Advertisement

ನಮ್ಮ ಸುರಕ್ಷೆಗೆ ಬಂಕರ್‌ ಬೇಕು: ರಾಜೋರಿ ಗ್ರಾಮಸ್ಥರ ಆಗ್ರಹ

12:08 PM Sep 12, 2017 | Team Udayavani |

ನೌಶೇರಾ : ಗಡಿ ನಿಯಂತ್ರಣ ರೇಖೆಯಲ್ಲಿ  ಪಾಕ್‌ ಸೇನೆಯ ನಿರಂತರ ಗುಂಡಿನ ದಾಳಿಯಿಂದಾಗಿ ತಮ್ಮ ಮನೆ ಮಾರು ಕಳೆದುಕೊಂಡು ಶಾಲೆಗಳಲ್ಲಿ ಆಸರೆ ಪಡೆದಿರುವ ಸ್ಥಳೀಯರು ಸರಕಾರ ತಮ್ಮ ಸುರಕ್ಷೆಗಾಗಿ  ವೈಯಕ್ತಿಕ ಬಂಕರ್‌ಗಳನ್ನು ನಿರ್ಮಿಸಿಕೊಡಬೇಕು ಎಂದು ಆಗ್ರಹಿಸಿದ್ದಾರೆ.  

Advertisement

ಗಡಿ ನಿಯಂತ್ರಣ ರೇಖೆಯಲ್ಲಿನ ಸುಮಾರು 23 ಚಿಕ್ಕಪುಟ್ಟ ಗ್ರಾಮಗಳ 5,000ಕ್ಕೂ ಮಿಕ್ಕಿದ ಜನರು ರಾಜೋರಿ ಜಿಲ್ಲೆಯ ನೌಶೇರಾ ವಲಯದಲ್ಲಿನ ತಮ್ಮ ಮನೆಗಳನ್ನು, ಪಾಕ್‌ ಸೇನೆಯ ನಿರಂತರ ಶೆಲ್ಲಿಂಗ್‌ ಪರಿಣಾಮವಾಗಿ, ಬಲವಂತದಿಂದ ತ್ಯಜಿಸಿ, ಶಿಬಿರಗಳಾಗಿ ಪರಿವರ್ತಿತವಾಗಿರುವ ಶಾಲೆಗಳಲ್ಲಿ ಈಗ ಹಲವು ತಿಂಗಳಿಂದ ನೆಲೆಸಿದ್ದಾರೆ. 

ಇತ್ತೀಚೆಗೆ ರಾಜೋರಿ ವಲಯದ ಗ್ರಾಮಗಳ ಮೇಲೆ ಪಾಕ್‌ ಸೇನೆ ನಡೆಸಿದ ನಿರಂತರ ಗುಂಡಿನ ದಾಳಿಗೆ ನಾಲ್ವರು ಪೌರರು ಮೃತಪಟ್ಟು ಇತರ ಐವರು ಗಾಯಗೊಂಡಿದ್ದಾರೆ. 

ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಅವರು ನಿನ್ನೆ ಸೋಮವಾರ ರಾಜೋರಿ ವಲಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ, ಮನೆ ಮಾರು ಕಳೆದುಕೊಂಡಿರುವ ಗ್ರಾಮಸ್ಥರು ತಮ್ಮ ಸುರಕ್ಷೆಗಾಗಿ  ಸರಕಾರ ತಮಗೆ ವೈಯಕ್ತಿಕ ಬಂಕರ್‌ಗಳನ್ನು ನಿರ್ಮಿಸಿಕೊಡಬೇಕು ಎಂದು ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next