Advertisement

ನಕಲಿ ಖಾತೆಗಳ ಮೂಲಕ ಸಾಲ; ದಾಖಲೆ ವಶ

05:26 AM Jun 23, 2020 | Team Udayavani |

ಬೆಂಗಳೂರು: ಶ್ರೀಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ನಲ್ಲಿ ನಕಲಿ ಖಾತೆಗಳ ಮೂಲಕ ಸಾಲ ಪಡೆದು ವಂಚಿಸಿದ ಮೂವರು ಖಾಸಗಿ ವ್ಯಕ್ತಿಗಳ ಮನೆಗಳ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು  ವಶಪಡಿಸಿಕೊಂಡಿದ್ದಾರೆ.

Advertisement

ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ಯ ವರಿಷ್ಠಾಧಿಕಾರಿ ಅಬ್ದುಲ್‌ ಅಹದ್‌ ನೇತೃತ್ವದಲ್ಲಿ ಉಪಾಧೀಕ್ಷಕರಾದ ಎಂ.ಕೆ.ತಮ್ಮಯ್ಯ, ಡಿ.ಎಸ್‌.ರಾಜೇಂದ್ರ, ಸಿ.ಬಾಲಕೃಷ್ಣ ತಂಡ ಯಶವಂತಪುರದ ಓರಾಯನ್‌ ಮಾಲ್‌  ಸಮೀಪದ ಬ್ರಿಗೈಟ್‌ ಗೈಟ್‌ ವೇಯಲ್ಲಿ ಫ್‌ಲ್ಯಾಟ್‌ ನಲ್ಲಿ ರಘುನಾಥ್‌, ಎಚ್‌.ಬಿ.ಆರ್‌. ಲೇಔಟ್‌ ಗಣೇಶ್‌ ಬ್ಲಾಕ್‌ ನ ಜಸ್ವಂತ್‌ ರೆಡ್ಡಿ, ಚಿಕ್ಕಲಸಂದ್ರದ ರಾಮಾಂಜನೇಯನಗರದ ರಾಮಕೃಷ್ಣ ಮನೆಗಳ ಮೇಲೆ ದಾಳಿ ನಡೆಸಲಾಗಿದೆ.

ಎಸಿಬಿ  ಮೂಲಗಳ ಪ್ರಕಾರ, ಬ್ಯಾಂಕ್‌ ನಿಂದ ರಘುನಾಥ್‌ 139 ಕೋಟಿ ರೂ, ಜಸ್ವಂತ್‌ ರೆಡ್ಡಿ 153 ಕೋಟಿ ರೂ., ರಾಮಕೃಷ್ಣ 43 ಕೋಟಿ ರೂ. ಗಳನ್ನು ಸಾಲವನ್ನು ಬೇರೇ ಬೇರೆ ನಕಲಿ ಖಾತೆಗಳ ಮೂಲಕ ಪಡೆದು ಹಿಂತಿರುಗಿಸದೆ ಹಣ  ದುರುಪಯೋಗ ಪಡಿಸಿಕೊಂಡಿರುವುದು ಕಂಡು ಬರುತ್ತದೆ. ಈ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ ಎಂದು ಎಸಿಬಿ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next