ಅಳ್ನಾವರ: ಸ್ಥಳೀಯ ಪಪಂಗೆ ಚುನಾವಣೆ ಘೋಷಣೆಯಾಗಿದ್ದು, ಗುರುವಾರದಿಂದ ನಾಮಪತ್ರ ಸಲ್ಲಿಕೆ ಪ್ರಾರಂಭವಾಗಲಿದೆ ಎಂದು ತಹಶೀಲ್ದಾರ್, ಪಪಂ ಚುನಾವಣಾಧಿಕಾರಿ ಅಮರೇಶ ಪಮ್ಮಾರ ತಿಳಿಸಿದರು
ಚುನಾವಣೆ ನೀತಿಸಂಹಿತೆ ಜಾರಿಯಲ್ಲಿರುವುದರಿಂದ ಸಭೆ- ಸಮಾರಂಭಗಳನ್ನು ಆಯೋಜಿಸುವ ಪೂರ್ವದಲ್ಲಿ ಚುನಾವಣಾಧಿಕಾರಿಗಳಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಸಾರ್ವಜನಿಕರದ್ದಾಗಿದೆ ಎಂದರು.
ಸಹಾಯಕ ಚುನಾವಣಾಧಿಕಾರಿ ಶಿವಾನಂದ ಹೆಬ್ಬಳ್ಳಿ ಮಾತನಾಡಿ, ಪಪಂ 18 ವಾರ್ಡ್‌ಗಳ ಪೈಕಿ ಒಂದರಿಂದ ಹತ್ತು ವಾರ್ಡ್‌ಗಳಿಗೆ ಧಾರವಾಡ ತಹಶೀಲ್ದಾರರು ಹಾಗೂ ಹನ್ನೊಂದರಿಂದ ಹದಿನೆಂಟು ವಾರ್ಡ್‌ಗಳಿಗೆ ಅಳ್ನಾವರ ತಹಶೀಲ್ದಾರರು ಚುನಾವಣಾಧಿಕಾರಿಗಳಾಗಿದ್ದು, ಪಪಂ ಕಾರ್ಯಾಲಯದಲ್ಲಿ ನಾಮಪತ್ರಗಳ ಸ್ವೀಕೃತಿ ನಡೆಯಲಿದೆ. ಅಭ್ಯರ್ಥಿಗಳು ಕಾಲಕಾಲಕ್ಕೆ ಲೆಕ್ಕ ಪತ್ರ ಹಾಜರು ಪಡಿಸುವುದು ಕಡ್ಡಾಯವಾಗಿದೆ. ಅಳ್ನಾವರ ತಾಲೂಕು ಕೇಂದ್ರ ಸ್ಥಾನದಲ್ಲಿಯೇ ಮತ ಎಣಿಕೆ ನಡೆಯಲಿದೆ ಎಂದು ತಿಳಿಸಿದರು.
ಪಿಎಸ್‌ಐ ಅನಿಲಕುಮಾರ ಡಿ. ಮಾತನಾಡಿ ಚುನಾವಣೆ ಸಂದರ್ಭದಲ್ಲಿ ಬಳಕೆ ಮಾಡುವ ವಾಹನಗಳಿಗೆ ಪರವಾನಗಿ ಪಡೆದುಕೊಳ್ಳಬೇಕು. ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ನೀಡದಂತೆ ಪ್ರಚಾರ ಕೈಕೊಳ್ಳಬೇಕೆಂದರು.
Advertisement
ಪಪಂ ಕಾರ್ಯಾಲಯದಲ್ಲಿ ಬುಧವಾರ ನಡೆದ ರಾಜಕೀಯ ಪಕ್ಷದ ಮುಖಂಡರ ಮತ್ತು ಸಾರ್ವಜನಿಕರ ಸಭೆಯಲ್ಲಿ ಅವರು ಮಾತನಾಡಿ, ಮೇ 9ರಿಂದ 16ರ ವರೆಗೆ ನಾಮಪತ್ರಗಳ ಸ್ವೀಕೃತಿ ನಡೆಯಲಿದ್ದು ಅಗತ್ಯ ದಾಖಲೆಗಳೊಂದಿಗೆ ನಿಗದಿತ ನಮೂನೆಯಲ್ಲಿ ನಾಮಪತ್ರ ಸಲ್ಲಿಸಬೇಕು ಎಂದು ಹೇಳಿದರು.
Related Articles
Advertisement