Advertisement

ಫೆ.1ರಿಂದ ಗೋವಾ ಕ್ಯಾಸಿನೋಗಳಿಗೆ ಪ್ರವೇಶವಿಲ್ಲ

09:35 AM Feb 01, 2020 | Hari Prasad |

ಪಣಜಿ: ಗೋವಾದ ಕ್ಯಾಸಿನೋಗಳಲ್ಲಿ (ಜೂಜು ಕೇಂದ್ರ) ಸ್ಥಳೀಯರಿಗೆ ಫೆ.1ರಿಂದ ಪ್ರವೇಶ ನಿಷೇಧಿಸಲಾಗುವುದು ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ತಿಳಿಸಿದ್ದಾರೆ. ಸರಕು ಮತ್ತು ಸೇವಾ ತೆರಿಗೆ ಆಯುಕ್ತರು ಈ ನಿಷೇಧವನ್ನು ಜಾರಿಗೆ ತರಲಿದ್ದಾರೆ ಎಂದು ಹೇಳಿದ್ದಾರೆ.

Advertisement

ಕಾಂಗ್ರೆಸ್‌ ಸೇರಿ ಹಲವಾರು ಪಕ್ಷಗಳು ಮತ್ತು ಇತರ ಸಂಘಟನೆಗಳು ಕ್ಯಾಸಿನೊಗಳಲ್ಲಿ ಸ್ಥಳೀಯರಿಗೆ ಪ್ರವೇಶ ನಿರಾಕರಿಸುವಂಥ ನಿಯಮ ರೂಪಿಸಬೇಕು ಎಂದು ಆಗ್ರಹಿಸಿದ್ದವು.

ಸ್ಥಳೀಯರು ಕ್ಯಾಸಿನೋಗಳಿಗೆ ಹೋಗುವುದರಿಂದ ಸ್ಥಳೀಯ ಸಂಸ್ಕೃತಿಗೆ ಧಕ್ಕೆ ಆಗುತ್ತದೆ. ಅಲ್ಲದೇ ಜನರು ಮೋಜಿಗಾಗಿ ಹಣ ವ್ಯಯಿಸುವ ಕಾರಣ ಹಲವಾರು ಕುಟುಂಬಗಳ ಆರ್ಥಿಕತೆ ತಗ್ಗಿದೆ ಎಂಬ ಆರೋಪಗಳೂ ಕೇಳಿಬಂದ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಾವಂತ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next