Advertisement

ಸ್ಥಳೀಯ ಸಂಸ್ಥೆ: ಕಾಂಗ್ರೆಸ್‌ ಪಾರಮ್ಯ

02:40 AM Jun 01, 2019 | Sriram |

ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿನ ಸೋಲಿನಿಂದ ಕಂಗೆಟ್ಟಿದ್ದ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮೈತ್ರಿಗೆ ಸ್ಥಳೀಯ ಸಂಸ್ಥೆಗಳ ಫ‌ಲಿತಾಂಶ ಒಂದಷ್ಟು ಸಮಾಧಾನ ನೀಡಿದೆ.

Advertisement

ರಾಜ್ಯದ ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯತ್‌ಗಳ 1,361 ಸ್ಥಾನಗಳಿಗೆ ನಡೆದಿದ್ದ ಚುನಾವಣೆ ಪೈಕಿ, 1,221 ಕ್ಷೇತ್ರಗಳ ಫ‌ಲಿತಾಂಶ ಹೊರಬಿದ್ದಿದ್ದು, ಕಾಂಗ್ರೆಸ್‌ ಹೆಚ್ಚು ಸ್ಥಾನ ಗಳಿಸಿಕೊಂಡಿದೆ. ಬಿಜೆಪಿ ಎರಡನೇ ಸ್ಥಾನದಲ್ಲಿದ್ದರೆ, ಜೆಡಿಎಸ್‌ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.

ರಾಜ್ಯದಲ್ಲಿ ಎರಡನೇ ಹಂತದಲ್ಲಿ ಚುನಾವಣೆ ನಡೆದ 61 ನಗರ ಸ್ಥಳೀಯ ಸಂಸ್ಥೆಗಳ ಪೈಕಿ 7 ನಗರಸಭೆ, 30 ಪುರಸಭೆ ಮತ್ತು 19 ಪಟ್ಟಣ ಪಂಚಾಯತ್‌ಗಳ ಫ‌ಲಿತಾಂಶ ಹೊರಬಿದ್ದಿದೆ. ಪುರಸಭೆಗಳಲ್ಲಿ ಪಕ್ಷೇತರ ಅಭ್ಯರ್ಥಿಗಳು ಪಾರಮ್ಯ ಮೆರೆದಿದ್ದಾರೆ.

7 ನಗರಸಭೆಗಳ ಪೈಕಿ 4ರಲ್ಲಿ ಕಾಂಗ್ರೆಸ್‌, 2ರಲ್ಲಿ ಬಿಜೆಪಿ, 1 ಜೆಡಿಎಸ್‌ ತೆಕ್ಕೆಗೆ ಸೇರಿವೆ. 30 ಪುರಸಭೆಗಳಲ್ಲಿ 15 ಪುರಸಭೆ ಕಾಂಗ್ರೆಸ್‌ ಪಾಲಾಗಿವೆ. ಬಿಜೆಪಿ 11 ಪುರಸಭೆಗಳನ್ನು ಮತ್ತು ಎರಡನ್ನು ಜೆಡಿಎಸ್‌ ಪಡೆದುಕೊಂಡಿವೆ.

ಎರಡು ಕಡೆ ಅತಂತ್ರ ಫ‌ಲಿತಾಂಶ ಬಂದಿದೆ. 19 ಪ. ಪಂ.ಗಳಲ್ಲಿ 12 ಪ. ಪಂ.ಗಳನ್ನು ಬಿಜೆಪಿ ವಶಕ್ಕೆ ತೆಗೆದುಕೊಂಡಿದ್ದು, ಐದು ಕಡೆ ಕಾಂಗ್ರೆಸ್‌ ಅಧಿಕಾರಕ್ಕೆ ಬರಲಿದೆ. ಎರಡು ಅತಂತ್ರ ಫ‌ಲಿತಾಂಶ ಹೊರಬಿದ್ದಿದೆ.

Advertisement

ಒಟ್ಟಾರೆಯಾಗಿ 7 ನಗರ ಸಭೆಯ 217 ವಾರ್ಡ್‌ ಗಳಲ್ಲಿ 90 ಕಾಂಗ್ರೆಸ್‌, 56 ಬಿಜೆಪಿ, 38 ಜೆಡಿಎಸ್‌, 2 ಬಿಎಸ್‌ಪಿ, 6 ಇತರ ಪಕ್ಷ ಮತ್ತು 25 ಪಕ್ಷೇತರ ಅಭ್ಯರ್ಥಿಗಳು ಜಯ ಸಾಧಿಸಿದ್ದಾರೆ. 30 ಪುರಸಭೆಯ 714 ವಾರ್ಡ್‌ಗಳಲ್ಲಿ 184 ಕಡೆ ಬಿಜೆಪಿ, 322 ಕಡೆ ಕಾಂಗ್ರೆಸ್‌, 102ಕಡೆ ಜೆಡಿಎಸ್‌, ಬಿಎಸ್‌ಪಿ ಮತ್ತು ಇತರ ಪಕ್ಷಗಳು ತಲಾ ಒಂದೊಂದು ಕಡೆ, ಸಿಪಿಎಂ ಎರಡು ಕಡೆ ಮತ್ತು ಪಕ್ಷೇತರರು 102ಕಡೆ ಗೆದ್ದಿದ್ದಾರೆ.

ನಗರ ಸ್ಥಳೀಯ ಸಂಸ್ಥೆ ಫ‌ಲಿತಾಂಶದಲ್ಲಿ ಬಿಜೆಪಿ 366, ಕಾಂಗ್ರೆಸ್‌ 509 ಮತ್ತು ಜೆಡಿಎಸ್‌ 74 ಮತ್ತು ಪಕ್ಷೇತರರು 160 ಕಡೆಗಳಲ್ಲಿ ಜಯ ಸಾಧಿಸಿದ್ದಾರೆ.

ನಗರ ಸಭೆ ವಿವರ(ಅತೀ ಹೆಚ್ಚು ಸೀಟು ಪಡೆದ ಪಕ್ಷಗಳು)
ಕಾಂಗ್ರೆಸ್‌: ಹಿರಿಯೂರು, ಶಿಡ್ಲಘಟ್ಟ, ಬಸವಕಲ್ಯಾಣ, ಶಹಪುರ

ಬಿಜೆಪಿ: ನಂಜನಗೂಡು, ತಿಪಟೂರು

ಜೆಡಿಎಸ್‌: ಹರಿಹರ

ಪುರಸಭೆ ಫ‌ಲಿತಾಂಶ(ಅತೀ ಹೆಚ್ಚು ಸೀಟು ಪಡೆದ ಪಕ್ಷಗಳು)
ಬಿಜೆಪಿ: ಮೂಡುಬಿದರೆ, ಮುಂಡರಗಿ, ಬ್ಯಾಡಗಿ, ಶಿಗ್ಗಾಂವ್‌, ಗುಂಡ್ಲುಪೇಟೆ, ಇಂಡಿ, ಬಂಗಾರಪೇಟೆ

ಜೆಡಿಎಸ್‌: ಬನ್ನೂರು, ಮಾವಳ್ಳಿ, ಶ್ರೀರಂಗಪಟ್ಟಣ, ನವಲಗುಂದ, ಶ್ರೀನಿವಾಸಪುರ

ಕಾಂಗ್ರೆಸ್‌: ಮಾಲೂರು, ಬಾಗೇಪಲ್ಲಿ, ಕಡೂರು, ಪಾವಗಡ, ಭಾಲ್ಕಿ, ಹುಮ್ನಬಾದ್‌, ಚಿಟಗುಪ್ಪ, ಸಂಡೂರು, ಹೂವಿನ ಹಡಗಲಿ ಹಾಗೂ ಹರಪ್ಪನಹಳ್ಳಿ, ಕುಣಿಗಲ್, ಕೆ.ಆರ್‌.ಪೇಟೆ, ಕೆ.ಆರ್‌.ನಗರ, ಬಸವನ ಬಾಗೇವಾಡಿ ಮತ್ತು ಆನೇಕಲ್

ಪಕ್ಷೇತರ: ತಾಳಿಕೋಟೆ ಹಾಗೂ ಭಟ್ಕಳ

ಪಟ್ಟಣ ಪಂಚಾಯತ್‌ ಫ‌ಲಿತಾಂಶ
(ಅತೀ ಹೆಚ್ಚು ಸೀಟು ಪಡೆದ ಪಕ್ಷಗಳು)

ಬಿಜೆಪಿ: ಮೊಣಕಾಲ್ಮೂರು, ಹೊಳಲ್ಕೆರೆ, ತುರುವೇಕೆರೆ, ಕೊಪ್ಪ, ಶೃಂಗೇರಿ, ಮೂಡಿಗೆರೆ, ಸುಳ್ಯ, ಕಲಘಟಗಿ, ಹೊನ್ನಾವರ, ಸಿದ್ದಾಪುರ

ಕಾಂಗ್ರೆಸ್‌: ಮೂಲ್ಕಿ, ಕಮಲಾಪುರ, ಅಳ್ನಾವರ, ಯಳಂದೂರು, ನರಸಿಂಹರಾಜಪುರ

ಜೆಡಿಎಸ್‌:ಆಲೂರು

ಅತಂತ್ರ: ಹನೂರು, ಅರಕಲಗೋಡು

 

Advertisement

Udayavani is now on Telegram. Click here to join our channel and stay updated with the latest news.

Next