Advertisement

ವಾರ್ಡ್ ಸಮಸ್ಯೆ ಪರಿಹರಿಸದ ನಗರಸಭೆ ಸದಸ್ಯನನ್ನು ಕೂಡಿ ಹಾಕಿ ಆಕ್ರೋಶ ವ್ಯಕ್ತಪಡಿಸಿದ ಸ್ಥಳೀಯರು

06:03 PM Jul 27, 2023 | Team Udayavani |

ಗದಗ: ವಾರ್ಡ್ ಸಮಸ್ಯೆ ಪರಿಹರಿಸಲು ನಿರ್ಲಕ್ಷಿಸಿದ ಆರೋಪದ ಮೇಲೆ ಸ್ಥಳೀಯ ನಿವಾಸಿಗಳು ನಗರಸಭೆ ಸದಸ್ಯನನ್ನು ಗಂಟೆಗೂ ಅಧಿಕ ಕಾಲ ಕೊಠಡಿಯಲ್ಲಿ ಕೂಡಿ ಹಾಕಿದ ಘಟನೆ ಸ್ಥಳೀಯ ಬಣ್ಣದ ನಗರದಲ್ಲಿ ಗುರುವಾರ ನಡೆದಿದೆ.

Advertisement

ನಗರಸಭೆ ಮೂರನೇ ವಾರ್ಡಿನ ಸದಸ್ಯ ಮಾಧುಸಾ ಮೇರವಾಡೆ ಅವರನ್ನು ಸ್ಥಳೀಯ ಮಹಿಳೆಯರು ಕೂಡಿ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಸದಸ್ಯ ಮಾಧುಸಾ ಅವರನ್ನು ಬಿಡುಗಡೆಗೊಳಿಸಿದರು.

ನಗರಸಭೆ 3ನೇ ವಾರ್ಡ್ ನ ಬಣ್ಣದ ನಗರವು ಮೂಲಸೌಲಭ್ಯಗಳಿಂದ ವಂಚಿತವಾಗಿದೆ. ಕುಡಿಯುವ ನೀರು ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲ. ರಸ್ತೆಗಳು ಹದಗೆಟ್ಟಿವೆ. ಬೀದಿ ದೀಪಗಳಿಲ್ಲದೇ ಸ್ಥಳೀಯ ನಿವಾಸಿಗಳಿಗೆ ಸಂಚರಿಸಲು ಸಮಸ್ಯೆ ಆಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದನ್ನೂ ಓದಿ:Gyanvapi mosque ಸರ್ವೆ ಆದೇಶವನ್ನು ಕಾಯ್ದಿರಿಸಿದ ಅಲಹಾಬಾದ್ ಕೋರ್ಟ್

ಬಣ್ಣದ ನಗರವು ಮೂಲಸೌಲಭ್ಯಗಳನ್ನು ಕಲ್ಪಿಸುವಂತೆ ನಗರಸಭೆ ಸದಸ್ಯ ಮಾಧುಸಾ ಮೇರವಾಡೆ ಅವರಿಗೆ ಹಲವಾರು ಬಾರಿ ಗಮನಕ್ಕೆ ತಂದಿದ್ದರೂ, ಸಮಸ್ಯೆಗೆ ಸ್ಪಂಧಿಸದ ಕಾರಣ ಆಕ್ರೋಶಗೊಂಡ ಸ್ಥಳೀಯ ನಿವಾಸಿಗಳು ನಗರದ ಈಶ್ವರ ಸೇವಾ ಟ್ರಸ್ಟ್ ಕಮೀಟಿ ಕಚೇರಿಯ ಕೊಠಡಿಯಲ್ಲಿ ಕೂಡಿಹಾಕಿದರು. ಇದರಿಂದ ವಿಚಲಿತಗೊಂಡ ಸದಸ್ಯ ಮಾಧುಸಾ ಅವರು ವಿಷಯ ತಿಳಿಸಲು ನಗರಸಭೆ ಪೌರಾಯುಕ್ತರಿಗೆ ದೂರವಾಣಿ ಮೂಲಕ ಕರೆ ಮಾಡಿದರು. ಆದರೆ, ಆಯುಕ್ತರು ಕರೆ ಸ್ವೀಕರಿಸಿಲ್ಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next