Advertisement

ಮೇ 20: ನಗರ ಸ್ಥಳೀಯ ಸಂಸ್ಥೆ ಉಪ ಚುನಾವಣೆ

07:52 PM Apr 28, 2022 | Team Udayavani |

ಬೆಂಗಳೂರು: ರಾಜ್ಯದ 7 ನಗರ ಸ್ಥಳೀಯ ಸಂಸ್ಥೆಗಳಲ್ಲಿ ವಿವಿಧ ಕಾರಣಗಳಿಗೆ ತೆರವಾಗಿರುವ 10 ಸ್ಥಾನಗಳಿಗೆ ಮೇ 20ರಂದು ಉಪ ಚುನಾವಣೆ ನಡೆಸಲು ರಾಜ್ಯ ಚುನಾವಣ ಆಯೋಗ ವೇಳಾಪಟ್ಟಿ ಪ್ರಕಟಿಸಿದ್ದು, 22ರಂದು ಮತ ಎಣಿಕೆ  ನಡೆಯಲಿದೆ.

Advertisement

ದಾವಣಗೆರೆ ಮಹಾನಗರ ಪಾಲಿಕೆಯ ವಾರ್ಡ್‌ ಸಂಖ್ಯೆ 28 ಮತ್ತು 37, ಚನ್ನಗಿರಿ ಪುರಸಭೆಯ ವಾರ್ಡ್‌ ಸಂಖ್ಯೆ 16, ಬಸವಕಲ್ಯಾಣ ನಗರಸಭೆಯ ವಾರ್ಡ್‌ ಸಂಖ್ಯೆ 25, ಆನೇಕಲ್‌ ನಗರಸಭೆಯ 14, 16, 17 ವಾರ್ಡ್‌ಗಳಿಗೆ, ಹೊಳೆನರಸೀಪುರ ಪುರಸಭೆಯ ವಾರ್ಡ್‌ ಸಂಖ್ಯೆ 3, ಜೇವರ್ಗಿ ಪುರಸಭೆಯ ವಾರ್ಡ್‌ ಸಂಖ್ಯೆ 10, ಸಂಕೇಶ್ವರ ಪುರಸಭೆಯ ವಾರ್ಡ್‌ ಸಂಖ್ಯೆ 13ರಲ್ಲಿ ಉಪಚುನಾವಣೆ ನಡೆಯಲಿದೆ.

ವೇಳಾಪಟ್ಟಿ:

ಮೇ 2: ಜಿಲ್ಲಾಧಿಕಾರಿಗಳಿಂದ ಅಧಿಸೂಚನೆ ಪ್ರಕಟ.

ಮೇ 9: ನಾಮಪತ್ರ ಸಲ್ಲಿಸಲು ಕೊನೆ ದಿನ.

Advertisement

ಮೇ 10: ನಾಮಪತ್ರ ಪರಿಶೀಲನೆ.

ಮೇ 12: ನಾಮಪತ್ರ ಹಿಂಪಡೆಯಲು ಕೊನೆ ದಿನ.

ಮೇ 20: ಮತದಾನ (ಬೆಳಗ್ಗೆ 7ರಿಂದ ಸಂಜೆ 5)

ಮೇ 22: ಮತ ಎಣಿಕೆ

Advertisement

Udayavani is now on Telegram. Click here to join our channel and stay updated with the latest news.

Next