ಮುಂಬಯಿ, ಜ. 11: ಮುಂಬಯಿ ಮತ್ತು ನೆರೆಯ ಥಾಣೆ ಜಿಲ್ಲೆಯಾದ್ಯಂತ ಕೋವಿಡ್ ರೋಗಿಗಳ ಸಂಖ್ಯೆ ಕಡಿಮೆಯಾಗಿದ್ದರೂ ಸಾಮಾನ್ಯ ಜನರಿಗೆ ಇನ್ನೂ ಲೋಕಲ್ ರೈಲುಗಳಲ್ಲಿ ಪ್ರಯಾಣಿಸಲು ಅನುಮತಿ ನೀಡಿಲ್ಲ. ಪ್ರಸ್ತುತ ಅಗತ್ಯ ಸೇವೆಗಳಲ್ಲಿ ಕೆಲಸ ಮಾಡುವ ಜನರಿಗೆ ಮತ್ತು ಮಹಿಳೆಯರಿಗೆ ಮಾತ್ರ ರೈಲಿನಲ್ಲಿ ಪ್ರಯಾಣಿಸಲು ಅವಕಾಶವಿದೆ.
ಸದ್ಯಕ್ಕೆ ಅಧಿಕಾರಿಗಳು ಲಸಿಕೆ ವಿತರಣೆ ಪ್ರಾರಂಭವಾದ ಬಳಿಕ ಸಾರ್ವಜನಿಕರಿಗೆ ಹಂತ ಹಂತವಾಗಿ ಲೋಕಲ್ ರೈಲುಗಳಲ್ಲಿ ಪ್ರಯಾಣಿಸಲು ಅವಕಾಶ ನೀಡುವ ಪ್ರಸ್ತಾವನೆಯ ಕುರಿತು ಕೆಲಸ ಮಾಡುತ್ತಿದ್ದಾರೆ. ಈ ಹಿಂದೆ ಪ್ರಯಾ ಣಿಕರ ಸಂಘವು ಲೋಕಲ್ ರೈಲುಗಳನ್ನು ಕೂಡಲೇ ಪ್ರಾರಂಭಿಸದಿದ್ದರೆ ಆಂದೋಲನ ಪ್ರಾರಂಭಿಸುವುದಾಗಿ ಎಚ್ಚರಿಸಿತ್ತು. ಅಗತ್ಯವಲ್ಲದ ಕಾರ್ಮಿಕರು ಮತ್ತು ಸಾರ್ವಜನಿಕರ ಸೇವೆಗಳಿಗೆ ಇನ್ನೂ ಹಸುರು ನಿಶಾನೆ ಸಿಗದ ಕಾರಣ ಸಂಘವು ಅದರ ವಿರುದ್ಧ ಪ್ರತಿಭಟಿಸಲು ಡಿಜಿಟಲ್ ಮಾರ್ಗವನ್ನು ಬಳಸಲಿದ್ದು, ರೈಲ್ವೇ ಮತ್ತು ಸರಕಾರಕ್ಕೆ ಲೋಕಲ್ ರೈಲುಗಳನ್ನು ಪ್ರಾರಂಭಿಸುವಂತೆ ಆಗ್ರಹಿಸಿ ವಾಟ್ಸ್‌ಆ್ಯಪ್‌ನಲ್ಲಿ ಚಳವಳಿಯನ್ನು ಪ್ರಾರಂಭಿಸಲಿದೆ.
“ಸಾಮಾನ್ಯ ನಾಗರಿಕರಿಗೆ ಮುಂಬಯಿ ಲೋಕಲ್ ರೈಲುಪ್ರಾರಂಭಿಸಿ’ ಎಂಬ ವಿಷಯ ದೊಂದಿಗೆ ಸಾವಿರಾರು ಪ್ರಯಾಣಿಕರು ತಮ್ಮ ವಾಟ್ಸ್‌ಆ್ಯಪ್ ಡಿಪಿಯಲ್ಲಿ ಫೋಟೋ ವನ್ನು ಪೋಸ್ಟ್ ಮಾಡುವ ಮೂಲಕ ಸರಕಾರದ ವಿರುದ್ಧ ಪ್ರತಿ ಭಟನೆ ನಡೆಸಲಿದ್ದಾರೆ.
ಇದನ್ನೂ ಓದಿ:ಸಾಹಸ ಬಂಟರ ಯಶಸ್ಸಿಗೆ ಹಿಡಿದ ಕನ್ನಡಿಯಾಗಿದೆ: ಸಂಸದ ಗೋಪಾಲ್ ಶೆಟ್ಟಿ
ಪ್ರತಿಭಟನೆ ಅಥವಾ ರೈಲು ತಡೆಯ ಬಳಿಕವೇ ಸರಕಾರ ಸಾರ್ವಜನಿಕರಿಗೆ ಪ್ರಯಾಣಿಸಲು ಅವಕಾಶ ನೀಡಲಿ ದೆಯೇ ಎಂದು ಪ್ರಶ್ನಿಸಿರುವ ಪ್ರಯಾ ಣಿಕರ ಸಂಘ, ಮುಂದಿನ ಎಂಟು ದಿನ ಗಳಲ್ಲಿ ಎಲ್ಲ ವಿಭಾಗಗಳಿಗೆ ಲೋಕಲ್ ರೈಲು ಪ್ರಾರಂಭಿ ಸದಿದ್ದರೆ ಮುಂದೆ ನಡೆಯಲಿರುವ ಪ್ರಯಾ ಣಿಕರ ಆಂದೋಲನಕ್ಕೆ ರಾಜ್ಯ ಸರಕಾರವೇ ಕಾರಣವಾಗಲಿದೆ ಎಂದು ಎಚ್ಚರಿಸಿದೆ. ಲೋಕಲ್ ರೈಲುಗಳ ಕಡಿಮೆ ಆವರ್ತನ ದಿಂದಾಗಿ ಮುಂಬಯಿ ಮಹಾ ನಗರ ಪ್ರದೇಶದ ರೈತರು ಮತ್ತು ಹಾಲು ಮಾರಾಟಗಾ ರರು ಅನೇಕ ತೊಂದರೆಗಳನ್ನು ಎದುರಿ ಸುತ್ತಿದ್ದಾರೆ.
ಕಸಾರ- ಅಸನಾಂವ್-ಟಿಟ್ವಾಲಾ ಮತ್ತು ಕರ್ಜತ್- ಬದ್ಲಾ ಪುರ- ಅಂಬರ್‌ನಾಥ್ ವಿಭಾಗದ ಜನರಿಗೆ ನಗರ ಪ್ರದೇಶಗಳಿಗೆ ಹಾಲು ತಲುಪಿ ಸಲು ಬೆಳಗ್ಗೆ 40 ಲೀಟರ್‌ಗಳ 5ರಿಂದ 6 ಕ್ಯಾನ್‌ಗಳೊಂದಿಗೆ ರಸ್ತೆಯ ಮೂಲಕ ಪ್ರಯಾಣಿಸಬೇಕಾಗುತ್ತಿದೆ