Advertisement
ತುಳುನಾಡಿನ ಏಳು ಪ್ರಮುಖ ಜಾತ್ರೆಗಳಲ್ಲಿ ಒಂದಾಗಿರುವ ಕಾಲಾವಧಿ ಸುಗ್ಗಿ ಮಾರಿಪೂಜೆಗೆ ಪೂರ್ವಭಾವಿಯಾಗಿ ಮೂರೂ ಮಾರಿಗುಡಿಗಳ ಸುತ್ತಮುತ್ತಲೂ ವಿವಿಧ ಸಿದ್ಧತೆಗಳು ಪೂರ್ಣಗೊಂಡಿವೆ.
Related Articles
Advertisement
ಕಾಪು ಸುಗ್ಗಿಮಾರಿಪೂಜೆಯ ಬಂದೋಬಸ್ತ್‌ಗಾಗಿ ಕಾರ್ಕಳ ಉಪ ವಿಬಾಗದ ಪೋಲಿಸ್ ಉಪಾಽಕ್ಷಕ ಭರತ್ ರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ಹಳೇ ಮಾರಿಗುಡಿ ಸಭಾಂಗಣದಲ್ಲಿ ಸೋಮವಾರ ಪೊಲೀಸ್ ಬ್ರೀಫಿಂಗ್ ಸಭೆ ನಡೆಯಿತು. ಕಾಪು ವೃತ್ತ ನಿರೀಕ್ಷಕ ಪ್ರಕಾಶ್, ಕಾಪು ಎಸ್ಸೈ ರಾಘವೇಂದ್ರ ಸಿ. ಹಾಗೂ ಕಾಪು ವೃತ್ತ ವ್ಯಾಪ್ತಿಯ ಪೊಲೀಸ್ ಅಽಕಾರಿಗಳು ಮತ್ತು ಸಿಬಂದಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಸುಗ್ಗಿ ಮಾರಿಪೂಜೆಯ ಪ್ರಯುಕ್ತ ವಾಹನ ಸಂಚಾರ ಮತ್ತು ಭಕ್ತಾಽಗಳ ನೂಕುನುಗ್ಗಲು ನಿಯಂತ್ರಣಕ್ಕಾಗಿ ೧ ಡಿವೈಎಸ್ಪಿ, ೨ ಸರ್ಕಲ್ ಇನ್ಸ್‌ಪೆಕ್ಟರ್, ೮ ಮಂದಿ ಪಿಎಸ್ಸೈ, ೨೨ ಮಂದಿ ಎಎಸ್ಸೈ ಮತ್ತು ೨೧೦ ಮಂದಿ ಪೊಲೀಸ್ ಸಿಬ್ಬಂದಿಗಳು ನಿಯೋಜಿಸಲಾಗಿದೆ. ವಾಹನ ನಿಲಗಡೆಗೆ ನಾಲ್ಕು ಕಡೆಗಳಲ್ಲಿ ಸೆಕ್ಟರ್ ನಿರ್ಮಾಣ ಮಾಡಿ, ೯ ಕಡೆಗಳಲ್ಲಿ ಚೆಕ್‌ಪೋಸ್ಟ್ ಅಳವಡಿಸಿ ಸೂಕ್ತ ಬಂದೋಬಸ್ತ್ ಏರ್ಪಡಿಸಲಾಗಿದೆ. ಭಕ್ತರಿಗೆ ವಾಹನ ಪಾರ್ಕಿಂಗ್ ಮಾಡಲು ಕಾಪು ಡಿಗ್ರಿ ಕಾಲೇಜು ಮೈದಾನ, ವಿದ್ಯಾನಿಕೇತನ ಶಾಲೆಯ ಮೈದಾನ, ಬಂಗ್ಲೆ ಮೈದಾನ, ಬಂಟರ ಸಂಘದ ಮೈದಾನ, ಪುರಸಭೆಯ ಆವರಣದಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ.
ಕೊರೊನಾ ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸಲು ಮನವಿ : ಸುಗ್ಗಿ ಮಾರಿಪೂಜೆಗೆ ಬರುವ ಭಕ್ತಾಧಿಗಳು ಯಾವುದೇ ಆತಂಕವಿಲ್ಲದೇ ಕೊರೊನಾ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಿಕೊಂಡು ಮಾಸ್ಕ್ ಧರಿಸಿಕೊಂಡು, ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಬಂದು ಮಾರಿಪೂಜೆಯಲ್ಲಿ ಪಾಲ್ಗೊಂಡು ತಮ್ಮ ಹರಕೆಗಳನ್ನು ಸಲ್ಲಿಸಬಹುದಾಗಿದೆ ಎಂದು ಹಳೇ ಮಾರಿಗುಡಿ ದೇವಸ್ಥಾನದ ಆಡಳಿತ ಮೊಕ್ತೇಸರ ಪ್ರಸಾದ್ ಶೆಣೈ, ಹೊಸ ಮಾರಿಗುಡಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ರಮೇಶ್ ಹೆಗ್ಡೆ ಕಲ್ಯ ಮತ್ತು ಮೂರನೇ ಮಾರಿಗುಡಿಯ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಮೋಹನ್ ಬಂಗೇರ ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.