Advertisement
ಕಳೆದ 2 ವರ್ಷ ಮೀಸಲಾತಿ ಗೊಂದಲದಿಂದ ನೆನೆಗುದಿಗೆ ಬಿದ್ದಿದ್ದ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳ ಚುನಾವಣೆಗೆ ಹೈಕೋರ್ಟ್ ಹಸಿರು ನಿಶಾನೆ ತೋರಿದೆ. ನ.2ರೊಳಗೆ ಚುನಾವಣೆ ಮುಗಿಸುವಂತೆ ಸೂಚಿಸಿದೆ. ಈ ಹಿಂದೆ ಮೀಸಲಾತಿ ಬಗೆಹರಿಸಿ, ಅ.20ರಂದು ಚುನಾವಣೆನಿಗದಿಪಡಿಸಲಾಗಿತ್ತು. ಆದರೆ, ಹಾಸನ ನಗರಸಭೆಯ ಮೀಸಲಾತಿ ಗೊಂದಲದಿಂದ ಮತ್ತೆ ತಡೆ ನೀಡಲಾಗಿತ್ತು. ನಗರಸಭೆ ಒಟ್ಟು ಸದಸ್ಯರ ಬಲಾಬಲ 35 ಸದಸ್ಯರಿದ್ದು, ಇದರಲ್ಲಿ ಜೆಡಿಎಸ್ 18, ಕಾಂಗ್ರೆಸ್ 10, ಬಿಜೆಪಿ 2, ಪಕ್ಷೇತರರು 5 ಮಂದಿ ಇದ್ದಾರೆ. ಅಧ್ಯಕ್ಷ ಸ್ಥಾನ ಸಾಮಾನ್ಯ ಹಾಗೂ ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗಕ್ಕೆ ಮೀಸಲಾಗಿದೆ.
Related Articles
Advertisement
ಉಪಾಧ್ಯಕ್ಷ ಸ್ಥಾನಕ್ಕೂ ಪೈಪೋಟಿ: ಜೆಡಿಎಸ್‌ನಲ್ಲಿ ಉಪಾಧ್ಯಕ್ಷ ಸ್ಥಾನಕ್ಕೂ ಪೈಪೋಟಿ ಶುರುವಾಗಿದೆ. 14ನೇ ವಾರ್ಡ್‌ನ ಮಹದೇವು, 16ನೇ ವಾರ್ಡ್‌ನ ಮಂಗಳ ಪುಟ್ಟಸ್ವಾಮಿ, 13ನೇ ವಾರ್ಡ್‌ನ ಮುಜೂರ್ ಹೆಸರು ಕೇಳಿ ಬರುತ್ತಿದೆ. ಮೂವರಲ್ಲಿ ಯಾರಿಗೆ ಸಿಗಲಿದೆ ಎಂಬುದು ಕುತೂಹಲ ಕೆರಳಿಸಿದೆ.
ಕೈ ಎತ್ತುವ ಮೂಲಕ ಮತದಾನ : ಚುನಾವಣೆಯಲ್ಲಿ ಭಾಗವಹಿಸುವ ಸದಸ್ಯರುಅಭ್ಯರ್ಥಿಗಳ ಪರ ಕೈ ಎತ್ತುವ ಮೂಲಕ ಮತ ಚಲಾಯಿಸಿ, ನಂತರ ಪುಸ್ತಕದಲ್ಲಿ ಸಹಿ ಹಾಕುವಪ್ರಕ್ರಿಯೆ ಮೂಲಕ ಚುನಾವಣೆ ನಡೆಯಲಿದೆ. ಗೈರಾಗುವ ಸದಸ್ಯರು ಹಾಗೂ ಹಾಜರಿದ್ದು ಯಾರ ಪರವೂ ಮತ ಹಾಕದಿದ್ದರೆ ಅಂಥವರನ್ನು ತಟಸ್ಥರೆಂದು ತೀರ್ಮಾನಿಸಲಾಗುತ್ತದೆ. ಉಪವಿಭಾಗಾಧಿಕಾರಿ ನೇತೃತ್ವದಲ್ಲಿ ಚುನಾವಣೆ ಪ್ರಕ್ರಿಯೆ ನಡೆಯಲಿದೆ.
ಅಧಿಕಾರಾವಧಿ ಹಂಚಿಕೆ ಸೂತ್ರ : ಜೆಡಿಎಸ್‌ನಲ್ಲಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ನಡೆಯುತ್ತಿರುವ ರಾಜಕೀಯ ಬೆಳವಣಿಗೆಯಲ್ಲಿ ಅಧಿಕಾರಾವಧಿ ಹಂಚಿಕೆ ಸೂತ್ರ ನಡೆಯಬಹುದು. ಆಕಾಂಕ್ಷಿತರು ಹೆಚ್ಚಾಗಿರುವುದರಿಂದ ಒಪ್ಪಂದಗಳು ಏರ್ಪಡುವ ಮಾತುಗಳು ಕೇಳಿ ಬರುತ್ತಿದೆ. ಮೊದಲ ಅವಧಿಯಲ್ಲಿ ಅಧ್ಯಕ್ಷ ಸ್ಥಾನ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಪುರುಷ ಸದಸ್ಯರಿಗೆ ನೀಡುವ ಯೋಜನೆಯೂ ಇದೆ. ಇಲ್ಲದಿದ್ದರೆ ಅದು ಬದಲಾಗುವ ಸಾಧ್ಯತೆಯೂ ಇದ್ದು, ಮೊದಲ ಅವಧಿ ಎರಡೂ ಸ್ಥಾನಗಳಿಗೆ ಪುರುಷರಿಗೆ ನೀಡಿ, ಎರಡನೇ ಅವಧಿ ಮಹಿಳೆಯರಿಗೂ ನೀಡುವ ಒಪ್ಪಂದ ತಳ್ಳಿ ಹಾಕುವಂತಿಲ್ಲ.
ಚುನಾವಣೆ ಪ್ರಕ್ರಿಯೆ : ನ.2ರ ಬೆಳಗ್ಗೆ 9ರಿಂದ 10ರವರೆಗೆ ನಾಮಪತ್ರ ಸಲ್ಲಿಸಲು ಅವಕಾಶವಿದೆ. ಮಧ್ಯಾಹ್ನ 12ರಿಂದ 12.15ರವರೆಗೆ ನಾಮಪತ್ರಗಳಪರಿಶೀಲನೆ ನಡೆಯಲಿದೆ. ಮಧ್ಯಾಹ್ನ 12.15ರಿಂದ 12.25ರವರೆಗೆ ನಾಮಪತ್ರಗಳನ್ನು ಕಾನೂನು ಬದ್ಧವಾಗಿ ಹಿಂಪಡೆಯಲು ಅವಕಾಶನೀಡಲಾಗಿದ್ದು, ನಂತರ ಅವಶ್ಯಕತೆ ಇದ್ದಲ್ಲಿ ಚುನಾವಣೆ ನಡೆಯಲಿದೆ.
– ಎಚ್.ಶಿವರಾಜು