Advertisement

ರಾಜ್ಯದಲ್ಲಿ ಬಿಜೆಪಿಗೆ 20+? ಕಾಂಗ್ರೆಸ್‌ಗೆ ಎರಡಂಕಿ ಸ್ಥಾನ?

12:54 AM Jun 04, 2024 | Team Udayavani |

ಬೆಂಗಳೂರು: ಇಡೀ ದೇಶವೇ ಉಸಿರು ಬಿಗಿಹಿಡಿದು ಕಾಯುತ್ತಿರುವ ಲೋಕಸಭಾ ಚುನಾವಣೆಯ ಫ‌ಲಿತಾಂಶ ಪ್ರಕಟವಾಗುವುದಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ. ರಾಜ್ಯದ 28 ಕ್ಷೇತ್ರಗಳ ಪೈಕಿ ಬಿಜೆಪಿಗೆ 20 ಪ್ಲಸ್‌ ಸಿಗಲಿದೆಯೇ, ಕಾಂಗ್ರೆಸ್‌ ಎರಂಡಂಕಿ ದಾಟುವುದೇ ಎಂಬ ಕುತೂಹಲ ಸೃಷ್ಟಿಯಾಗಿದೆ. 3 ಮಾಜಿ ಸಿಎಂಗಳು, 3 ಕೇಂದ್ರ ಸಚಿವರು ತಮ್ಮ ಅದೃಷ್ಟ ಪರೀಕ್ಷೆ ನಡೆಸಿದ್ದಾರೆ.

Advertisement

ಕುತೂಹಲದ ಕ್ಷೇತ್ರಗಳು
ಮಂಡ್ಯ- ಕುಮಾರಸ್ವಾಮಿ ಸ್ಪರ್ಧೆ
ಮೈಸೂರು- ರಾಜವಂಶಸ್ಥ ಯದುವೀರ್‌ ಸ್ಪರ್ಧೆ
ಹಾಸನ- ಪ್ರಜ್ವಲ್‌ ರೇವಣ್ಣ ವಿರುದ್ಧದ ಆರೋಪ
ಬೆಳಗಾವಿ- ಶೆಟ್ಟರ್‌ ಸ್ಪರ್ಧೆಯಿಂದ ಖದರು
ಬೆಂ. ಗ್ರಾಮಾಂತರ- ಡಾ| ಮಂಜುನಾಥ್‌ ಸ್ಪರ್ಧೆ
ಹಾವೇರಿ- ಬಸವರಾಜ ಬೊಮ್ಮಾಯಿ ಸ್ಪರ್ಧೆ
ಶಿವಮೊಗ್ಗ- ಈಶ್ವರಪ್ಪ ಬಂಡಾಯ
ತುಮಕೂರು- ವಿ. ಸೋಮಣ್ಣ ವಲಸೆ
ದಾವಣಗೆರೆ- ಇಬ್ಬರು ಮಹಿಳೆಯರ ಸಮರ
ಕಲಬುರಗಿ- ಕಣದಲ್ಲಿ ಎಐಸಿಸಿ ಅಧ್ಯಕ್ಷ ಅಳಿಯ
ದ.ಕ.: ಕ್ಯಾ| ಚೌಟ, ಪದ್ಮರಾಜ್‌ ಹೊಸ ಮುಖ
ಉಡುಪಿ-ಚಿಕ್ಕಮಗಳೂರು: ಜೆ.ಪಿ. ಹೆಗ್ಡೆ, ಕೋಟ ಸ್ಪರ್ಧೆ

ಮತ ಎಣಿಕೆಗೆ ಸಿದ್ಧತೆ
ಆಯಾ ಕ್ಷೇತ್ರಗಳ ಕೇಂದ್ರ ಸ್ಥಾನದಲ್ಲಿ ಮತ ಎಣಿಕೆ ನಡೆಯಲಿದೆ. ಅಗತ್ಯವಿರುವ ಎಲ್ಲ ಸಿದ್ಧತೆಗಳ ಜತೆಗೆ ವ್ಯಾಪಕ ಭದ್ರತೆಯನ್ನು ಆಯಾ ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ಕೈಗೊಂಡಿದ್ದಾರೆ. ಮತ ಎಣಿಕೆ ಸಿಬಂದಿ ಬೆಳಗ್ಗೆ 6.30ಕ್ಕೆ ಕೇಂದ್ರಗಳಿಗೆ ಹಾಜರಾಗಲಿದ್ದಾರೆ. ಅಲ್ಲದೆ ಮತಗಟ್ಟೆ ವ್ಯಾಪ್ತಿ ಹಾಗೂ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿದೆ. ಯಾವುದೇ ಗೊಂದಲ ಮತ್ತು ಭದ್ರತಾ ಲೋಪವಾಗದಂತೆ ಚುನಾ ವಣ ಆಯೋಗವು ಎಚ್ಚರಿಕೆಯನ್ನು ವಹಿಸಿದೆ. ಪಶ್ಚಿಮ ಬಂಗಾಲ ಮತ್ತು ಉತ್ತರ ಪ್ರದೇಶದಲ್ಲಿ ವ್ಯಾಪಕ ಬಂದೋಬಸ್ತ್ ಕೈಗೊಳ್ಳ ಲಾಗಿದೆ ಎಂದು ಆಯೋಗ ಹೇಳಿದೆ. ಫ‌ಲಿತಾಂಶದ ಮಾಹಿತಿಯನ್ನು https://results.eci.gov.in/ ನಲ್ಲಿ ನೋಡಬಹುದು.

 

Advertisement

Udayavani is now on Telegram. Click here to join our channel and stay updated with the latest news.

Next