Advertisement
ಕಿಫ್‌ಬಿ ಮುಖಾಂತರ ಮತ್ತು ಇತರ ಏಜೆನ್ಸಿಗಳ ಮೂಲಕ ನಳ್ಳಿ ನೀರು ವಿತರಣೆ ಪೈಪ್‌ಗ್ಳನ್ನು ಬದಲಾಯಿಸಲು ಪ್ರತೀ ವರ್ಷವೂ ಕೋಟ್ಯಂತರ ರೂಪಾಯಿ ವೆಚ್ಚ ಮಾಡುತ್ತಿದ್ದರೂ ಪ್ರತೀ ವರ್ಷವೂ ಕೇರಳ ವಾಟರ್ ಅಥೋರಿಟಿಗೆ ಭಾರೀ ನಷ್ಟ ಉಂಟಾಗುತ್ತಿದೆ ಎಂದು ಜಲ ಮಂಡಳಿ ಇಲಾಖೆಯೇ ಅಭಿಪ್ರಾಯಪಡುತ್ತಿದೆ.
Related Articles
ಕೇಂದ್ರ ಸರಕಾರದ “ಅಮೃತ ಯೋಜನೆ’ಯಲ್ಲಿ ಸೇರ್ಪಡೆಗೊಂಡ ಒಂಬತ್ತು ನಗರಗಳಲ್ಲಿ ಕುಡಿಯುವ ನೀರು ವಿತರಣೆ ಉತ್ತಮಗೊಳಿಸಲು 1,096.77 ಕೋಟಿ ರೂ. ಯೋಜನೆಗೆ ಆಡಳಿತಾನುಮತಿ ನೀಡಲಾಗಿತ್ತು. ಈ ಪೈಕಿ 143.59 ಕೋಟಿ ರೂ.ಯ ಹಳೆಯದಾದ ಹಾಗು ಕೆಟ್ಟು ಹೋಗಿರುವ ಪೈಪ್‌ಗ್ಳನ್ನು ಬದಲಾಯಿಸುವ ಉದ್ದೇಶಕ್ಕೆ ನೀಡಲಾಗಿತ್ತು. ಆದರೆ ಈ ಕಾಮಗಾರಿಯೂ ಪೂರ್ತಿಯಾಗಿಲ್ಲ. ಹಳೆಯದಾದ ಹಾಗೂ ಕೆಟ್ಟು ಹೋಗಿರುವ ಪೈಪ್‌ಗ್ಳನ್ನು ಬದಲಾಯಿಸದಿರುವುದರಿಂದಾಗಿ ಪದೇ ಪದೇ ನಳ್ಳಿ ನೀರು ಪೈಪ್‌ಗ್ಳು ಒಡೆದು ನೀರಿನ ಸೋರಿಕೆಯಾಗಲು ಪ್ರಮುಖ ಕಾರಣವೆಂಬುದಾಗಿ ಇಲಾಖೆಯ ಸಿಬಂದಿಯೇ ಹೇಳುತ್ತಿದ್ದಾರೆ.
Advertisement
ಅಂಕಿ-ಅಂಶವಾಟರ್ ಅಥಾರಿಟಿ ಪ್ರತೀ ದಿನ ಉತ್ಪಾದಿಸುವ 3000 ದಶಲಕ್ಷ ಲೀಟರ್ ನೀರಿಗೆ ಪ್ರತಿ ದಿನ ಬಿಲ್ ದಾಖಲಾಗುವುದು 1300 ದಶಲಕ್ಷ ಲೀಟರ್ ಆಗಿದೆ ಎಂಬುದಾಗಿ ವಾಟರ್ ಅಥೋರಿಟಿ ಸಿಬಂದಿ ಹೇಳುತ್ತಿದ್ದಾರೆ. ಒಟ್ಟು ವರಮಾನ ರಹಿತ ನೀರಿನ 20-25 ಶೇಕಡಾ ಮಾತ್ರವೇ ನಳ್ಳಿ ಪೈಪ್ ಸೋರಿಕೆಯಿಂದ ನಷ್ಟವಾಗುತ್ತಿದೆ ಎಂಬುದಾಗಿ ಇಲಾಖೆಯ ಸ್ಪಷ್ಟೀಕರಣ. ಈ ರೀತಿಯಾಗಿ ನಷ್ಟವಾಗುವ ನೀರನ್ನು ಗ್ರಾಹಕರಿಗೆ ವಿತರಿಸುತ್ತಿದ್ದಲ್ಲಿ 1,000 ಲೀಟರ್‌ಗೆ ಸರಾಸರಿ 10 ರೂಪಾಯಿ ಲಭಿಸುವ ಸಾಧ್ಯತೆಯನ್ನು ಲೆಕ್ಕ ಹಾಕಿದ್ದಲ್ಲಿ ಪೈಪ್ ಸೋರಿಕೆಯಿಂದ ಮಾತ್ರವೇ ಅಥಾರಿಟಿಗೆ ಉಂಟಾಗುವ ನಷ್ಟ ಸುಮಾರು 109.5 ಕೋಟಿ ರೂ. ಆಗಿದೆ ಎಂದು ವಾಟರ್ ಅಥಾರಿಟಿಯ ಅಂಕಿ-ಅಂಶವಾಗಿದೆ.