Advertisement

ಫ‌ಲಿತಾಂಶದ ಬೆನ್ನಲ್ಲೇ ಸಚಿವ ಸ್ಥಾನಕ್ಕೆ ಲಾಬಿ!

12:19 AM Jun 06, 2024 | Team Udayavani |

ಹೊಸದಿಲ್ಲಿ: ಲೋಕಸಭೆ ಚುನಾವಣೆ ಫ‌ಲಿತಾಂಶದಲ್ಲಿ ಬಿಜೆಪಿ ಸರಳ ಬಹುಮತ ಪಡೆಯುವಲ್ಲಿ ವಿಫ‌ಲವಾದ ಕಾರಣ, ಈಗ ಮಿತ್ರಪಕ್ಷಗಳೊಂದಿಗೆ ಸೇರಿ ಸರಕಾರ ರಚಿಸಬೇಕಾದ ಅನಿವಾರ್ಯತೆಗೆ ಸಿಲುಕಿದೆ. ಅದರ ಜೊತೆಗೆ, ಎನ್‌ಡಿಎ ಮಿತ್ರಪಕ್ಷಗಳು ಫ‌ಲಿತಾಂಶದ ಬೆನ್ನಲ್ಲೇ ಕೇಂದ್ರ ಸಚಿವ ಸ್ಥಾನಕ್ಕಾಗಿ ಲಾಬಿ ಮಾಡಲು ಶುರು ಮಾಡಿವೆ.

Advertisement

ಎನ್‌ಡಿಎ ಮೈತ್ರಿಕೂಟದ ಪ್ರಮುಖ ಪಾಲುದಾರ ಪಕ್ಷವಾಗಿರುವ ತೆಲುಗು ದೇಶಂ ಪಾರ್ಟಿ(ಟಿಡಿಪಿ) ಮಂತ್ರಿಗಳ ಪಾಲಿನಲ್ಲಿ ಹೆಚ್ಚಿನ ಪಾಲನ್ನು ಕೇಳುವ ನಿರೀಕ್ಷೆ ಇದೆ. ಈ ನಡುವೆ, ಎನ್‌ಡಿಎ ಭಾಗವಾಗಿರುವ ನಟ ಪವನ್‌ ಕಲ್ಯಾಣ ಅವರ ಜನಸೇನಾ ಪಕ್ಷಕ್ಕೂ ಸಚಿವ ಸ್ಥಾನ ನೀಡುವ ಇರಾದೆಯನ್ನು ಬಿಜೆಪಿ ಹೊಂದಿದೆ ಎನ್ನಲಾಗಿದೆ.

ಎನ್‌ಡಿಎ ಕೂಟದಲ್ಲಿ ಬಿಜೆಪಿ ಅತಿದೊಡ್ಡ ಪಕ್ಷವಾಗಿದ್ದರೂ ಪೂರ್ಣ ಬಹುಮತ ದೊರೆತಿಲ್ಲ. ಹಾಗಾಗಿ, 12 ಸೀಟು ಹೊಂದಿರುವ ಜೆಡಿಯು ಮತ್ತು 16 ಸೀಟು ಹೊಂದಿರುವ ಟಿಡಿಪಿಗೆ ಇದೀಗ ಹೆಚ್ಚಿನ ಮಹತ್ವ ಬಂದಿದೆ. ಕೆಲವು ಮೂಲಗಳ ಪ್ರಕಾರ, ಟಿಡಿಪಿ ಸ್ಪೀಕರ್‌ ಹುದ್ದೆಯ ಮೇಲೂ ಕಣ್ಣಿಟ್ಟಿದೆ ಎನ್ನಲಾಗಿದೆ. ಯಾವ ಪಕ್ಷದ ನಾಯಕರಿಗೆ ಯಾವ ಸ್ಥಾನ ದೊರೆಯಲಿದೆ ಎನ್ನುವುದು ಇನ್ನಷ್ಟೇ ನಿರ್ಧಾರವಾಗಬೇಕಿದೆ.

ಸಾಮಾನ್ಯ ಕಾರ್ಯಕ್ರಮಕ್ಕೆ ಜೆಡಿಯು ಒತ್ತಾಯ ಸಾಧ್ಯತೆ
ಕಿಂಗ್‌ ಮೇಕರ್‌ ಆಗಿ ಹೊರಹೊಮ್ಮಿರುವ ಜೆಡಿಯು ನಾಯಕ ನಿತೀಶ್‌ ಕುಮಾರ್‌ ಅವರು ಬಿಜೆಪಿಗೆ ಸಾಮಾನ್ಯ ಕಾರ್ಯಕ್ರಮಕ್ಕೆ(ಸಿಎಂಪಿ) ಒತ್ತಾಯಿಸುವ ನಿರೀಕ್ಷೆ ಇದೆ. ಒಂದೊಮ್ಮೆ ಸಾಮಾನ್ಯ ಕಾರ್ಯಕ್ರಮಕ್ಕೆ ಒಪ್ಪಿಕೊಂಡರೆ ಏಕರೂಪ ನಾಗರಿಕ ಸಂಹಿತೆ(ಯುಸಿಸಿ), ರಾಷ್ಟ್ರೀಯ ಪೌರತ್ವ ನೋಂದಣಿ(ಎನ್‌ಆರ್‌ಸಿ)ಗಳಂಥ ಬಿಜೆಪಿಯ ಅಜೆಂಡಾಗಳಿಗೆ ಅಡ್ಡಿಯಾಗಲಿದೆ. ಇನ್ನು ಖಾತೆಗಳ ವಿಷಯಕ್ಕೆ ಬಂದರೆ ಬಿಜೆಪಿ ಮಿತ್ರಪಕ್ಷಗಳಾಗಿರುವ ಜೆಡಿಯು ಮತ್ತು ಚಿರಾಗ್‌ ಪಾಸ್ವಾನ್‌ ಎಲ್‌ಜೆಪಿ ರೈಲ್ವೆ, ಗ್ರಾಮೀಣಾಭಿವೃದ್ಧಿ ಮತ್ತು ಕೃಷಿ ಇಲಾಖೆಗಳಿಗೆ ಬೇಡಿಕೆ ಇಡುವ ಸಾಧ್ಯತೆಗಳಿವೆ ಎನ್ನಲಾಗಿದೆ.

 

Advertisement

 

Advertisement

Udayavani is now on Telegram. Click here to join our channel and stay updated with the latest news.

Next