Advertisement
ಇದೀಗ ಮುಂದಿನ ವರ್ಷವೂ ಅಲ್ಲಿ ಕೂಟ ನಡೆಸುವುದು ಬೇಡ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ. ಇಂಥ ಅಭಿಪ್ರಾಯ ವ್ಯಕ್ತಪಡಿಸಿರುವುದು ಬೇರೆ ಯರೂ ಅಲ್ಲ, ಟೋಕಿಯೊ ನಗರದ ಸ್ಥಳೀಯರು ಎನ್ನುವುದು ವಿಶೇಷ.
ಜಪಾನಿನ 2 ಖ್ಯಾತ ಸುದ್ದಿ ಸಂಸ್ಥೆಗಳು ವಾರಾಂತ್ಯದಲ್ಲಿ ಜನರ ಬಳಿ ತೆರಳಿ ಸಮೀಕ್ಷೆ ನಡೆಸಿವೆ. ಮುಂಬರುವ ವರ್ಷ ಒಲಿಂಪಿಕ್ಸ್ ಕೂಟವನ್ನು ನಡೆಸಬೇಕೇ ಅಥವಾ ಬೇಡವೇ ಎನ್ನುವ ಕುರಿತು ಪ್ರಶ್ನೆಗಳನ್ನು ಕೇಳಲಾಗಿತ್ತು. ಸಮೀಕ್ಷೆಯಲ್ಲಿ ಶೇ. 51.7ರಷ್ಟು ಜನ ಕೂಟವನ್ನು ಮುಂದೂಡಿಕೆ ಮಾಡಿ ಇಲ್ಲವೇ ರದ್ದುಗೊಳಿಸಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರೆ ಉಳಿದ ಶೇ. 46.3 ರಷ್ಟು ಜನ ಕೂಟದ ದಿನಾಂಕವನ್ನು ಮರು ನಿಗದಿಪಡಿಸುವುದನ್ನು ಎದುರು ನೋಡುತ್ತಿದ್ದಾರೆ. ಶೇ. 27.7ರಷ್ಟು ಜನ 2021ರ ಕೂಟವನ್ನು ಸಂಪೂರ್ಣವಾಗಿ ರದ್ದು ಮಾಡಬೇಕೆಂದು ಒತ್ತಾಯಿಸಿದ್ದಾರೆ. ಶೇ. 24ರಷ್ಟು ಜನ ಮುಂದೂಡಿಕೆಗೆ ಆದ್ಯತೆ ನೀಡಿದ್ದಾರೆ.
ಮುಂದಿನ ವರ್ಷ ಕ್ರೀಡಾಕೂಟವನ್ನು ನೋಡಲು ಬಯಸುತ್ತೇವೆ ಎಂದು ಹೇಳಿದವರಲ್ಲಿ ಶೇ. 31.1ರಷ್ಟು ಜನ ಪ್ರೇಕ್ಷಕರ ನಿಷೇಧದ ಬಗ್ಗೆ ಒಲವು ತೋರಿದ್ದಾರೆ. ಶೇ. 15.2ರಷ್ಟು ಮಂದಿ ವೀಕ್ಷಕರು ಬೇಕು ಎಂದು ಹೇಳಿದ್ದಾರೆ.
Related Articles
ಸದ್ಯ ವಿಶ್ವದೆಲ್ಲೆಡೆ ಕೋವಿಡ್-19 ಕಾಡ್ಗಿಚ್ಚಿನಂತೆ ಹಬ್ಬುತ್ತಿದೆ. ನಿಯಂತ್ರಣ ಅಸಾಧ್ಯವಾಗುತ್ತಿದೆ. ಹೀಗಾಗಿ ಮುಂದಿನ ವರ್ಷವೂ ಒಲಿಂಪಿಕ್ಸ್ ನಡೆಸುವುದು ಸೂಕ್ತವಲ್ಲ ಎನ್ನುವ ಅಭಿಪ್ರಾಯಗಳು ಕೇಳಿಬಂದಿವೆ. ವಿಶ್ವದ ವಿವಿಧ ಭಾಗ ಗಳಿಂದ ಕ್ರೀಡಾಪಟುಗಳು, ಜನರು ಟೋಕಿಯೊಗೆ ಬರುತ್ತಾರೆ. ಹಾಗೆ ಬರುವವರು ಕೋವಿಡ್-19ವನ್ನೂ ಹೊತ್ತು ತರಬಹುದು ಎನ್ನುವ ಆತಂಕ ಸ್ಥಳೀಯರದ್ದು. ಇದರಿಂದಾಗಿ ಕೂಟವನ್ನು ಮುಂದೂಡಿ ಇಲ್ಲವೇ ರದ್ದು ಮಾಡಿ ಎಂದು ಒತ್ತಾಯಿಸುತ್ತಿರುವವರ ಸಂಖ್ಯೆಯೂ ಹೆಚ್ಚಿದೆ.
Advertisement