Advertisement

ಅಂಗಡಿ ಬಾಡಿಗೆ ಹೆಚ್ಚಿಸಲು ತೀರ್ಮಾನ

01:41 PM Mar 17, 2021 | Team Udayavani |

ಕೆಜಿಎಫ್: ಇ-ಟೆಂಡರ್‌ ವಿವಾದದಲ್ಲಿರುವ ಎಂ.ಜಿ.ಮಾರುಕಟ್ಟೆಯ ಅಂಗಡಿಗಳಿಂದ ಮಾಸಿಕಬಾಡಿಗೆಯನ್ನು ಹೆಚ್ಚಿಸಲು ಮಂಗಳವಾರ ನಡೆದ ನಗರಸಭೆ ವಿಶೇಷ ಸಭೆಯಲ್ಲಿ ತೀರ್ಮಾನ ಮಾಡಲಾಯಿತು.

Advertisement

ಈ ವೇಳೆ ನಗರಸಭೆ ಅಧ್ಯಕ್ಷ  ವಳ್ಳಲ್‌ ಮುನಿಸ್ವಾಮಿ ಮಾತನಾಡಿ, ಎಂ.ಜಿ.ಮಾರುಕಟ್ಟೆಯಿಂದ ಮಾಸಿಕ 2.40 ಲಕ್ಷ ರೂ. ಬಾಡಿಗೆ ಬರುತ್ತಿದೆ. ಮಾರುಕಟ್ಟೆ ಸ್ವತ್ಛತೆಗೆಅದಕ್ಕಿಂತ ಹೆಚ್ಚು ಹಣ ಖರ್ಚಾಗುತ್ತಿದೆ. ಆದ್ದರಿಂದ ಲೋಕೋ ಪಯೋಗಿ ಇಲಾಖೆ ಮಾರ್ಗಸೂಚಿಯಂತೆ ಬಾಡಿಗೆಯನ್ನು 200, 400, 500, 15 ಸಾವಿರ ರೂ. ಗಳವರೆಗೂ ಹೆಚ್ಚಿಸಲಾಗುವುದು. ಈ ವ್ಯವಸ್ಥೆ ಸರ್ಕಾರಇ ಟೆಂಡರ್‌ ನಡೆಸುವ ತನಕ ಜಾರಿಯಲ್ಲಿರುತ್ತದೆ. ಇದರಿಂದ ಮಾಸಿಕ 35.85 ಲಕ್ಷ ರೂ.ಗೂ ಹೆಚ್ಚು ಆದಾಯ ಬರುತ್ತದೆ ಎಂದರು.

ಇ-ಟೆಂಡರ್‌ ಕುರಿತಂತೆ 33 ಜನ ನ್ಯಾಯಾಲಯಕ್ಕೆಹೋಗಿದ್ದಾರೆ. ಅವರನ್ನು ಬಿಟ್ಟು ಉಳಿದವರಿಗೆ ಈಮಾನದಂಡ ಅನ್ವಯವಾಗುತ್ತದೆ. ಹಳೇ ಬಾಕಿ ವಸೂಲಿಮಾಡಿ ಎಂದು ರಾಜೇಂದ್ರನ್‌ ಒತ್ತಾಯಕ್ಕೆ ಉತ್ತರಿಸಿದಅವರು, ಬಾಕಿ ಇರುವ ಬಗ್ಗೆ ನಗರಸಭೆಯಲ್ಲಿಯಾವುದೇ ದಾಖಲೆ ಇಲ್ಲ ಎಂದರು.

ಲಂಚ ಇಲ್ಲದೆ ಕೆಲಸ ಆಗುವುದಿಲ್ಲ: ಅಧ್ಯಕ್ಷರ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ ಎಸ್‌.ರಾಜೇಂದ್ರನ್‌, ವರ್ತಕರಿಂದ ಹಳೇ ಬಾಕಿ ವಸೂಲಿ ಮಾಡಿ. ಮಾರುಕಟ್ಟೆಯಲ್ಲಿರುವವರು ಬಡವರು ಎಂದು ಹೇಳುತ್ತೀರಿ. 30 ಲಕ್ಷ ರೂ.ಖರ್ಚುಮಾಡಿ ಸುಪ್ರೀಂ ಕೋರ್ಟಿಗೆ ಹೋಗುತ್ತಾರೆ. ಅವರು ಬಡವರೇ ಎಂದು ಪ್ರಶ್ನಿಸಿದರು. ನಗರಸಭೆಯೊಳಗೆಖಾತೆ ಮಾಡಲು ಬರುವವರಿಗೆ ಭಯಾನಕ ಅನುಭವಆಗುತ್ತದೆ. ಲಂಚ ಇಲ್ಲದೆ ಇದ್ದರೆ ಕೆಲಸ ಆಗುವುದಿಲ್ಲ ಎಂದು ಸಿಪಿಂಎ ಸದಸ್ಯ ತಂಗರಾಜ್‌ ಹೇಳಿದರು.

ಗೌತಮನಗರದಲ್ಲಿ ಖಾತೆ ಮಾಡಿಸುವ ಏಜೆಂಟ್‌ಗಳು ಇದ್ದಾರೆ. ಸುಮತಿ ನಗರ ಮತ್ತು ಗೌತಮ ನಗರದಲ್ಲಿ ಅನಧಿಕೃತವಾಗಿ ಕಟ್ಟಡ ಕಟ್ಟಲಾಗುತ್ತಿದೆ. ಅದನ್ನು ಗಮನಿಸಲು ನಗರಸಭೆ ಅಧಿಕಾರಿಗಳಿಗೆ ಬಿಡುವು ಇಲ್ಲ.ಅದೇ ಬಡವರು ಏನಾದರೂ ಕಟ್ಟಿದರೆ ಅದನ್ನು ಕೂಡಲೇಹೋಗಿ ಒಡೆದು ಹಾಕುತ್ತೀರಿ ಎಂದು ರಮೇಶ್‌ ಕುಮಾರ್‌ ಆರೋಪಿಸಿದರು.

Advertisement

ಬಡಾವಣೆ ನಿರ್ಮಾಣ: ಸರ್ವೆ ನಂಬರ್‌ 65ರಲ್ಲಿನಗರಸಭೆಗೆ ಸೇರಿದ ಜಾಗ ಇದೆ. ಅದನ್ನು ಕಬಳಿಸುವಮುನ್ನ ವಶಪಡಿಸಿಕೊಳ್ಳ ಬೇಕು. ಕೆರೆ ಕಟ್ಟೆಯನ್ನು ಒಡೆದು ಹಾಕಿ ಸಿಂಧೂ ನಗರದಲ್ಲಿ ಬಡಾವಣೆ ನಿರ್ಮಾಣ ಮಾಡಿದ್ದಾರೆ. ಅದಕ್ಕೆ ಹೇಗೆ ಅನುಮತಿ ನೀಡಿದಿರಿ ಎಂದು ಸದಸ್ಯ ಜಯಪಾಲ್‌, ಎಸ್‌.ರಾಜೇಂದ್ರನ್‌ ಪ್ರಶ್ನಿಸಿದರು. ಸಿಂಧೂನಗರಕ್ಕೆ ಹಿಂದೆ ಯೇ 160 ಖಾತೆ ಮಾಡಲಾಗಿದೆ. ಇನ್ನು ಮುಂದೆ ನಗರಸಭೆಯ ಆಸ್ತಿ ಪಟ್ಟಿಯಲ್ಲಿರುವ ನಿವೇಶನಕ್ಕೆ ಮಾತ್ರ ಖಾತೆ ಮಾಡುವುದಾಗಿ ಎಂದು ಆಯುಕ್ತೆ ಸರ್ವರ್‌ ಮರ್ಚೆಂಟ್‌ ಹೇಳಿದರು.ಅಧಿಕಾರಿಗಳು ಸಹಕಾರ ನೀಡುತ್ತಿದ್ದಾರೆ:ಮನೆಯ ಕೊನೆಯವರೆಗೂ ಪೈಪ್‌ ಹಾಕುತ್ತೇವೆ ಎಂದು ಸಾವಿರಾರು ರೂಪಾಯಿ ಹಣ ಕೇಳುತ್ತಾರೆ.

ಅಧಿಕಾರಿಗಳು ಸಹಕಾರ ಕೊಡುತ್ತಿದ್ದಾರೆ ಎಂದು ಸದಸ್ಯಶಕ್ತಿವೇಲ್‌ ಆರೋಪಿಸಿದರು. ಸ್ಲಂ ಬೋರ್ಡ್‌ನವರುನಗರಸಭೆ ನಿರ್ಮಿಸಿದ ಚರಂಡಿ ಹಾಳು ಮಾಡುತ್ತಿದ್ದಾರೆ.ಅವರಿಗೆ ನಷ್ಟ ಪರಿಹಾರ ಮಾಡಲು ಹೇಳಿ ಎಂದು ಜರ್ಮನ್‌ ಒತ್ತಾಯಿಸಿದರು.

ಗೋಲ್‌ಮಾಲ್‌ ಮಾಡುವವರಿಗೆ ತಕ್ಕ ಪಾಠ :

ಕೆಲವು ವ್ಯಕ್ತಿಗಳು ಅಧಿಕಾರಿಗಳನ್ನು ಬೆದರಿಸುತ್ತಿದ್ದಾರೆ. ನಾನು ಯಾರು ಗೊತ್ತಎಂದು ದಬಾಯಿಸುತ್ತಿದ್ದಾರೆ.ಅಂತಹವರನ್ನು ಮಟ್ಟಹಾಕಲಾಗುವುದು. ಬ್ಲಾಕ್‌ ಮೇಲ್‌ ಮಾಡುವ, ಗೋಲ್‌ಮಾಲ್‌ ಕೆಲಸ ಮಾಡುವವರಿಗೆ ತಕ್ಕ ಪಾಠ ಕಲಿಸುತ್ತೇನೆ. ಅಂತಹವರಿಗೆ ಭಯಪಟ್ಟರೆ ಅಧ್ಯಕ್ಷನಾಗಿ ಕೆಲಸ ಮಾಡಲು ಆಗಲ್ಲ ಎಂದು ಅಧ್ಯಕ್ಷ ವಳ್ಳಲ್‌ ಮುನಿಸ್ವಾಮಿ ಹೇಳಿದರು.

8 ಕೋಟಿ ರೂ.ಮೀಸಲು :

ಈ ಬಾರಿಯ ಬಜೆಟ್‌ನಲ್ಲಿ ಪ್ರಾರಂಭಿಕ ಶುಲ್ಕ 19,62,27,405ರೂ. ಇದ್ದು, ನಿರೀಕ್ಷಿತ ಆದಾಯ 83,45,23,257 ರೂ.ಇದೆ. ನಿರೀಕ್ಷಿತ ಖರ್ಚು 101,85,17,257 ರೂಪಾಯಿ ಆಗಿದ್ದು,ಒಟ್ಟು ಉಳಿತಾಯ 1,22,33,405 ರೂಪಾಯಿ ಆಗಿದೆಎಂದು ಬಜೆಟ್‌ ವಿವರ ಸಭೆಗೆ ಮಂಡಿಸಲಾಯಿತು. ನೀರಿನವ್ಯವಸ್ಥೆಗೆ 8,73,45,000 ರೂ., ಘನ ತ್ಯಾಜ್ಯ ವಿಲೇವಾರಿಘಟಕದ ಅಭಿವೃದ್ಧಿಗೆ 4,17,88,000 ರೂ., ನಾಯಿಗಳಸಂತಾನಹರಣಕ್ಕೆ 15 ಲಕ್ಷ ರೂ., ನಗರಸಭೆ ಕಚೇರಿನಿರ್ಮಾಣಕ್ಕೆ 3 ಕೋಟಿ ರೂ., ಸಕ್ಕಿಂಗ್‌ ಯಂತ್ರ ಖರೀದಿಗೆ 45ಲಕ್ಷ ರೂ., ಮಳೆ ನೀರಿನ ಚರಂಡಿ ಮತ್ತು ಕೆರೆ ಅಭಿವೃದ್ಧಿಗೆ 5,53,26,000 ರೂಪಾಯಿ ಮೀಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next