ಸುರತ್ಕಲ್: ಕೋವಿಡ್ 19 ಗೆ ಬಲಿಯಾಗಿರುವ ಜನರು ಅಪೆಕ್ಸ್ ಮತ್ತು ಡಿಸಿಸಿ ಬ್ಯಾಂಕ್ ಗಳಲ್ಲಿ ಮಾಡಿರುವ ಸಾಲವನ್ನು ಮನ್ನಾ ಮಾಡಲು ಸರಕಾರ ಮುಂದಾಗಿದೆ.ಇದಕ್ಕೆ ಒಟ್ಟು 81 ಕೋಟಿ ರೂ.ಗಳ ಅವಶ್ಯಕತೆಯಿದೆ. ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಡೆಯಲಿರುವ ಸಭೆಯಲ್ಲಿ ತೀರ್ಮಾನ ಮಾಡಲಾಗುವುದು ಎಂದು ಸಹಕಾರ ಸಚಿವ ಎಸ್.ಟಿ ಸೋಮಶೇಖರ್ ಹೇಳಿದ್ದಾರೆ.
ಬೈಕಂಪಾಡಿಯಲ್ಲಿ ಹಣ್ಣು ತರಕಾರಿ ಮಾರಾಟ ದ ಸ್ಮಾರ್ಟ್ ಕಟ್ಟಡ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.
ಡಿಸಿಸಿ ಬ್ಯಾಂಕ್ಗಳ ಲಾಭ ನಷ್ಟ ಲೆಕ್ಕಾಚಾರವನ್ನು ಈ ವಿಚಾರದಲ್ಲಿ ಪರಿಗಣನೆಗೆ ತೆಗೆದುಕೊಳ್ಳ ಬೇಕಾಗುತ್ತದೆ ಎಂದರು.
ಇದನ್ನೂ ಓದಿ: ಕೊಡಲಿಯಿಂದ ಹೊಡೆದು 11ನೇ ತರಗತಿ ವಿದ್ಯಾರ್ಥಿನಿ ಹತ್ಯೆ: ಒಂದು ತಿಂಗಳ ಕಾಲ ಹಿಂಬಾಲಿಸಿದ್ದ!
ಕೇಂದ್ರ ಸರಕಾರ ಸಹಕಾರ ಸಚಿವಾಲಯ ಆರಂಭಿಸಿದ್ದು 1 ಲಕ್ಷ ಕೋಟಿ ಬಜೆಟ್ ನೀಡಿದೆ.ಇದರಿಂದ ಎಪಿಎಂಸಿಗಳ ಬಲವರ್ಧನೆ ಸಾಧ್ಯವಾಗಲಿದೆ ಎಂದು ಸಮರ್ಥಿಸಿಕೊಂಡರು.
ಮಂಗಳೂರು ಎಪಿಎಂಸಿಯನ್ನು ಮಾದರಿಯಾಗಿ ಮಾಡಲು ಎಲ್ಲಾ ಕಾರ್ಯಯೋಜನೆ ರೂಪಿಸಲಾಗುವುದು ಎಂದು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ,ಉಮಾನಾಥ ಕೋಟ್ಯಾನ್,ವೇದವ್ಯಾಸ ಕಾಮತ್ಡಾ.ಭರತ್ ಶೆಟ್ಟಿ ವೈ,ಮೇಯರ್ ಪ್ರೇಮಾನಂದ ಶೆಟ್ಟಿ ಎಪಿಎಂಸಿ ಅಧ್ಯಕ್ಷ ಕೃಷ್ಣರಾಜ ಹೆಗ್ಡೆ ಉಪಾಧ್ಯಕ್ಷೆ ರಜನೀ ದುಗ್ಗಣ್ಣ,ಸಮಿತಿ ಸದಸ್ಯರು ಉಪಸ್ಥಿತರಿದ್ದರು.