ ವಸ್ತ್ರದ ಮಾತನಾಡಿ, ವಿವಿ ವಿಸ್ತರಣೆಗೆ ಗಾಯರಾಣ ಜಾಗವನ್ನು ಹಸ್ತಾಂತರಿಸುವುದು ಈ ಭಾಗದ ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗಲಿದೆ ಎಂದು ನುಡಿದರು.

Advertisement

ವಿವಿ ಕುಲಸಚಿವ ಬಸವರಾಜ ಪದ್ಮಶಾಲಿ, ಮೌಲ್ಯಮಾಪನ ಕುಲಸಚಿವ ಹುರಕಡ್ಲಿ, ಹಣಕಾಸು ಅಧಿಕಾರಿ ಪ್ರೊ| ಡಿ.ಎನ್‌.ಪಾಟೀಲ, ಪ್ರಾಚಾರ್ಯ ಎಂ. ಜಯಪ್ಪ, ನ್ಯಾಯವಾದಿ ಆರ್‌.ಎನ್‌. ಪಾಟೀಲ, ಗ್ರಾಮಸ್ಥರಾದ ವೈಜುಗೌಡಾ ಪಾಟೀಲ, ಎನ್‌.ಎಸ್‌.ಪಾಟೀಲ, ಸಿದ್ದಾರೂಡ ಹೊನ್ನನ್ನವರ, ಬಾಪು ನಾವಲಗಟ್ಟಿ, ಯಲ್ಲಪ್ಪ ಧರೆಣ್ಣವರ, ರಾಜು ಹಂಚಿನಮನಿ, ರಾಜು ರೊಟ್ಟಿ, ಶ್ರೀಶೈಲ ಪಡಗಲ್‌, ಯೂಕೂಬ ದೇವಲಾಪೂರ, ಇತರರು ಇದ್ದರು

Advertisement

Udayavani is now on Telegram. Click here to join our channel and stay updated with the latest news.

Next