Advertisement

ಪುರಸಭೆ ಅಖಾಡದಲ್ಲೂ ಜಾತಿಯತೆ ಅಸ್ತ್ರ!

02:29 PM Dec 21, 2021 | Team Udayavani |

ಮಸ್ಕಿ: ಪುರಸಭೆ ವ್ಯಾಪ್ತಿಯಲ್ಲಿ ಕಾಂಗ್ರೆಸ್‌, ಬಿಜೆಪಿ ಹಾಗೂ ಜೆಡಿಎಸ್‌ ಅಭ್ಯರ್ಥಿಗಳು, ನಾಯಕರುಅಧಿಕೃತವಾಗಿ ಫೀಲ್ಡ್‌ಗೆ ಇಳಿಯುವ ಮೂಲಕ ಭರ್ಜರಿಪ್ರಚಾರ ನಡೆಸಿದ್ದಾರೆ. ಜಾತಿವಾರು ಲೆಕ್ಕಚಾರದಡಿ ಮತಬೇಟೆ ನಡೆಸಿದ್ದು, ಚುನಾವಣೆ ಕಣ ತೀವ್ರ ರಂಗು ಪಡೆದಿದೆ.

Advertisement

ಮಸ್ಕಿ ಪುರಸಭೆ ವ್ಯಾಪ್ತಿಯಲ್ಲಿ ಒಟ್ಟು 23 ವಾರ್ಡ್‌ ಗಳಿದ್ದು, 12 ಸ್ಥಾನಗಳು ಪುರುಷರಿಗೆ ಮೀಸಲಾಗಿದ್ದರೆ, ಉಳಿದ 11 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿವೆ. ಇದರಲ್ಲಿ 12 ವಾರ್ಡ್‌ಗಳಿಗೆ ಸಾಮಾನ್ಯ, 6 ವಾರ್ಡ್‌ಗೆ ಪರಿಶಿಷ್ಟ ಜಾತಿ, 2-ಪರಿಶಿಷ್ಟ ಪಂಗಡಕ್ಕೆ, 2-ಬಿಸಿಎಂ(ಎ)ಹಾಗೂ 1 ವಾರ್ಡ್‌ನಲ್ಲಿ ಬಿಸಿಎಂ(ಬಿ)ಯಂತೆ ಮೀಸಲಾತಿ ನಿಗದಿಯಾಗಿದೆ. ಈ ಮೀಸಲು ಅನ್ವಯಬಹುತೇಕ ವಾರ್ಡ್‌ಗಳಲ್ಲಿ ಆಯಾ ಸಮುದಾಯದ ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದರೆ, ಅಭ್ಯರ್ಥಿ ಇರದಸಾಮಾನ್ಯ ಕ್ಷೇತ್ರಗಳಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸೇರಿ ಹಿಂದುಳಿದ ವರ್ಗದ ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದಾರೆ. ಆದರೆ, ಕಣದಲ್ಲಿ ಇರುವವರು ಯಾರೇ ಆಗಿರಲಿ ಇಲ್ಲಿ ಜಾತಿ ಲೆಕ್ಕಚಾರದಡಿ ವೋಟು ಪಡೆಯುವ ಕಸರತ್ತು ಕಾಂಗ್ರೆಸ್‌, ಬಿಜೆಪಿ ಹಾಗೂ ಜೆಡಿಎಸ್‌ ಅಭ್ಯರ್ಥಿಗಳು ನಡೆಸಿದ್ದಾರೆ.

ಹೀಗಿವೆ ಅಂಕಿ-ಸಂಖ್ಯೆ: ಮಸ್ಕಿ ಪುರಸಭೆಯ 23 ವಾರ್ಡ್‌ ಗಳಲ್ಲಿ ಒಟ್ಟು 19,185 ಮತದಾರರಿದ್ದಾರೆ. ಇದರಲ್ಲಿ 9196 ಪುರುಷ ಮತದಾರರು, 9989 ಮಹಿಳಾ ಮತದಾರರು ಇದ್ದಾರೆ. ಪುರುಷರಿಗಿಂತ ಮಹಿಳಾ ಮತದಾರರೇ 793 ಮತದಾರರು ಅಧಿಕವಾಗಿದ್ದಾರೆ. ಆದರೆ, ಇಲ್ಲಿ ಪುರುಷ-ಮಹಿಳಾ ಮತದಾರರು ಎನ್ನುವುದಕ್ಕಿಂತ ಜಾತಿವಾರು ಮತದಾರರೇ ನಿರ್ಣಾಯಕವಾಗಿದ್ದರಿಂದ ಆಯಾಸಮುದಾಯದ ಮತಗಳನ್ನು ಓಲೈಸಿಕೊಳ್ಳುವ ಕಸರತ್ತು ಚುನಾವಣೆ ಅಖಾಡದಲ್ಲಿ ತೀವ್ರವಾಗಿದೆ.

ಮಸ್ಕಿ ಪಟ್ಟಣದ ಬಹುತೇಕ ಎಲ್ಲ ವಾರ್ಡ್‌ಗಳಲ್ಲಿಲಿಂಗಾಯತ, ಎಸ್ಸಿ, ಅಲ್ಪಸಂಖ್ಯಾತ ಸಮುದಾಯದ ಮತದಾರರು ಸಾಮಾನ್ಯವಾಗಿದ್ದಾರೆ. ಕೆಲವು ವಾರ್ಡ್‌ಗಳಲ್ಲಿ ಮಾತ್ರ ಎಸ್ಟಿ, ಕುರುಬ, ಸಿಂಪಿಗೇರ ಅಧಿಕವಾಗಿರುವುದು ಕಂಡು ಬರುತ್ತಿದೆ. ಇದೇ ಕಾರಣಕ್ಕೆ ಆಯಾ ವಾರ್ಡ್‌ಗಳಲ್ಲಿನ ಜಾತಿವಾರು ಮತಗಳ ಅಂಕಿ-ಸಂಖ್ಯೆ ಪಡೆದು ವೋಟ್‌ಗಳನ್ನು ಭದ್ರಪಡಿಸಿಕೊಳ್ಳುವ ಪ್ರಯತ್ನ ಮೂರು ಪಕ್ಷದ ನಾಯಕರಿಂದ ನಡೆಯುತ್ತಿದೆ.

ತೀವ್ರ ಕಸರತ್ತು: ಬಿಜೆಪಿಯಲ್ಲಿ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್‌, ಮಂಡಲ ಅಧ್ಯಕ್ಷಶಿವಪುತ್ರಪ್ಪ ಅರಳಹಳ್ಳಿ ನೇತೃತ್ವದಲ್ಲಿ ಎಲ್ಲ ವಾರ್ಡ್‌ಗಳಲ್ಲೂ ಪ್ರಚಾರ ಆರಂಭಿಸಲಾಗಿದೆ. ವಾರ್ಡ್‌ವಾರುಸಭೆಗಳು, ಮನೆ-ಮನೆಗೂ ತೆರಳಿ ಮತಯಾಚನೆ ಮಾಡುತ್ತಿರುವುದು ಕಂಡು ಬರುತ್ತಿದೆ. ಉಪಚುನಾವಣೆ ಸೋಲಿನ ಬಳಿಕ ತೀವ್ರ ಪ್ರತಿಷ್ಟೆಯಾಗಿ ಪಡೆದುಕೊಂಡ ಬಿಜೆಪಿ ಮಸ್ಕಿ ಪುರಸಭೆಯ ಗದ್ದುಗೆ ಹಿಡಿಯಲು ಎಲ್ಲ ತಂತ್ರಗಳನ್ನು ಪ್ರಯೋಗಿಸಲಾರಂಭಿಸಿದೆ. ಆಯಾ ಸಮುದಾಯದ ಮುಖಂಡರ ಪ್ರತ್ಯೇಕ ಸಭೆಗಳನ್ನು ನಡೆಸಿ, ಜಾತಿವಾರು ಅಗತ್ಯವಿರುವ ಬೇಡಿಕೆಯನ್ನು ಪಟ್ಟಿ ಮಾಡಿಕೊಂಡು ಈಡೇರಿಸುವ ಪ್ರಯತ್ನ ಸಾಗಿದೆ.

Advertisement

ಇಲ್ಲೂ ಅದೇ ಮಾನದಂಡ: ಇನ್ನು ಟಿಕೆಟ್‌ ಹಂಚಿಕೆಯಲ್ಲೂ ಹೀಗೆ ಜಾತಿವಾರು ಲೆಕ್ಕಾಚಾರ ಹಾಕಿದ ಕಾಂಗ್ರೆಸ್‌ ಪ್ರಚಾರದಲ್ಲಿಯೂ ಅಂತಹದ್ದೇಪ್ರಯೋಗ ನಡೆಸುತ್ತಿದೆ. ಶಾಸಕ ಆರ್‌.ಬಸನಗೌಡತುರುವಿಹಾಳ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷಮಲ್ಲಿಕಾರ್ಜುನ ಯದ್ದಲದಿನ್ನಿ, ಮುಖಂಡ ಸಿದ್ದಣ್ಣ ಹೂವಿನಬಾವಿ ಸೇರಿ ಇತರೆ ನಾಯಕರು ಫೀಲ್ಡ್‌ ಗೆ ಇಳಿದಿದ್ದು, ವಾರ್ಡ್‌ವಾರು ಸಮುದಾಯಗಳ ಅಂಕಿ-ಸಂಖ್ಯೆ, ಪ್ರಭಾವ ತಿಳಿದುಕೊಂಡು ವೋಟ್‌ ಖಾತರಿಪಡಿಸುವುದಕ್ಕೆ ಕೈ ಹಾಕಿದ್ದಾರೆ.ವಿಶೇಷವಾಗಿ ಇಲ್ಲಿ ಅಲ್ಪಸಂಖ್ಯಾತ ಮತದಾರರನ್ನು ಹಿಡಿದಿಟ್ಟುಕೊಳ್ಳುವ ಪ್ರಯತ್ನ ಕಾಂಗ್ರೆಸ್‌ನಲ್ಲಿ ಪ್ರಬಲವಾಗಿ ನಡೆದಿದೆ.

ಇದರಲ್ಲಿ ಯಾವು ಕಡಿಮೆ ಇಲ್ಲ ಎನ್ನುವಂತೆ ಜೆಡಿಎಸ್‌ ಅಭ್ಯರ್ಥಿಗಳು, ನಾಯಕರು ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ರಾಘವೇಂದ್ರನಾಯಕ ನೇತೃತ್ವದಲ್ಲಿ ಪ್ರಚಾರ ನಡೆದಿದ್ದು, “ನಾವುಬಡವರು, ನಮ್ಮ ಬಳಿ ದುಡ್ಡು ಇಲ್ಲ ಆದ್ರ ಜನ ಸೇವೆ ಮಾಡುವ ಹಂಬಲವಿದೆ. ಹೀಗಾಗಿ ನಮಗೆ ವೋಟ್‌ಕೊಡಿ’ ಎಂದು ಮತದಾರರ ಬಳಿ ಹೋಗುತ್ತಿರುವದೃಶ್ಯ ಹೆಚ್ಚು ಚರ್ಚೆಗೆ ಕಾರಣವಾಗಿದೆ. ಒಟ್ಟಿನಲ್ಲಿಮೂರು ಪಕ್ಷದ ಅಭ್ಯರ್ಥಿಗಳು, ನಾಯಕರು ಪುರಸಭೆ ಅಧಿಕಾರ ಗದ್ದುಗೆ ಹಿಡಿಯಲು ಎಲ್ಲ ತಂತ್ರ ಪ್ರಯೋಗಿಸುತ್ತಿರುವುದು ಕಂಡು ಬರುತ್ತಿದೆ.

-ಮಲ್ಲಿಕಾರ್ಜುನ ಚಿಲ್ಕರಾಗಿ

Advertisement

Udayavani is now on Telegram. Click here to join our channel and stay updated with the latest news.

Next