Advertisement
ಬಿಜೆಪಿ, ಕಾಂಗ್ರೆಸ್ ಹಾಗೂ ರೈತಸಂಘದ ಕಾರ್ಯಕರ್ತರು ಸುಮಲತಾ ಅವರನ್ನು ಸುಮಾರು 1.25 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿದ್ದರು. ಆದರೆ ಗ್ರಾಪಂ ಚುನಾವಣೆ ಕಾರ್ಯಕರ್ತರ ಚುನಾವಣೆಯಾಗಿದ್ದು, ಗೆಲ್ಲಿಸಿದ್ದಕಾರ್ಯಕರ್ತರಿಗೆ ಬೆಂಬಲ ನೀಡದೆ ದೂರ ಉಳಿದಿದ್ದಾರೆ. ಮಂಡ್ಯ ಲೋಕಸಭೆ ವ್ಯಾಪ್ತಿಯ 8 ಕ್ಷೇತ್ರಗಳಲ್ಲಿ ಸಂಸದೆ ಸುಮಲತಾ ಅವರ ಗೆಲುವಿಗೆಕಾರ್ಯಕರ್ತರು ಸ್ವಾಭಿಮಾನಿಗಳಂತೆ ದುಡಿದಿದ್ದರು. ನಾಗಮಂಗಲ ಹೊರತುಪಡಿಸಿ ಉಳಿದ 7 ಕ್ಷೇತ್ರಗಳಲ್ಲೂ ಮುನ್ನಡೆ ತಂದುಕೊಟ್ಟಿದ್ದರು.
Related Articles
Advertisement
ಕಹಳೆ ಊದುವ ರೈತ ಚಿಹ್ನೆಗೆ ಬೇಡಿಕೆ: 2019ರಲ್ಲಿ ನಡೆದ ಸಾರ್ವತ್ರಿಕ ಲೋಕಸಭೆಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸಂಸದೆ ಸುಮಲತಾ ಅಂಬರೀಶ್ ಅವರು ಪಡೆದಿದ್ದ ಕಹಳೆ ಊದುವ ರೈತ ಚಿಹ್ನೆ ಪಡೆದು ಗೆಲುವು ಸಾಧಿಸಿದ್ದರು. ಈಗ ಆ ಚಿಹ್ನೆಗೆ ಹೆಚ್ಚು ಬೇಡಿಕೆ ಬಂದಿದೆ. ಮತದಾರರ ಮನದಲ್ಲಿ ಚಿಹ್ನೆ ಉಳಿದುಕೊಂಡಿರುವ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ದುಂಬಾಲು ಬಿದ್ದಿದ್ದಾರೆ.
ಮೊದಲ ಹಂತದಲ್ಲಿ ನಡೆಯುವ ಮಂಡ್ಯ, ಮದ್ದೂರು ಹಾಗೂ ಮಳವಳ್ಳಿ ತಾಲೂಕುಗಳ ಗ್ರಾಪಂ ಚುನಾವಣೆಯಲ್ಲಿ ಸ್ಪರ್ಧಿಸಿರುವ ಬಹುತೇಕ ಅಭ್ಯರ್ಥಿಗಳು ಇದೇ ಚಿಹ್ನೆಗೆ ಬೇಡಿಕೆ ಇಟ್ಟಿದ್ದರು. ಅದರಂತೆ ಹಲವು ಅಭ್ಯರ್ಥಿಗಳಿಗೆ ಚಿಹ್ನೆ ಸಿಕ್ಕಿದೆ. ಎರಡನೇ ಹಂತದಲ್ಲಿ ನಡೆಯಲಿರುವ ಪಾಂಡವಪುರ, ಶ್ರೀರಂಗಪಟ್ಟಣ, ಕೆ.ಆರ್.ಪೇಟೆ ಹಾಗೂ ನಾಗಮಂಗಲ ತಾಲೂಕುಗಳಲ್ಲಿಯೂ ಚಿಹ್ನೆಗೆ ಬೇಡಿಕೆ ಹೆಚ್ಚಾಗಿದೆ.
ಗೊಂದಲದಲ್ಲಿರುವ ಅಭ್ಯರ್ಥಿಗಳು :
ತಳಮಟ್ಟದಲ್ಲಿ ಸುಮಲತಾ ಗೆಲುವಿಗೆ ಶ್ರಮಿಸಿದ್ದ ಕಾರ್ಯಕರ್ತರು ಈಗಾಗಲೇ ಗ್ರಾಪಂ ಚುನಾವಣೆ ಅಭ್ಯರ್ಥಿಗಳಾಗಿದ್ದಾರೆ. ಜಿಲ್ಲೆಯ ಮಂಡ್ಯ, ಮದ್ದೂರು, ಶ್ರೀರಂಗಪಟ್ಟಣ,ಕೆ.ಆರ್.ಪೇಟೆ, ನಾಗಮಂಗಲ ಹಾಗೂ ಮಳವಳ್ಳಿ ತಾಲೂಕುಗಳಲ್ಲಿರುವ ಕೆಲವು ಅಭ್ಯರ್ಥಿಗಳು ಪಕ್ಷೇತರರಾಗಿ ಸ್ಪರ್ಧಿಸಿದ್ದರೆ,ಕೆಲವರುಕಾಂಗ್ರೆಸ್,ಬಿಜೆಪಿಹಾಗೂ ರೈತಸಂಘದ ಬೆಂಬಲಿತರಾಗಿ ಚುನಾವಣೆ ಎದುರಿಸಲು ಸಜ್ಜಾಗಿದ್ದಾರೆ.
ಕ್ಷೇತ್ರಕ್ಕೆ ಬಾರದ ಸಂಸದೆ : ಕಳೆದ ನವೆಂಬರ್ ತಿಂಗಳಲ್ಲಿ ಅಂಬರೀಶ್ ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ಜಿಲ್ಲೆಗೆ ಆಗಮಿಸಿದ್ದ ಸಂಸದೆ ಸುಮಲತಾ ಅವರು, ಗ್ರಾಪಂ ಚುನಾವಣೆ ಘೋಷಣೆಯಾದ ಬಳಿಕ ಕ್ಷೇತ್ರಕ್ಕೆ ಬಂದಿಲ್ಲ. ಇದರಿಂದ ಕಾರ್ಯಕರ್ತರು ಸಂಸದೆಯ ಆಗಮನದ ನಿರೀಕ್ಷೆಯಲ್ಲಿದ್ದಾರೆ.