Advertisement

ಸಹಕಾರ ಸಂಸ್ಥೆಗಳ ಸಾಲದ ಮುದ್ರಾಂಕ ಶುಲ್ಕ ಇಳಿಕೆ

11:21 PM Jun 30, 2022 | Team Udayavani |

ಉಡುಪಿ: ನಗರ ವ್ಯಾಪ್ತಿಯ ಕೃಷಿಯೇತರ ಸಹಕಾರ ಬ್ಯಾಂಕ್‌/ಸಂಘಗಳಲ್ಲಿ ಸಾಲಗಾರರ ಮುದ್ರಾಂಕ ಶುಲ್ಕವನ್ನು ಇಳಿಕೆ ಮಾಡುವ ಮೂಲಕ ಸರಕಾರ ಸಾಲಗಾರರ ಆರ್ಥಿಕ ಹೊರೆಯನ್ನು ತಗ್ಗಿಸಿದೆ.

Advertisement

ಈ ಹಿಂದೆ ಕೃಷಿಯೇತರ ಸಹಕಾರ ಬ್ಯಾಂಕ್‌ಗಳಲ್ಲಿ ಸಾಲದ ಮೊತ್ತದ ಮೇಲೆ ಶೇ. 1ರಷ್ಟು ಮುದ್ರಾಂಕ ಶುಲ್ಕ ವಿಧಿಸಲಾಗುತ್ತಿತ್ತು. 10 ಲಕ್ಷ ರೂ. ಸಾಲ ಪಡೆದುಕೊಂಡರೆ 10 ಸಾವಿರ ರೂ. ಮುದ್ರಾಂಕ ಶುಲ್ಕ ಕಡಿತವಾಗುತ್ತಿತ್ತು. ಇದೀಗ ಶೇ. 0.3ರಷ್ಟು ಇಳಿಸಿದ್ದು, 10 ಲಕ್ಷ ರೂ. ಸಾಲ ಪಡೆದಲ್ಲಿ 3 ಸಾವಿರ ರೂ. ಶುಲ್ಕ ಬರಲಿದೆ. ಈಗಾಗಲೇ ಸರಕಾರ ಆದೇಶ ಮಾಡಿದ್ದು, ಪ್ರಸ್ತುತ ಜಿಲ್ಲೆಯ ಎಲ್ಲ ಸಹಕಾರಿ ಬ್ಯಾಂಕ್‌ಗಳಲ್ಲಿ ಸಾಲ ವಿತರಣೆ ಪ್ರಕ್ರಿಯೆಯಲ್ಲಿ ಇದನ್ನು ಅನುಷ್ಠಾನ ಮಾಡಲಾಗಿದೆ.

681 ಸಹಕಾರಿ ಬ್ಯಾಂಕ್ಗಳು :

ಜಿಲ್ಲೆಯಲ್ಲಿ ಎಲ್ಲ ವಿಧದ 681 ಸಹಕಾರಿ ಬ್ಯಾಂಕ್‌ಗಳು ಕಾರ್ಯನಿರ್ವಹಿಸುತ್ತಿದ್ದು, ಇಲ್ಲಿನ ಆರ್ಥಿಕ ಬೆಳವಣಿಗೆಗೆ ತನ್ನದೇ ಆದ ಕೊಡುಗೆ ನೀಡುತ್ತಿವೆ. 681ರಲ್ಲಿ ಕಾಪು, ಕಾರ್ಕಳ, ಕುಂದಾಪುರ, ಉಡುಪಿ, ಸಾಲಿಗ್ರಾಮ ಭಾಗದಲ್ಲಿ ಶೇ. 50ರಷ್ಟು ಸಹಕಾರಿ ಬ್ಯಾಂಕ್‌ಗಳಲ್ಲಿ ಸಾಲ ಪಡೆಯುವ ಜನರಿಗೆ ಸರಕಾರದ ಈ ನಿಯಮ ಅನ್ವಯವಾಗಲಿದೆ. ಆದರೆ ಇದನ್ನು ನಗರ ಮಾತ್ರ ಪರಿಗಣಿಸಿ, ಗ್ರಾಮೀಣ ಭಾಗಕ್ಕೆ ನಿಯಮ ಅನ್ವಯವಾಗದಿರುವ ಬಗ್ಗೆ ಸಹಕಾರಿ ವಲಯದ ಧುರೀಣರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಟಿಡಿಎಸ್ನಿಯಮ ಪರಿಷ್ಕರಿಸಿ :

Advertisement

ಜಿಲ್ಲೆಯಲ್ಲಿ ಸಹಕಾರ ಬ್ಯಾಂಕ್‌ಗಳಲ್ಲಿ ಸಾಲ ವಿತರಣೆ ಮತ್ತು ವಸೂಲಾತಿ ಶೇ. 90ರಷ್ಟು ಉತ್ತಮವಾಗಿದ್ದು, ಸಹಕಾರ ಬ್ಯಾಂಕ್‌ ಠೇವಣಿಯಲ್ಲಿ ಒಟ್ಟು ಬಂಡವಾಳ ಶೇ. 25 ಮೊತ್ತವನ್ನು ಬೇರೆ ಬ್ಯಾಂಕ್‌ಗಳಲ್ಲಿ ವಿನಿಯೋಗಿಸಬೇಕು. ಇದರಿಂದ ಬರುವ ಬಡ್ಡಿ ಮೊತ್ತಕ್ಕೆ ಸರಕಾರ ಟಿಡಿಎಸ್‌ ವಿಧಿಸುತ್ತಿದೆ. ಈ ನಿರ್ಧಾರ ಸರಿಯಲ್ಲ. ಈ ಹೊರೆಯನ್ನು ಸಹಕಾರಿ ಬ್ಯಾಂಕ್‌ ಠೇವಣಿದಾರರ ಮೇಲೆ ಹಾಕಲು ಸಿದ್ಧವಿಲ್ಲ. ಸರಕಾರ ಇದನ್ನು ಪರಿಷ್ಕರಿಸಬೇಕು ಎಂಬ ಬೇಡಿಕೆ ಸಹಕಾರಿ ವಲಯದಲ್ಲಿದೆ.

ಸಹಕಾರ ಬ್ಯಾಂಕ್‌/ ಸಂಘಗಳಲ್ಲಿ ಸಾಲಗಾರರ ಮುದ್ರಾಂಕ ಶುಲ್ಕವನ್ನು ಇಳಿಕೆ ಮಾಡಲು ಈ ಹಿಂದೆ ಮನವಿ ಮಾಡಿದ್ದೆವು. ಸರಕಾರ ನಮ್ಮ ಬೇಡಿಕೆ ಪರಿಗಣಿಸಿದೆ. ಇದನ್ನು ಗ್ರಾಮೀಣ ಭಾಗಕ್ಕೂ ವಿಸ್ತರಿಸಲು ಒತ್ತಾಯಿಸಿದ್ದೇವೆ. ಅನ್ಯ ಬ್ಯಾಂಕ್‌ನಲ್ಲಿರುವ ನಮ್ಮ ಠೇವಣಿ ಮೊತ್ತದ ಬಡ್ಡಿಗೆ ವಿಧಿಸುವ ಟಿಡಿಎಸ್‌ ಕ್ರಮವನ್ನು ಹಿಂದಕ್ಕೆ ತೆಗೆದುಕೊಳ್ಳಬೇಕು.ಬಿ. ಜಯಕರ ಶೆಟ್ಟಿ ಇಂದ್ರಾಳಿಅಧ್ಯಕ್ಷ, ಜಿಲ್ಲಾ ಸಹಕಾರಿ ಯೂನಿಯನ್

Advertisement

Udayavani is now on Telegram. Click here to join our channel and stay updated with the latest news.

Next