Advertisement

ಸ್ಥಳೀಯ ಕಚೇರಿಗಳ ಕಾರ್ಯಕ್ರಮಗಳು ಶ್ಲಾಘನೀಯ: ಹರೀಶ್‌ ಜಿ. ಅಮೀನ್‌

02:01 PM Aug 22, 2021 | Team Udayavani |

ಬೊರಿವಲಿ: ಕೋವಿಡ್‌ ಕಠಿನ ಪರಿಸ್ಥಿತಿಯಲ್ಲೂ ಸಮಯೋಚಿತವಾಗಿ ತುಳುನಾಡಿನ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಆಟಿಡೊಂಜಿ ಕೂಟ ಕಾರ್ಯಕ್ರಮವನ್ನು ಆಯೋಜಿಸಿದ ಬೊರಿವಲಿ-ದಹಿಸರ್‌ ಸ್ಥಳೀಯ ಕಚೇರಿಯ ಕಾರ್ಯಾಧ್ಯಕ್ಷ ಮೋಹನ್‌ ಬಿ. ಅಮೀನ್‌ ಹಾಗೂ ಅವರ ಎಲ್ಲ ಕಾರ್ಯಕಾರಿ ಸಮಿತಿಯ ಶ್ರಮ ಇಲ್ಲಿ ಅನಾವರಣವಾಗಿದೆ. ನಮ್ಮ ತುಳುನಾಡಿನ ಸಂಸ್ಕೃತಿಯ ದ್ಯೋತಕವನ್ನು ಮುಂಬಯಿ ತುಳುವರಿಗೂ ಮನದಟ್ಟು ಮಾಡುವಂತಹ ಇಂತಹ ಕಾರ್ಯಕ್ರಮಗಳು ಸದಾ ನಡೆಯುತ್ತಿರಲಿ ಎಂದು ಬಿಲ್ಲವರ ಅಸೋಸಿಯೇಶನ್‌ ಅಧ್ಯಕ್ಷ ಹರೀಶ್‌ ಜಿ. ಅಮೀನ್‌ ಅವರು ನುಡಿದರು.

Advertisement

ಆ. 8ರಂದು ಪ್ಲಾಟ್‌ 134, ಗುರುಸನ್ನಿದಿ, ಬಿಎಂಸಿ ಗ್ಯಾರೇಜ್‌ ಶಿಂಪೋಲಿ ರೋಡ್‌ ಗೊರೈ ಬೊರಿವಲಿ ಪಶ್ಚಿಮದಲ್ಲಿರುವ ಸ್ಥಳೀಯ ಸಮಿತಿಯ ಕಚೇರಿಯಲ್ಲಿ ನಡೆದ ಆಟಿಡೊಂಜಿ ಕೂಟ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಂಕಷ್ಟದಲ್ಲಿರುವ ಸಮಾಜ ಬಾಂಧವರಿಗೆ ಅಸೋಸಿಯೇಶನ್‌ ಮೂಲಕ ದಾನಿಗಳ ಸಹಕಾರದಿಂದ ಪಡಿತರವನ್ನು ವಿತರಿಸಲಾಗುತ್ತಿದೆ. ಜಯ ಸುವರ್ಣರ ದೂರದೃಷ್ಟಿಯ ಚಿಂತನೆ, ಔದಾರ್ಯವು ಇಂದು ಬಿಲ್ಲವರ ಅಸೋಸಿಯೇಶನ್‌ ಮುಖಾಂತರ ಸಮಾಜ ಬಾಂಧವರಿಗೆ ದೊರೆಯುತ್ತಿದೆ. ಕೋವಿಡ್‌ ಸಂದರ್ಭದಲ್ಲಿ ಸ್ಥಳೀಯ ಕಚೇರಿಯ ಮಹಿಳೆಯರ ಸಾಧನೆ ಸಹಕಾರ ಮೆಚ್ಚುವಂಥದ್ದಾಗಿದೆ ಎಂದರು.

ಇದನ್ನೂ ಓದಿ:ಬಿಡುಗಡೆ ವೇಳೆ ಕೋವಿಡ್‌ ನಿಯಮ ಉಲ್ಲಂಘನೆ| ವಿನಯ್ ಸೇರಿ 400 ಮಂದಿ ವಿರುದ್ಧ ದೂರು

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಬಿಲ್ಲವರ ಅಸೋಸಿಯೇಶನ್‌ ಗೌರವ ಕಾರ್ಯದರ್ಶಿ ಧನಂಜಯ ಶಾಂತಿ ಅವರು ಮಾತನಾಡಿ, ಯಾವುದೇ ಕಾರ್ಯಕ್ರಮ ಯಶಸ್ವಿಯಾಗಲು ಮಹಿಳೆಯರ ಕೊಡುಗೆ ಅನಿವಾರ್ಯ. ಪುರಾತನ ಕಾಲದಿಂದಲೂ ಮಹಿಳೆಯರಿಗೆ ವಿಶೇಷ ಸ್ಥಾನ ಗೌರವ ನೀಡಿದ ದೇಶ ನಮ್ಮದು. ಸ್ತ್ರೀಯರು ಭಾಗವಹಿಸುವ ಕಾರ್ಯಕ್ರಮ ವಿಶೇಷವಾಗಿದ್ದು ಕಾಟ್ಯಕ್ರಮಕ್ಕೆ ಅವರು ಶೋಭೆಯಾ ಗಿರುತ್ತಾರೆ. ಬಿಲ್ಲವರ ಅಸೋಸಿಯೇಶನ್‌ ಅಮೃತನಿಧಿ ವಿದ್ಯಾ ಯೋಜನಾ ಕಾರ್ಯಕ್ರಮಕ್ಕೆ ತಾವೆಲ್ಲಾ ತಮ್ಮ ಸಹಾಯ ನೀಡಿ ಸಹಕರಿಸುವಂತೆ ವಿನಂತಿಸಿದರು.

ಕಾರ್ಯಕ್ರಮದ ಪ್ರಾರಂಭದಲ್ಲಿ ಅಧ್ಯಕ್ಷರಾದ ಹರೀಶ್‌ ಜಿ. ಅಮೀನ್‌ ಅವರು ಬ್ರಹ್ಮಶ್ರೀ ನಾರಾಯಣ ಗುರುಗಳ ಪ್ರತಿಬಿಂಬ ಮೂರ್ತಿಗೆ ಹಾರಾರ್ಪಣೆಗೈದು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸ್ಥಳೀಯ ಕಚೇರಿಯ ಮಹಿಳಾ ಸದಸ್ಯೆ ನ್ಯಾಯವಾದಿ ಸೌಮ್ಯಾ ಪೂಜಾರಿ ಕಲಾವಿದೆ ಹರಿಣಿ ನಿಲೇಶ್‌ ಪೂಜಾರಿ ಅವರನ್ನು ಪರಿಚಯಿಸಿದರು. ಸಮಿತಿಯ ಕಾರ್ಯಾಧ್ಯಕ್ಷ ಮೋಹನ್‌ ಸ್ವಾಗತಿಸಿ, ಆಟಿಡೊಂಜಿ ಕೂಟ ತುಳು ಸಂಪ್ರದಾಯ ಕಾರ್ಯಕ್ರಮ ಸ್ಥಳೀಯ ಕಚೇರಿಯಲ್ಲಿ ಆಷಾಢ ತಿಂಗಳಲ್ಲಿ ವಿಶೇಷ ಕಾರ್ಯಕ್ರಮವಾಗಿದ್ದು, ಪ್ರತಿ ವರ್ಷವೂ ಸ್ಥಳೀಯ ಕಚೇರಿಯ ವತಿಯಿಂದ ವೆಶಿಷ್ಟ್ಯಪೂರ್ಣ ಕಾರ್ಯಕ್ರಮವಾಗಿ ಜರಗುತ್ತಿದೆ ಎಂದು ನುಡಿದರು.

Advertisement

ಉಪ ಕಾರ್ಯಾಧ್ಯಕ್ಷ ರಜಿತ್‌ ಎಲ್‌. ಸುವರ್ಣ ಕಾರ್ಯಕ್ರಮ ನಿರೂಪಿಸಿದರು. ಗೌರವ ಕಾರ್ಯದರ್ಶಿ ಶೇಖರ್‌ ಅಮೀನ್‌ ವಂದಿಸಿದರು. ವೇದಿಕೆಯಲ್ಲಿ ಭಾರತ್‌ ಬ್ಯಾಂಕ್‌ನ ನಿರ್ದೇಶಕ ಪ್ರೇಮನಾಥ್‌ ಪಿ. ಕೋಟ್ಯಾನ್‌, ಸ್ಥಳೀಯ ಕಚೇರಿಯ ಮಾಜಿ ಕಾರ್ಯಾಧ್ಯಕ್ಷ ಜಿ. ಎಂ. ಕೋಟ್ಯಾನ್‌, ಕೇಂದ್ರ ಕಚೇರಿಯ ಸದಸ್ಯ ನೀಲೇಶ್‌ ಪೂಜಾರಿ ಪಲಿಮಾರು ಉಪಸ್ಥಿತರಿದ್ದರು.

ಜತೆ ಕಾರ್ಯದರ್ಶಿ ವತ್ಸಲಾ ಕೆ. ಪೂಜಾರಿ, ಜತೆ ಕೋಶಾಧಿಕಾರಿ ಉಮೇಶ್‌ ಜಿ. ಕೋಟ್ಯಾನ್‌, ಕೇಶರಂಜನ್‌ ಮುಲ್ಕಿ, ಜಯರಾಮ ಪೂಜಾರಿ, ರಾಘು ಪೂಜಾರಿ, ಆರ್‌. ಡಿ. ಕೋಟ್ಯಾನ್‌, ರವಿ ಪೂಜಾ,ಕರುಣಾಕರ ಪೂಜಾರಿ, ಕೃಷ್ಣರಾಜ್‌ ಸುವರ್ಣ, ಸುಂದರಿ ಪೂಜಾರಿ, ವಾರಿಜಾ ಸನೀಲ್‌, ಪ್ರೀತಿ ಅಮೀನ್‌, ಸುಜಾತಾ ಪೂಜಾರಿ, ಕುಸುಮಾ ಅಮೀನ್‌, ಸುಮತಿ ಅಮೀನ್‌, ದಯಾನಂದ ಪೂಜಾರಿ ಉಪಸ್ಥಿತರಿದ್ದರು. ಶಾಂತಾ ಅಮೀನ್‌, ಸುಗುಣಾ ಹರೀಶ್‌ ಪೂಜಾರಿ, ಇಂದಿರಾ ರಾಘು ಪೂಜಾರಿ, ರೋಹಿಣಿ ಟಿ. ಕೋಟ್ಯಾನ್‌, ಲಕ್ಷ್ಮೀ ದೇವಾಡಿಗ, ಶೋಭಾ
ಬಿ. ಪೂಜಾರಿ, ಗೀತಾ ರಜಿತ್‌ ಸುವರ್ಣ, ಶೋಭಾ ಪೂಜಾರಿ, ಲೀಲಾ ಪೂಜಾರಿ, ಸಂಪಾ ಪೂಜಾರಿ, ಸವಿತಾ ಪೂಜಾರಿ ಅವರು ಆಟಿಡೊಂಜಿ ಕೂಟದಲ್ಲಿ ಸಾಂಪ್ರಾದಾಯಿಕ ಖಾದ್ಯವನ್ನು ತಯಾರಿಸಿ ಪ್ರದರ್ಶಿಸಿದರು. ಸದಸ್ಯರನ್ನು ಅಧ್ಯಕ್ಷರಾದ ಹರೀಶ್‌ ಜಿ. ಅಮೀನ್‌ ಅಭಿನಂದಿಸಿದರು.

ಹಿರಿಯರಿಂದ ಬಳುವಳಿಯಾಗಿ ಬಂದ ಪರಂಪರೆ ನಮ್ಮ ತುಳುನಾಡಿನ ಸಾಂಸ್ಕೃತಿಕ ಇಂದು ಇಲ್ಲಿ ಅನಾವರಣಗೊಂಡಿದೆ. ತಿಂಡಿ ತಿನಸುಗಳ ವಿಶೇಷತೆಯ ಕಾರ್ಯಕ್ರಮಗಳು ಆಯೋಜಿಸುವ ಈ ಸಂದರ್ಭದಲ್ಲಿ ತಾಂತ್ರಿಕ ತಿಳುವಳಿಕೆಯನ್ನು ನೀಡುವ ಆವಶ್ಯಕತೆ ಇರಬೇಕು. ಅವಿಭಜಿತ ದಕ್ಷಿಣ ಕನ್ನಡಿಗರು ಭಾಷಾ ಪ್ರೇಮಿಗಳಾಗಿದ್ದು ತುಳುಭಾಷೆಗೆ ನಾವೆಲ್ಲರೂ ವಿಶೇಷವಾದ ಸ್ಥಾನಮಾನ ಗೌರವ ನೀಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕು.
-ಹರಿಣಿ ನಿಲೇಶ್‌ ಪೂಜಾರಿ ಪಲಿಮಾರು, ಧಾರಾವಾಹಿ ಕಲಾವಿದೆ

ಮಹಾನಗರದಲ್ಲಿ ಸದ್ಯ ಕೋವಿಡ್‌ ಮಹಾಮಾರಿಯಿಂದ ಉದರ ಪೋಷಣೆಗೆ ಸಮಸ್ಯೆಯುಂಟಾಗಿದ್ದು, ಆಂತರಿಕ ಬದುಕಿಗೆ ಬಹುದೊಡ್ಡ ಹೊಡೆತ ಬಿದ್ದಿದೆ. ಆದರೂ ತುಳುನಾಡಿನ ನಾವು ದೈವದೇವರು ಕಟ್ಟುಕಟ್ಟಲೆ ನಮ್ಮ ಧಾರ್ಮಿಕ ಚಿಂತನೆಯ ಮೂಲಕ ಬಲಿಷ್ಠಗೊಳಿಸಿದ್ದೇವೆ. ಬದಲಾವಣೆ ಯ ಕಾಲಘಟ್ಟದಲ್ಲಿ ಪ್ರಕೃತಿಯಲ್ಲಿನ ಬದಲಾವಣೆಯನ್ನು ಕಾಣುವುದು ಮಾನವನ ಸಹಜ ಧರ್ಮವಾಗಿದೆ.
-ಸನ್ನಿಧ್‌ ಪೂಜಾರಿ, ಮೋಡೆಲ್‌, ದೈವಪಾತ್ರಿ

Advertisement

Udayavani is now on Telegram. Click here to join our channel and stay updated with the latest news.

Next