Advertisement

ನಗರಸಭೆ ಅಧಿಕಾರ ಸಿಗದಿದ್ದರೆ ಸದಸ್ಯತ್ವಕ್ಕೆ ರಾಜೀನಾಮೆ?

04:39 PM Nov 06, 2020 | Suhan S |

ನೆಲಮಂಗಲ: ಗ್ರಾಮಾಂತರ ಜಿಲ್ಲೆಯಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ನೆಲಮಂಗಲ ನಗರಸಭೆ ಅಧ್ಯಕ್ಷ -ಉಪಾಧ್ಯಕ್ಷ ಸ್ಥಾನಗಳ ಪದಗ್ರಹಣಕ್ಕೆ ಕೂನೆಗೂ ನ.12ಕ್ಕೆಸಮಯ ನಿಗದಿಪಡಿಸಲಾಗಿದ್ದು ತಾಲೂಕಿನಾದ್ಯಂತ ತೀವ್ರ ಚರ್ಚೆಗೆ ಎಡೆಮಾಡಿಕೊಟ್ಟಿದೆ.

Advertisement

23 ಮಂದಿ ಸದಸ್ಯ ಬಲದ ನೆಲಮಂಗಲ ಪುರಸಭೆ ಆಡಳಿತ ಮಂಡಳಿ ರಚನೆಗೆ 2019ರ ಜೂ.1ರಂದು ನಡೆಸಿದ ಚುನಾವಣೆಯಲ್ಲಿ13 ಮಂದಿ ಜೆಡಿಎಸ್‌,07 ಕಾಂಗ್ರೆಸ್‌, 02 ಬಿಜೆಪಿ, 01 ಸ್ವತಂತ್ರ ಅಭ್ಯರ್ಥಿಗಳು ಜಯಗಳಿಸಿದ್ದರು.

ಪುರಸಭೆ ಚುನಾವಣೆ ಪೂರ್ವದಲ್ಲಿಯೇಚಾಲನೆಯಲ್ಲಿದ್ದ ಪುರಸಭೆಯನ್ನು ನಗರಸಭೆಯನ್ನಾಗಿ ಮೇಲ್ದರ್ಜೆಗೇರಿಸುವ ಪ್ರಕ್ರಿಯೆ ಅಂತ್ಯಗೊಂಡು ಅಧಿಕೃತವಾಗಿ ಸರ್ಕಾರ ಗ್ರೇಡ್‌-2 ನಗರಸಭೆಯನ್ನಾಗಿಕಾನೂನು ರೀತ್ಯಾ ಉನ್ನತೀಕರಿಸಿ ಆದೇಶ ಹೊರಡಿಸಲಾಗಿತ್ತು. ನಂತರದಲ್ಲಿ ಪುರಸಭೆ ಸದಸ್ಯರಾಗಿ ಆಯ್ಕೆಯಾಗಿದ್ದ ಸದಸ್ಯರು ಹಾಗೂ ಪುರಸಭೆಯನ್ನು ನಗರಸಭೆಯನ್ನಾಗಿ ಉನ್ನತೀಕರಿಸಲು ವಿಲೀನಗೊಳಿಸಿಕೊಳ್ಳಲಾಗಿದ್ದ ಅರಿಶಿನಕುಂಟೆ ಹಾಗೂ ವಾಜರಹಳ್ಳಿ ಗ್ರಾಪಂ ವ್ಯಾಪ್ತಿಯ ಪೂರ್ಣಭಾಗ ಮತ್ತು ಬಸವನಹಳ್ಳಿ ಮತ್ತು ವಿಶ್ವೇಶ್ವರ ಪುರ ಗ್ರಾಪಂನ ಕೆಲ ಆಯ್ದ ಭಾಗಗಳನ್ನು ವಿಲೀನಿಕರಿಸಿ ನಗರಸಭೆ ಆಗಿದಿದ್ದರ ಹಿನ್ನೆಲೆಯಲ್ಲಿ ಕೆಲ ಮಾಜಿ ಗ್ರಾಪಂ ಸದಸ್ಯರು ನಮ್ಮ ಗ್ರಾಪಂ ಮತ್ತು ವಾರ್ಡ್‌ ವಿಲೀನಿಕರಿಸಿಕೊಂಡಿರುವ ಹಿನ್ನೆಲೆಯಲ್ಲಿ ನಮಗೂ ನಗರಸಭೆಯಲ್ಲಿ ಅವಕಾಶ ಕಲ್ಪಿಸಿಕೊಡಬೇಕು, ಇಲ್ಲವಾದಲ್ಲಿ ನೂತನವಾಗಿ ನೂತನ ನಗರಸಭೆಗೆ ಚುನಾವಣೆ ನಡೆಸಬೇಕೆಂದು ನ್ಯಾಯಾಲಯದ ಮೆಟ್ಟಿಲೇರಿದ್ದರು.  ಕೊನೆಗೂ ಹಗ್ಗ ಜಗ್ಗಾಟದ ನಡುವೆ ನ.12 ರಂದು ಚುನಾವಣೆ ಘೋಷಿಸಲಾಗಿದ್ದು ಪುರಸಭೆ ಚುನಾವಣೆಯಲ್ಲಿ ಆಯ್ಕೆಯಾದ ಸದಸ್ಯರಿಗೆ ಅಧ್ಯಕ್ಷ -ಉಪಾಧ್ಯಕ್ಷರ ಚುನಾವಣೆ ಸಭೆಯ ನೋಟಿಸ್‌ ಜಾರಿಮಾಡಲಾಗಿದೆ.

ಮೀಸಲು: ನೂತನ ನಗರಸಭೆ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ವರ್ಗಕ್ಕೆ ಮೀಸಲಾದರೆ ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಮಹಿಳೆ ವರ್ಗಕ್ಕೆ ಮೀಸಲಾಗಿದೆ.

ಜತೆಗಿರುತ್ತಾರಾ?: ಪುರಸಭೆ ಚುನಾವಣೆಯಲ್ಲಿ ಗೆದ್ದು ಬೀಗಿದ್ದ 23 ಸದಸ್ಯರೆಲ್ಲರೂ ಒಗ್ಗಟ್ಟಿನ ಮಂತ್ರ ಪಠಿಸಿ ತಮ್ಮ ಅಸ್ತಿತ್ವ ಉಳಿಸಿಕೊಳ್ಳುವುದಕ್ಕಾಗಿ ಪಕ್ಷಭೇದ ಮರೆತು ಕಾನೂನು ಹೋರಾಟದಲ್ಲಿ ಕೈ ಜೋಡಿಸಿದ್ದರು. ಆದರೆ ಹಣ ಅಧಿಕಾರ ಎಂಬುದು ತಂದೆ ಮಕ್ಕಳನ್ನು ದೂರಮಾಡುತ್ತದೆ ಎಂಬ ಗಾದೆಯಂತೆ ಅಧ್ಯಕ್ಷ ಉಪಾಧ್ಯಕ್ಷರ ಸ್ಥಾನಕ್ಕಾಗಿ ಪಕ್ಷ ಸಂಘಟನೆ ಮಾಡುತ್ತಾರೋ ಅಥವಾ ಅಧಿಕಾರ ಅವಧಿಯನ್ನು ಹರಿದು ಹಂಚಿಕೊಳ್ಳುವ ಮೂಲಕ ಜೊತೆಯಲ್ಲಿರುತ್ತಾರೋ ಎಂಬುದನ್ನು ಕಾದುನೋಡಬೇಕಿದೆ. ಹಾಗೊಮ್ಮೆ ಪಕ್ಷ ಸಂಘಟನೆಗೆಮುಂದಾದರೆ ನೂತನ ನಗರಸಭೆ ಜೆಡಿಎಸ್‌ ತೆಕ್ಕೆಗೆ ಜಾರುವುದು ನಿಶ್ಚಿತವಾದರೂ ಬಿಜೆಪಿ-ಕಾಂಗ್ರೆಸ್‌ ಮೈತ್ರಿಯಾದರೆ ತೆನೆಹೊತ್ತ ಮಹಿಳೆ ಪಾಡು ನಗರದಲ್ಲಿ ಹೇಳ ತೀರದಾಗುತ್ತದೆ.

Advertisement

11ಮಹಿಳೆಯರು: ಪುರಸಭೆ ಆಡಳಿತ ಮಂಡಳಿಗೆ ಆಯ್ಕೆಯಾದ ಚುನಾಯಿತ ಸದಸ್ಯರಲ್ಲಿ 11 ಮಂದಿ ಮಹಿಳೆಯರಿದ್ದು 12ಮಂದಿ ಪುರುಷ ಸದಸ್ಯರಿದ್ದಾರೆ. ಅಧ್ಯಕ್ಷ -ಉಪಾಧ್ಯಕ್ಷರ ಸ್ಥಾನ ಮಹಿಳೆಯರಿಗೆ ಮೀಸಲಾ ಗಿರುವ ಹಿನ್ನೆಲೆಯಲ್ಲಿ ಯಾವ ಪಕ್ಷದ ಸದಸ್ಯರಿಗೆ ಅಧ್ಯಕ್ಷ ಸ್ಥಾನ ಪಾಧ್ಯಕ್ಷ ಸ್ಥಾನ ಒಲಿಯುತ್ತದೆಯೋ ಎಂಬುದು ಕುತೂಹಲಕ್ಕೆಕಾರಣವಾಗಿದೆ.

ನ.10ಕ್ಕೆ ತಿರುವು: ಈಗಾಗಲೇ ಪುರಸಭೆ ನಗರಸಭೆಯಾಗಿ ಉನ್ನತೀಕರಣಗೊಂಡ ಬಳಿಕ361(3) ಅಡಿ ಪುರಸಭೆ ಸದಸ್ಯರನ್ನು ನಗರಸಭೆ ಸದಸ್ಯರನ್ನಾಗಿಸಿದಂತೆ 360(ಡಿ) ಅನ್ವಯ ನಗರಸಭೆಗೆ ವಿಲೀನಗೊಂಡ ಗ್ರಾಪಂ ವ್ಯಾಪ್ತಿಗೆ ಹೆಚ್ಚುವರಿ ಸದಸ್ಯರನೇಮಕ ಮಾಡಿಲ್ಲ ಎಂದು ಗ್ರಾಮೀಣ ಭಾಗದ ಜನಪ್ರತಿನಿಧಿಗಳು ನ್ಯಾಯಾಲಯದಲ್ಲಿ ಕಾನೂನು ಹೋರಾಟ ಮಾಡುತ್ತಿದ್ದು ಪ್ರಕರಣ ವಿಚಾರಣೆ ಹಂತದಲ್ಲಿದೆ. ನ.10ರಂದು ಸರ್ಕಾರ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕಿದ್ದು ನ್ಯಾಯಾಲಯದ ಆದೇಶದ ಮೇಲೆ ಅಧ್ಯಕ್ಷ -ಉಪಾಧ್ಯಕ್ಷರ ಚುನಾವಣೆ ತಿರುವು ಪಡೆದುಕೊಳ್ಳಲಿದೆ.

ನಿರೀಕ್ಷೆ ಹುಸಿಯಾದರೆ ರಾಜೀನಾಮೆ? :  ಕಾನೂನು ಹೋರಾಟದಲ್ಲಿಕೈಜೋಡಿಸಿ ತಮ್ಮದೇ ಆದ ಬಲಪ್ರದರ್ಶನಕ್ಕೆ ಮುಂದಾಗಿದ್ದ ಸರ್ವಪಕ್ಷಮುಖಂಡರು, ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆವಿಚಾರದಲ್ಲಿ ಸ್ವಲ್ಪ ಏರುಪೇರಾದರೆ ಅಥವಾ ತಮ್ಮ ನಿರೀಕ್ಷೆ ಹುಸಿಯಾದರೆ ಪುರಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ಸುಮಾರು3-4 ಮಂದಿಸದಸ್ಯರು ರಾಜೀನಾಮೆ ನೀಡುವ ಸುಳಿವು ನೀಡಿದ್ದಾರೆಂಬ ಮಾತು ಸಾರ್ವಜನಿಕ ವಲಯದಲ್ಲಿಕೇಳಿ ಬಂದಿದ್ದು ಯಾವ ಪಕ್ಷದ ಯಾವ ಸದಸ್ಯರು ರಾಜೀನಾಮೆ ನೀಡುತ್ತಾರೆಂಬುದು ತಿಳಿದು ಬಂದಿಲ್ಲ.

 

ಕೊಟ್ರೇಶ್‌.ಆರ್‌

Advertisement

Udayavani is now on Telegram. Click here to join our channel and stay updated with the latest news.

Next