Advertisement
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಬುಧವಾರನಡೆದ ಜಿಲ್ಲಾ ಮಟ್ಟದ ಪುನರಾವಲೋಕನ ಸಮಿತಿಸಭೆಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರಅರ್ಹ ಫಲಾನುಭವಿಗಳಿಗೆ ಅನುಕೂಲವಾಗಲಿಯೋಜನೆ ರೂಪಿಸಿದೆ. ಬ್ಯಾಂಕ್‌ಗಳಿಗೆ ಅರ್ಜಿಸಲ್ಲಿಕೆಯಾದ ಕೆಲ ದಿನಗಳಲ್ಲಿ ಸಾಲ ಸೌಲಭ್ಯಒದಗಿಸಬೇಕು.
Related Articles
Advertisement
ಹೆಚ್ಚಿನ ಅರ್ಜಿಗಳು ತಿರಸ್ಕೃತಗೊಳ್ಳುತ್ತವೆ ಎಂಬ ಕಾರಣಕ್ಕೆ ರೈತರುಸಾಲ ಪಡೆಯುವುದಕ್ಕೆ ಮುಂದೆ ಬರುವುದೇ ಇಲ್ಲ.ಹಾಗಾಗಿ ಪಿಎಂಎಫ್‌ಎಂಇ ಯೋಜನೆಯಡಿ ಸಿಬಿಲ್‌ಸ್ಕೋರ್ ಮಾನದಂಡಕ್ಕೆ ವಿನಾಯತಿ ನೀಡಬೇಕುಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ|ಶ್ರೀನಿವಾಸ್ ಚಿಂತಾಲ್ ಸಭೆಯ ಗಮನ ಸೆಳೆದರು.ಕೇಂದ್ರ ಸರ್ಕಾರ ಕೃಷಿ ಉತ್ಪನ್ನಗಳ ಆಧರಿಸಿಸಣ್ಣ ಪ್ರಮಾಣದ ಆಹಾರ ಸಂಸ್ಕರಣಾ ಘಟಕಗಳಪ್ರಾರಂಭಿಸುವ ಮೂಲಕ ರೈತಾಪಿ ವರ್ಗದವರುಸಹ ಉದ್ಯಮಿಗಳಾಗಬೇಕು ಎಂಬ ಸದುದ್ದೇಶದಿಂದನೂತನವಾಗಿ ಪಿಎಂಎಫ್‌ಎಂಇ ಯೋಜನೆಪ್ರಾರಂಭಿಸಿ 10 ಸಾವಿರ ಕೋಟಿ ಅನುದಾನಮೀಸಲಿಟ್ಟಿದೆ.
ದಾವಣಗೆರೆ ಜಿಲ್ಲೆಯಲ್ಲಿ 25 ರಿಂದ26 ಕೋಟಿಯಲ್ಲಿ ಕೇವಲ 6 ಜನ ರೈತರಿಗೆ 35 ಲಕ್ಷರೂಪಾಯಿಯಷ್ಟು ಸಾಲ ನೀಡಿರುವ ಸಾಧನೆ ಶೂನ್ಯಕ್ಕೆಸಮವಾಗುತ್ತದೆ. ಸಿಬಿಲ್ ಅಂಕಗಳ ಮಾನದಂಡದಲ್ಲಿಸಾಲದ ಅರ್ಜಿಗಳನ್ನು ತಿರಸ್ಕರಿಸುವುದು ಸರಿಯಲ್ಲ.
ಕೃಷಿಕರು ಸಹ ಉದ್ಯಮಗಳ ಪ್ರಾರಂಭಿಸಲು ಉತ್ತೇಜನನೀಡುವ ಯೋಜನೆಗೆ ಬ್ಯಾಂಕ್ ವಲಯ ಸಹಪೂರಕವಾಗಿ ಸ್ಪಂದಿಸಬೇಕು. ಹೆಚ್ಚಿನ ಪ್ರಮಾಣದಲ್ಲಿಸಾಲ ಸೌಲಭ್ಯ ಒದಗಿಸುವ ಮೂಲಕ ಯೋಜನೆಯಮೂಲ ಉದ್ದೇಶ ಈಡೇರಿಸಬೇಕು ಎಂದು ಸಂಸದಡಾ| ಜಿ.ಎಂ. ಸಿದ್ದೇಶ್ವರ ತಿಳಿಸಿದರು.
ಕೆಲವರು ಕೇವಲ ಸಹಾಯಧನ ಪಡೆಯುವಉದ್ದೇಶದಿಂದಲೇ ಸಾಲಕ್ಕೆ ಅರ್ಜಿ ಸಲ್ಲಿಸುವುದು ಉಂಟು. ಸಾಲ ಮಂಜೂರಾತಿ ಮಾಡುವಾಗಎಲ್ಲವನ್ನೂ ಗಮನಿಸಬೇಕು. ಪಡೆದಂತಹ ಸಾಲಸದುಪಯೋಗ ಆಗುತ್ತಿದೆಯೇ ಎಂದು ಸಂಬಂಧಿತಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಬೇಕು.ಕೇಂದ್ರ ಸರ್ಕಾರದ ಯೋಜನೆಗಳಿಗೆ ಸಂಬಂಧಿಸಿದಂತೆ ಆದಷ್ಟು ಬೇಗ ಸಾಲ ಮಂಜೂರಾತಿ ಮಾಡಬೇಕುಎಂದು ಸಂಸದರು ಸೂಚಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಕಾಧಿಕಾರಿ ಡಾ| ವಿಜಯ ಮಹಾಂತೇಶ್‌ದಾನಮ್ಮನವರ್ ಅಧ್ಯಕ್ಷತೆ ವಹಿಸಿದ್ದರು. ಆರ್‌ಬಿಐನಎನ್.ಎಂ. ಪಾಠಕ್, ನಬಾರ್ಡ್ ಡಿಡಿಎಂ ರವೀಂದ್ರ,ಕೆನರಾ ಬ್ಯಾಂಕ್ ಕ್ಷೇತ್ರೀಯ ವ್ಯವಸ್ಥಾಪಕ ಜಿ.ಜಿ.ದೊಡ್ಡಮನಿ ಭಾಗವಹಿಸಿದ್ದರು