Advertisement
ಅವರು ಮಂಗಳವಾರ ಜಿ.ಪಂ.ನ ಡಾ| ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ನಡೆದ ಲೀಡ್ ಬ್ಯಾಂಕಿನ ಜಿಲ್ಲಾ ಮಟ್ಟದ ಪರಿಶೀಲನ ಸಮಿತಿ ಸಭೆಯಲ್ಲಿ ಮಾಹಿತಿ ನೀಡಿದರು. 5,392 ವಿದ್ಯಾರ್ಥಿಗಳಿಗೆ 72.78 ಕೋ. ರೂ. ಶಿಕ್ಷಣ ಸಾಲ, 322.64 ಕೋ. ರೂ. ವಸತಿ ಸಾಲ, ದುರ್ಬಲ ವರ್ಗದ 1,05,747 ಜನರಿಗೆ 1,121.39 ಕೋ. ರೂ., 21,371 ಎಸ್.ಸಿ. ಹಾಗೂ ಎಸ್.ಟಿ. ಫಲಾನುಭವಿಗಳಿಗೆ 180.12 ಕೋ. ರೂ., 39,638 ಅಲ್ಪಸಂಖ್ಯಾಕರಿಗೆ 350.86 ಕೋ. ರೂ., 72.78 ಕೋ. ರೂ. ಶಿಕ್ಷಣ ಸಾಲ, ಆದ್ಯತಾ ವಲಯಕ್ಕೆ 5,103.65 ಕೋ. ರೂ., ಆದ್ಯತೇತರ ವಲಯಕ್ಕೆ 1,734.35 ಕೋ. ರೂ. ಸಾಲ ವಿತರಿಸಲಾಗಿದೆ ಎಂದರು.
ಉಡುಪಿ ಜಿಲ್ಲೆಯ ರೈತರನ್ನು ಹೆಚ್ಚಿನ ಸಂಖ್ಯೆಯಲ್ಲಿ ಬೆಳೆ ವಿಮೆಗೆ ನೋಂದಣಿ ಮಾಡಲು ಜಿಲ್ಲೆಯ ಎಲ್ಲ ಬ್ಯಾಂಕ್‌ಗಳು ಕ್ರಮ ಕೈಗೊಳ್ಳಬೇಕು. ಕೃಷಿ ಇಲಾಖೆಯಿಂದ ಭತ್ತದ ಬೆಳೆಗೆ ಜೂ. 30ರ ವರೆಗೆ ಮತ್ತು ತೋಟಗಾರಿಕಾ ಇಲಾಖೆಯಿಂದ ತೆಂಗು ಮತ್ತು ಕರಿ ಮೆಣಸು ಬೆಳೆಗೆ ಜು. 30ರ ವರೆಗೆ ಬೆಳೆ ವಿಮೆ ನೋಂದಣಿಗೆ ಅವಕಾಶವಿದ್ದು, ಜಿಲ್ಲೆಯ ರೈತರು ಈ ಯೋಜನೆಯ ಪ್ರಯೋಜನ ಪಡೆಯುವ ಕುರಿತಂತೆ ಎಲ್ಲ ಬ್ಯಾಂಕ್‌ಗಳು ಆದ್ಯತೆ ಮೇಲೆ ರೈತರಿಗೆ ಮಾಹಿತಿ ನೀಡಿ, ಹೆಚ್ಚಿನ ಸಂಖೈಯ ರೈತರ ನೋಂದಣಿಗೆ ಸಹಕರಿಸುವಂತೆ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಸೂಚಿಸಿದರು.