– ಒಡವೆಗಳನ್ನು ಬ್ಯಾಂಕಿನಲ್ಲಿ ಒತ್ತೆ ಇಡಬೇಕಾಗುತ್ತದೆ.
– ಒಡವೆಗಳನ್ನು ಬ್ಯಾಂಕಿನ ಮೌಲ್ಯಮಾಪಕರಿಂದ ತೂಕ ಮಾಡಿಸಿ, ನಿವ್ವಳ ತೂಕ (ನೆಟ್ ವೇಯ್r) ಹಾಗೂ ಸಂಪೂರ್ಣ ತೂಕ (ಗ್ರಾಸ್ ವೇಯ್r) ಕಂಡು ಹಿಡಿದು, ನಿವ್ವಳ ತೂಕದ ಆಧಾರದ ಮೇಲೆ ಸಾಲವನ್ನು ಕೊಡುತ್ತಾರೆ. ಒಂದು ಗ್ರಾಂ ಬಂಗಾರಕ್ಕೆ ಎಷ್ಟು ಹಣ ಸಾಲ ಕೊಡಬಹುದು ಎಂಬುದನ್ನು ನಿಶ್ಚಯಿಸಿ, ಬಂಗಾರದ ತೂಕಕ್ಕೆ ಅನುಗುಣವಾಗಿ ಸಾಲ ನೀಡುತ್ತಾರೆ.
– ಒಡವೆಗಳ ಸಾಲದ ಬಡ್ಡಿ ದರ, ಆಯಾ ಬ್ಯಾಂಕಿನವರು ನಿಶ್ಚಯಿಸಿದಂತೆ ಇರುತ್ತದೆ.
– ಈ ಸಾಲಕ್ಕೆ ಕಂತುಗಳಿರುತ್ತವೆ. ಬಡ್ಡಿ ಮತ್ತು ಕಂತು ತುಂಬಿ ಬಂಗಾರ- ಒಡವೆಯನ್ನು ವಾಪಸ್ಸು ಪಡೆಯಬೇಕು.
– ಸಮಯಕ್ಕೆ ಸರಿಯಾಗಿ ಸಾಲ ತೀರಿಸದಿದ್ದಲ್ಲಿ, ನೋಟೀಸು ಕೊಟ್ಟು, ದಿನಪತ್ರಿಕೆಯಲ್ಲಿ ಪ್ರಕಟಿಸಿ, ಬಂಗಾರ- ಒಡವೆಗಳನ್ನು ಹರಾಜು ಮಾಡುವ ಹಕ್ಕು ಬ್ಯಾಂಕಿನವರಿಗೆ ಇರುತ್ತದೆ. ಹರಾಜಿನಲ್ಲಿ ಬಂದಿರುವ ಹಣದಿಂದ, ಸಾಲದ ಮೊತ್ತ ಮತ್ತು ಬಡ್ಡಿಯನ್ನು ಪಡೆದು ಉಳಿದ ಹಣವನ್ನು ಸಾಲಗಾರರಿಗೆ ಕೊಡುತ್ತಾರೆ. ಅಥವಾ ಸಾಲಗಾರರ ಉಳಿತಾಯ ಖಾತೆಗೆ ಜಮಾ ಮಾಡುತ್ತಾರೆ.
– ಈ ಸಾಲಕ್ಕೆ ಜಾಮೀನು ಬೇಕಾಗಿಲ್ಲ
Advertisement
ವೈಯಕ್ತಿಕ ಸಾಲವೈಯಕ್ತಿಕ ಸಾಲವನ್ನು ಮುಖ್ಯವಾಗಿ ಆಫೀಸುಗಳಲ್ಲಿ ಕೆಲಸ ಮಾಡುವವರು ತಮ್ಮ ಸಂಬಳದ ಮೇಲೆ, ಬ್ಯಾಂಕುಗಳಲ್ಲಿ ಸಾಲ ಪಡೆದು ಸಂಬಳದಿಂದ ಪ್ರತೀ ತಿಂಗಳೂ ಸಾಲದ ಕಂತನ್ನು ತುಂಬುತ್ತಾ ಬಂದು ಸಾಲ ತೀರಿಸುತ್ತಾರೆ. ನೌಕರರಲ್ಲದ ಇತರರು ಕೂಡಾ ಈ ಸಾಲವನ್ನು ಪಡೆಯಬಹುದಾಗಿದೆ.
-ಸಾಮಾನ್ಯವಾಗಿ ಮಾಸಿಕ ಸಂಬಳದ ಹತ್ತು ಪಟ್ಟು ಸಾಲ ದೊರೆಯುತ್ತದೆ.
– ಸಾಲದ ಮರು ಪಾವತಿಯ ಗರಿಷ್ಠ ಸಮಯ 60- 80 ತಿಂಗಳು
– ಸಾಲದ ಬಡ್ಡಿ ದರ ಆಯಾ ಬ್ಯಾಂಕುಗಳು ನಿರ್ಧರಿಸಿದಂತೆ ಇರುತ್ತದೆ.
-ಸಂಬಳದ ಚೀಟಿ (ಸ್ಯಾಲರಿ ಸರ್ಟಿಫಿಕೆಟ್) ಹಾಗೂ ಉದ್ಯೋಗದಾತರಿಂದ ಸಾಲದ ಕಂತನ್ನು ಸಂಬಳದಿಂದ ಮುರಿದು ಸಾಲಕ್ಕೆ ಕಳಿಸಲು ಒಪ್ಪಿಗೆ ಪತ್ರ
– ಸಂಬಳದಲ್ಲಿ ಎಲ್ಲಾ ಕಡಿತ ಮಾಡಿ ಅಂತಿಮವಾಗಿ ಕೈಗೆ ಸಿಗುವ ಹಣ (ಟೇಕ್ ಹೋಮ್ ಸ್ಯಾಲರಿ) ಒಟ್ಟು ಸಂಬಳದ ಶೇಕಡಾ 60ಕ್ಕಿಂತ ಕಡಿಮೆ ಇರಬಾರದು.
– ನೌಕರರಲ್ಲದೆ ಬೇರೆಯವರಾದರೆ, ಅವರ ಆದಾಯದ ವಿಚಾರದಲ್ಲಿ ಸರಿಯಾದ ಪುರಾವೆ ಮತ್ತು ಆದಾಯ ತೆರಿಗೆ ಇಲಾಖೆಗೆ ಸಲ್ಲಿಸಿದ ಮೂರು ವರ್ಷಗಳ ಐ.ಟಿ. ರಿಟರ್ನ್ಸ್ ಕಾಪಿ.