Advertisement

ಹಳ್ಳಿ ಫೈಟ್‌: ಸೋಲು-ಗೆಲುವಿನ ಲೆಕ್ಕಾಚಾರ

04:12 PM Dec 29, 2020 | Suhan S |

ಮಾಸ್ತಿ: ಎರಡು ಹಂತದ ಗ್ರಾಮ ಪಂಚಾಯಿತಿಚುನಾವಣೆಗೆ ಮತದಾನ ಯಶಸ್ವಿಯಾಗಿ ನಡೆದಿದ್ದು,ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಗಳಲ್ಲಿ ಭದ್ರವಾಗಿದೆ.ಗ್ರಾಮೀಣ ಭಾಗದಲ್ಲಿ ಸೋಲು-ಗೆಲುವಿನ ಲೆಕ್ಕಾಚಾರ ಜೋರಾಗಿ ನಡೆಯುತ್ತಿದ್ದು, ಫ‌ಲಿತಾಂಶ ಹೊರ ಬೀಳಲು ಕೆಲವೇ ಗಂಟೆಗಳು ಬಾಕಿ ಉಳಿದಿವೆ.

Advertisement

ಸೋಲು ಗೆಲುವು ಲೆಕ್ಕಾಚಾರ: ವಿವಿಧ ಪಕ್ಷಗಳ ಮುಖಂಡರು, ಪಕ್ಷಗಳ ಬೆಂಬಲಿತರು ಹಾಗೂಬಣಗಳ ಒಮ್ಮತದ ಅಭ್ಯರ್ಥಿ ಕಣಕ್ಕಿಳಿಸಲು ಹರಸಾಹಸಪಟ್ಟಿದ್ದರು. ಗ್ರಾಮೀಣ ಪ್ರದೇಶದ ಹೋಬಳಿಹಾಗೂ ಪಂಚಾಯಿತಿ ಕೇಂದ್ರ ಸ್ಥಾನಗಳಲ್ಲಿ ಟೀಅಂಗಡಿ, ಹೋಟೆಲ್‌ ಸೇರಿದಂತೆ ಯಾವುದೇ ಗ್ರಾಮಗಳಿಗೆ ತೆರಳಿದರೂ ಅಲ್ಲಿನ ಶಾಲೆಗಳ ಆವರಣ, ಅರಳೀಕಟ್ಟೆ, ದೇವಸ್ಥಾನಗಳ ಜಗುಲಿಗಳ ಮೇಲೆ ಪಂಚಾಯತಿಫ‌ಲಿತಾಂಶ ಬಗ್ಗೆ ಚರ್ಚೆಯಾಗುತ್ತಿದೆ. ಯಾರು ಗೆಲ್ಲಬಹುದು? ಯಾರು ಸೋಲಬಹುದು? ಎಂದು ತಮ್ಮದೇ ದಾಟಿಯಲ್ಲಿ ವಿಶ್ಲೇಷಣೆ ಮಾಡುತ್ತಿದ್ದಾರೆ.

ಅಭ್ಯರ್ಥಿಗಳ ಖರ್ಚು ಲೆಕ್ಕ: ತನಗೆ ಯಾವ ಮನೆಯ ಮತಗಳು ಬಂದಿವೆ, ಯಾರು ಮತ ಹಾಕಿದ್ದಾರೆ, ಕೈಕೊಟ್ಟವರು ಯಾರು? ಎಂಬ ವಿಷಯಗಳು ಸೇರಿದಂತೆ ಮುಂತಾದ ಲೆಕ್ಕಾಚಾರದಲ್ಲಿ ನಿರತವಾಗಿದ್ದು, ಜತೆಗೆ ತಾನು ಖರ್ಚು ಮಾಡಿರುವ ಹಣದ ಬಗ್ಗೆ ಯೋಚಿಸುತ್ತಿದ್ದಾರೆ.

ಕೆಲವು ಅಭ್ಯರ್ಥಿಗಳು ಮತದಾರರಿಗೆ ಹಣ, ಸೀರೆ, ಗೃಹಪಯೋಗಿ ವಸ್ತುಗಳು ಸೇರಿದಂತೆ ನಾನಾ ರೀತಿಯಉಡುಗೊರೆ ನೀಡಿದ್ದು, ಇದರಿಂದ ತನಗೆ ಎಷ್ಟು ಮತ ಬರುತ್ತವೆ, ಗೆಲುವು ನಿಶ್ಚಿತವೇ ಎಂಬ ಚಿಂತನೆಯಲ್ಲಿಮುಳುಗಿದ್ದರೆ, ಇನ್ನೂ ಕೆಲವು ಅಭ್ಯರ್ಥಿಗಳು ವದಂತಿಗಳ ಆಧಾರದ ಮೇಲೆ ತಮ್ಮ ಸೋಲು-ಗೆಲುವನ್ನುಖಚಿತಪಡಿಸಿಕೊಳ್ಳುತ್ತಿರುವುದು ಸಾಮಾನ್ಯವಾಗಿ ಕೇಳಿಬರುತ್ತಿದೆ. ಅತೀ ಹೆಚ್ಚು ಹಳ್ಳಿಗಳನ್ನು ಹೊಂದಿರುವಮಾಸ್ತಿ ದೊಡ್ಡ ಹೋಬಳಿ ಕೇಂದ್ರವಾಗಿದೆ. ಕೆಲವುಗ್ರಾಮಗಳಲ್ಲಿ ಕೆಲವರು ಇಂತಹವರೇ ಗೆಲುವು ಸಾಧಿಸುತ್ತಾರೆ, ಸೋಲುತ್ತಾರೆ ಎಂದು ಬೆಟ್ಟಿಂಗ್‌ ಸಹಕಟ್ಟುತ್ತಿದ್ದಾರೆ. ಇನ್ನೊಂದೆಡೆ, ಅಭ್ಯರ್ಥಿಗಳು ಚುನಾವಣೆಗೂ ಮುನ್ನ ಹಿರಿಯರು ಕಂಡರೆ ನಮಸ್ಕರಿಸುವುದು ಹಾಗೂ ಕಂಡವರನ್ನೆಲ್ಲಮಾತನಾಡಿಸುತ್ತಿದ್ದರು. ಚುನಾವಣೆ ಮುಗಿದ ಮೇಲೆ ಎದುರುಗಡೆ ಬಂದರೂ ಕಂಡು ಕಾಣದಂತೆಹೋಗುತ್ತಾರೆ ಎಂದು ಜನಸಾಮಾನ್ಯರು ಮಾತನಾಡಿಕೊಳ್ಳುತ್ತಿದ್ದಾರೆ,

 

Advertisement

ಎಂ.ಮೂರ್ತಿ

Advertisement

Udayavani is now on Telegram. Click here to join our channel and stay updated with the latest news.

Next