Advertisement

ಶಿವಮೊಗ್ಗದಲ್ಲಿ ಮಧು, ಮಂಡ್ಯದಲ್ಲಿ ಸ್ಥಳೀಯ ಅಭ್ಯರ್ಥಿ: ದೇವೇಗೌಡ

06:30 AM Oct 11, 2018 | Team Udayavani |

ವಿಜಯಪುರ: ಲೋಕಸಭೆ ಉಪ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಲ್ಲಿ ಮಾಜಿ ಶಾಸಕ ಮಧು ಬಂಗಾರಪ್ಪ ಅವರನ್ನು ಕಣಕ್ಕಿಳಿಸಲು ನಿರ್ಧರಿಸಲಾಗಿದೆ. ಮಂಡ್ಯ ಕ್ಷೇತ್ರದಿಂದ ನಮ್ಮ ಕುಟುಂಬದಿಂದ ಯಾರೂ ಕಣಕ್ಕಿಳಿಯುವುದಿಲ್ಲ. ಬದಲಾಗಿ ಸ್ಥಳೀಯ ನಾಯಕರಿಗೆ ಆದ್ಯತೆ ನೀಡಲಾಗುತ್ತದೆ ಎಂದು ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ  ಎಚ್‌.ಡಿ.ದೇವೇಗೌಡ ಸ್ಪಷ್ಟಪಡಿಸಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಧು ಬಂಗಾರಪ್ಪ ಸದ್ಯ ವಿದೇಶ ಪ್ರವಾಸದಲ್ಲಿದ್ದಾರೆ. ಅವರು ಮರಳಿದ ಬಳಿಕ ಈ ಬಗ್ಗೆ ಚರ್ಚಿಸಲಾಗುತ್ತದೆ. ಶಿವಮೊಗ್ಗ ಕ್ಷೇತ್ರದಿಂದ ಸ್ಪ ರ್ಧಿಸಲು ಮಧು ನಿರಾಕರಿಸಿದರೆ ಕಾಂಗ್ರೆಸ್‌ ವರಿಷ್ಠರೊಂದಿಗೆ ಚರ್ಚಿಸಿ ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುತ್ತದೆ. ಬಳ್ಳಾರಿ ಲೋಕಸಭೆ ಕ್ಷೇತ್ರವನ್ನು ಕಾಂಗ್ರೆಸ್‌ಗೆ ಬಿಡಲಾಗಿದೆ. ಅವರು ಯಾರನ್ನೇ ಕಣಕ್ಕಿಳಿಸಿದರೂ ಮೈತ್ರಿ ಪಕ್ಷಗಳು ಒಗ್ಗೂಡಿ ಗೆಲುವಿಗೆ ಶ್ರಮಿಸಲಿವೆ ಎಂದರು.

ಮೈತ್ರಿ ಸರ್ಕಾರ ಪತನ ಅಸಾಧ್ಯ: ದುಷ್ಟಶಕ್ತಿಗಳ ನಿಗ್ರಹಕ್ಕಾಗಿ ರಾಜ್ಯದಲ್ಲಿ ಕಾಂಗ್ರೆಸ್‌ ಜೊತೆ ಜೆಡಿಎಸ್‌ ಮೈತ್ರಿ ಮಾಡಿಕೊಂಡು ಕುಮಾರಸ್ವಾಮಿ ನೇತೃತ್ವದಲ್ಲಿ ಸರ್ಕಾರ ರಚಿಸಿದೆ. ಈ ಮೈತ್ರಿ ಸರ್ಕಾರ ಯಾವಾಗ ಬೀಳುತ್ತದೋ ಎಂದು ಕೆಲವರು ಸಂಶಯ ವ್ಯಕ್ತಪಡಿಸುತ್ತಿದ್ದಾರೆ. ಇಂಥ ಕನಸು ಈಡೇರದೆ ಪೂರ್ಣಾವ ಧಿ ಮುಗಿಸಲಿದೆ. ಸಮ್ಮಿಶ್ರ ಸರ್ಕಾರಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ, ಡಾ| ಜಿ.ಪರಮೇಶ್ವರ ಸೇರಿದಂತೆ ಉಭಯ ಪಕ್ಷಗಳ ಎಲ್ಲ ನಾಯಕರು ಐಕ್ಯತೆಯಿಂದ ನಿಂತಿದ್ದಾರೆ ಎಂದರು.

ರಾಜ್ಯದ ಮೈತ್ರಿ ಸರ್ಕಾರ ರೈತರ ಸಾಲಮನ್ನಾ ಮಾಡಿದ್ದರೂ ರೈತರ ಆತ್ಮಹತ್ಯೆ ನಡೆಯುತ್ತಲೇ ಇದೆ. ರಾಜ್ಯದ ರೈತರು ಕೃಷಿಗಾಗಿ ಖಾಸಗಿ ವ್ಯಕ್ತಿಗಳು, ಲೇವಾದೇವಿಗಾರರಿಂದ ಸಾಲ ಪಡೆದು ದೌರ್ಜನ್ಯಕ್ಕೆ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಈ ಕೃತ್ಯ ತಡೆಯಲು ರಾಜ್ಯ ಸರ್ಕಾರ ಋಣಭಾರ ಮುಕ್ತ ಕಾನೂನು ಜಾರಿಗೆ ಮುಂದಾಗಿದ್ದು, ರಾಷ್ಟ್ರಪತಿಗಳ ಅಂಕಿತಕ್ಕೆ ಕಾಯಲಾಗುತ್ತಿದೆ. ಈ ಕಾಯ್ದೆ ಜಾರಿಗೆ ಬಂದರೆ ರೈತರಿಗೆ ಅನಗತ್ಯ ಕಿರುಕುಳ ತಪ್ಪಲಿದೆ.
– ಎಚ್‌.ಡಿ.ದೇವೇಗೌಡ, ಮಾಜಿ ಪ್ರಧಾನಿ

ಬಿ ಫಾರಂಗಳಿಗೆ ರೇವಣ್ಣ ಪೂಜೆ
ಬೆಂಗಳೂರು:
ಉಪ ಚುನಾವಣೆಯಲ್ಲಿ ಜೆಡಿಎಸ್‌ ಸ್ಪರ್ಧೆ ಮಾಡುವ ರಾಮನಗರ ಹಾಗೂ ಮಂಡ್ಯ ಲೋಕಸಭೆ ಕ್ಷೇತ್ರದ ಬಿ ಫಾರಂಗಳಿಗೆ ಬುಧವಾರ ಪೂಜೆ ಮಾಡಿಸಲಾಯಿತು. ನವರಾತ್ರಿಯ ಮೊದಲ ದಿನ ಶುಭ ಎಂಬ ನಂಬಿಕೆಯಿಂದ ಚಾಮರಾಜಪೇಟೆಯ ಶಂಕರಮಠದ ಶಾರದಾಂಬೆ ದೇವಾಲಯದಲ್ಲಿ ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ ಎರಡು ಬಿ ಫಾರಂಗಳಿಗೆ ಪೂಜೆ ಮಾಡಿಸಿದರು. ನಂತರ, ಜೆಪಿ ನಗರದ ಲಕ್ಷ್ಮಿ ದೇವಾಲಯದಲ್ಲೂ ಪೂಜೆ ಮಾಡಿಸಲಾಯಿತು ಎಂದು ಹೇಳಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next