Advertisement
ತಕ್ಷಣದಿಂದ ನೀತಿ ಸಂಹಿತೆ: ಜಿಲ್ಲೆಯ ಚಿಂತಾಮಣಿ ಹಾಗೂ ಗೌರಿಬಿದನೂರು ನಗರಸಭೆಗಳಿಗೆ ಚುನಾವಣೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ತಕ್ಷಣದಿಂದಲೇ ಆಯಾ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಗೆ ಒಳಪಟ್ಟು ಚುನಾವಣಾ ಮಾದರಿ ನೀತಿ ಸಂಹಿತೆ ನ.14 ರವರೆಗೂ ಜಾರಿಯಲ್ಲಿ ಇರಲಿದೆ. ಕಳೆದ ವಿಧಾನಸಭಾ ಚುನಾವಣೆಗೆ ಸಿದ್ಧಪಡಿಸಿದ್ದ ಮತದಾರರ ಪಟ್ಟಿಯನ್ನು ಬಳಸಿಕೊಂಡು ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಲು ಆಯೋಗ ನಿರ್ದೇಶನ ನೀಡಿದೆ.
Related Articles
Advertisement
ಅಭ್ಯರ್ಥಿಗಳಿಂದ ಕಡ್ಡಾಯವಾಗಿ ಅಭ್ಯರ್ಥಿ ಹಿನ್ನೆಲೆ, ಚರಾಸ್ಥಿ, ಸ್ಥಿರಾಸ್ತಿ, ಸ್ವ ವಿವರ, ವಿದ್ಯಾರ್ಹತೆ, ಆದಾಯದ ಮೂಲಗಳನ್ನು ಪಡೆಯಬೇಕೆಂದು ತಿಳಿಸಿದೆ. ನೀತಿಸಂಹಿತೆ ಉಲ್ಲಂಘನೆ ಆಗದಂತೆ ಎಚ್ಚರಿಕೆ ವಹಿಸುವುದು, ಮತದಾನದ ವೇಳೆ ನೋಟಾ ಅವಕಾಶ ಕಲ್ಪಿಸುವಂತೆ ಸೂಚಿಸಿರುವ ಆಯೋಗ, ಅಭ್ಯರ್ಥಿಗಳ ಹೆಸರಿನ ಮುಂದೆ ಭಾವಚಿತ್ರ ಅಳವಡಿಸುವಂತೆ ಸೂಚಿಸಿದೆ.
ರಾಜಕೀಯ ಜಿದ್ದಾಜಿದ್ಧಿ: ಗೌರಿಬಿದನೂರು, ಚಿಂತಾಮಣಿ ನಗರಸಭೆಗಳ ಆಡಳಿತ ಮಂಡಳಿ ಅವಧಿ ಮುಗಿದು ವರ್ಷ ಕಳೆದಿದ್ದು, ಇದೀಗ ಚುನಾವಣೆ ನಿಗದಿಯಾಗಿದೆ. ಈ ಎರಡು ಸ್ಥಳೀಯ ಸಂಸ್ಥೆಗಳಲ್ಲಿ ಸಾಕಷ್ಟು ರಾಜಕೀಯ ಪರಿಸ್ಥಿತಿ ಜಿದ್ದಾಜಿದ್ದಿನಿಂದ ಕೂಡಿದೆ. ಚಿಂತಾಮಣಿಯಲ್ಲಿ ಹಾಲಿ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ನೇತೃತ್ವದಲ್ಲಿ ಜೆಡಿಎಸ್ ಆಡಳಿತ ಹಿಡಿದಿತ್ತು. ಗೌರಿಬಿದನೂರಲ್ಲಿ ಕಾಂಗ್ರೆಸ್ ತನ್ನ ಪ್ರಾಬಲ್ಯ ಮೆರೆದಿತ್ತು. ಈಗ ಚಿಂತಾಮಣಿ ನಗರಸಭೆ ಚುನಾವಣೆ ರಾಜಕೀಯವಾಗಿ ಹೆಚ್ಚು ಮಹತ್ವ ಪಡೆದುಕೊಂಡಿದ್ದು, ಅಲ್ಲಿ ಹಾಲಿ ಶಾಸಕ ಕೃಷ್ಣಾರೆಡ್ಡಿ ಹಾಗೂ ಮಾಜಿ ಶಾಸಕ ಸುಧಾಕರ್ ಬೆಂಬಲಿಗರ ನಡುವೆ ನೇರ ಹಣಾಹಣಿ ನಡೆಯಲಿದೆ.
ಚಿಕ್ಕಬಳ್ಳಾಪುರ ನಗರಸಭೆಗಿಲ್ಲ ಎಲೆಕ್ಷನ್: ಜಿಲ್ಲೆಯಲ್ಲಿ ಈಗ ಬಾಕಿ ಉಳಿದಿದ್ದ ಗೌರಿಬಿದನೂರು, ಚಿಂತಾಮಣಿ ನಗರಸಭೆಗಳ ತಲಾ 31 ವಾರ್ಡ್‌ಗಳಿಗೆ ಚುನಾವಣೆ ನಿಗದಿಯಾಗಿದೆ. ಆದರೆ ಚಿಕ್ಕಬಳ್ಳಾಪುರ ನಗರಸಭೆಗೆ ಮಾತ್ರ ಚುನಾವಣೆ ನಿಗದಿಯಾಗದಿರುವುದು ರಾಜಕೀಯವಾಗಿ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಚಿಕ್ಕಬಳ್ಳಾಪುರ ನಗರಸಭೆಗೆ ಸಂಬಂಧಿಸಿದಂತೆ 17ನೇ ವಾರ್ಡ್‌ಗೆ ನಿಗದಿಪಡಿಸಿರುವ ಮೀಸಲಾತಿ ಪ್ರಶ್ನಿಸಿ ಇತ್ತೀಚೆಗೆ ಕೆಲವರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಅಲ್ಲಿ ಕೂಡ ಅರ್ಜಿ ವಜಾಗೊಂಡಿತ್ತು.
ಹೀಗಾಗಿ ಚಿಂತಾಮಣಿ, ಗೌರಿಬಿದನೂರು ಸೇರಿ ಚಿಕ್ಕಬಳ್ಳಾಪುರ ನಗರಸಭೆಗಳಿಗೆ ಒಂದೇ ಬಾರಿ ಚುನಾವಣೆ ನಿಗದಿಯಾಗಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ. ಜೊತೆಗೆ ರಾಜ್ಯದಲ್ಲಿರುವ ಅನರ್ಹ ಶಾಸಕರ ಕ್ಷೇತ್ರಗಳಲ್ಲಿ ಮಾತ್ರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಿಗದಿ ಮಾಡದಿರುವುದು ಕೂಡ ಚರ್ಚೆಗೆ ಗ್ರಾಸವಾಗಿದೆ.
* ಅ.24ಕ್ಕೆ ಜಿಲ್ಲಾಧಿಕಾರಿಗಳಿಂದ ಆಧಿಸೂಚನೆ ಪಕಟ* ಅ.31 ನಾಮಪತ್ರಗಳ ಸಲ್ಲಿಕೆಗೆ ಕೊನೆ ದಿನ
* ನ.2ಕ್ಕೆ ನಾಮಪತ್ರಗಳ ಪರಿಶೀಲನಾ ಕಾರ್ಯ
* ನ.4ಕ್ಕೆ ಉಮೇದುವಾರಿಕೆ ಹಿಂಪಡೆಯಲು ಕೊನೆ ದಿನ
.* ನ.12ಕ್ಕೆ 62 ವಾರ್ಡ್‌ಗಳಿಗೆ ಚುನಾವಣೆ
* ನ.14ಕ್ಕೆ ಮತ ಎಣಿಕೆ ಕಾರ್ಯ, (ತಾಲೂಕು ಕೇಂದ್ರ) ಚಿಕ್ಕಬಳ್ಳಾಪುರ ನಗರಸಭೆಗೆ ಚುನಾವಣೆ ನಿಗದಿಯಾಗಬೇಕಿತ್ತು. ಈಗಾಗಲೇ ವರ್ಷಕ್ಕೂ ಹೆಚ್ಚು ಚುನಾವಣೆ ನಡೆಸುವುದು ತಡವಾಗಿದೆ. ಯಾವ ಕಾರಣಕ್ಕೆ ಚುನಾವಣಾ ಆಯೋಗ ಚಿಕ್ಕಬಳ್ಳಾಪುರ ನಗರಸಭೆಗೆ ಚುನಾವಣೆ ನಿಗದಿ ಮಾಡಿಲ್ಲ ಎನ್ನುವುದು ಅರ್ಥವಾಗಿಲ್ಲ. ಸಿಎಂ ಯಡಿಯೂರಪ್ಪ, ರಾಜಕೀಯ ದುರುದ್ದೇಶದಿಂದ ಆಯೋಗದ ಮೇಲೆ ಒತ್ತಡ ಹೇರಿ ಅನರ್ಹ ಶಾಸಕರು ಇರುವ ಕ್ಷೇತ್ರಗಳಲ್ಲಿ ಸ್ಥಳೀಯ ಸಂಸ್ಥೆಗಳಲ್ಲಿ ಚುನಾವಣೆ ನಡೆಸದಂತೆ ತಡೆ ಹಿಡಿಯಲಾಗಿದೆ.
-ಎಸ್.ಎಂ.ರಫೀಕ್, ಕಾಂಗ್ರೆಸ್ ಹಿರಿಯ ಮುಖಂಡರು