Advertisement

ಸ್ಥಳೀಯಾಡಳಿತ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಬೇಕಿದೆ

09:35 PM Oct 19, 2019 | mahesh |

ಇಂದಿನ ದಿನದಲ್ಲಿ ತಂತ್ರಜ್ಞಾನ ವ್ಯವಸ್ಥೆ ದಿನದಿಂದ ದಿನಕ್ಕೆ ಬೆಳೆಯುತ್ತಿದ್ದು, ಸರಕಾರಿ ಸಂಸ್ಥೆಗಳು ಸಾಮಾಜಿಕ ಜಾಲತಾಣಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕಿದೆ.

Advertisement

ತಂತ್ರಜ್ಞಾನ ವ್ಯವಸ್ಥೆಗೆ ತಕ್ಕಂತೆ ಮಂಗಳೂರು ಮಹಾನಗರ ಪಾಲಿಕೆಯು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿಲ್ಲ. ಮಂಗಳೂರು ಸಿಟಿ ಕಾರ್ಪೊರೇಷನ್‌ ಎಂಬ ಫೇಸ್‌ಬುಕ್‌ ಪೇಜ್‌ ಇದ್ದರೂ, ಅದರಲ್ಲಿ ಅನಗತ್ಯ ವಿಷಯಗಳು ಶೇರ್‌ ಆಗುತ್ತಿವೆ. ಇನ್ನು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‌ ಅಧಿಕೃತ ಫೇಸ್‌ಬುಕ್‌ ಜಾಲತಾಣವಿದ್ದು ಮಾಹಿತಿ ಪೋಸ್ಟ್‌ ಮಾಡಲಾಗುತ್ತಿದೆ. ಮಂಗಳೂರು ಸಿಟಿ ಪೊಲೀಸ್‌ ಪೇಜ್‌ ಸದ್ಯ ಸಕ್ರಿಯವಾಗಿದೆ.

ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕರು ಅದೆಷ್ಟೋ ಮಾಹಿತಿಯನ್ನು ಸಾಮಾಜಿಕ ಜಾಲತಾಣಗಳ ಮುಖೇನ ತಿಳಿಯುತ್ತಾರೆ. ಅದಕ್ಕೆ ತಕ್ಕಂತೆ ಸರಕಾರಿ ವಲಯ ಕೂಡ ಅಪ್‌ಡೇಟ್‌ ಆಗಬೇಕಿದೆ. ತಾಲೂಕು, ಜಿಲ್ಲಾ ಮಟ್ಟದ ಸರಕಾರಿ ಸಂಸ್ಥೆಗಳು ಅಧಿಕೃತ ಫೇಸ್‌ಬುಕ್‌, ಟ್ವಿಟ್ಟರ್‌ ಖಾತೆಯನ್ನು ತೆರೆದು ಮಾಹಿತಿ ವಿನಿಯಮ ಮಾಡಿಕೊಂಡರೆ ಸಾರ್ವಜನಿಕರಿಗೆ ಅನುಕೂಲವಾಗಬಹುದು.

– ನವೀನ್‌ ಭಟ್‌, ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next