Advertisement

ಬೀದಿ ವ್ಯಾಪಾರಿಗಳಿಗೆ ಸಾಲ ಸೌಲಭ್ಯ

06:37 AM May 28, 2020 | Lakshmi GovindaRaj |

ಕುಣಿಗಲ್‌: ಲಾಕ್‌ಡೌನ್‌ ವೇಳೆಯಲ್ಲಿ ಉದ್ಯೋಗ ವಿಲ್ಲದೆ ತೀವ್ರ ಸಂಕಷ್ಟದಲ್ಲಿ ಸಿಲುಕಿರುವ ಬೀದಿ ಬದಿ ವ್ಯಾಪಾರಿಗಳು ಹಾಗೂ ಶ್ರಮಿಕ ವರ್ಗದವರು ಖಾಸಗಿ ಫೈನಾನ್ಸ್‌ ಅವರಿಂದ ಶೋಷಣೆಗೆ ಒಳಗಾಗುವುದನ್ನು ತಪ್ಪಿಸುವ ದಿಸೆಯಲ್ಲಿ  ಡಿಸಿಸಿ ಬ್ಯಾಂಕ್‌ನಿಂದ ಸಾಲ ಸೌಲಭ್ಯ ಕಲ್ಪಿಸಲಾಗಿದೆ ಎಂದು ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಕೆ.ಎನ್‌.ರಾಜಣ್ಣ ಹೇಳಿದರು.

Advertisement

ಪಟ್ಟಣದ ಡಿಸಿಸಿ ಬ್ಯಾಂಕ್‌ ಸಭಾಂಗಣದಲ್ಲಿ ಬಡವರು ಬಂಧು ಯೋಜನಡಿಯಲ್ಲಿ ಪಟ್ಟಣದ ಬೀದಿ ಬದಿ  ವ್ಯಾಪಾರಿಗಳಿಗೆ ಹಾಗೂ ಶ್ರಮಿಕ ವರ್ಗದ ಸುಮಾರು 70 ಜನ ಫಲಾನುಭವಿಗಳ ಶೂನ್ಯ ಉಳಿತಾಯ ಖಾತೆಗೆ ಸಾಲದ ಮೊತ್ತವನ್ನು ಜಮಾ ಮಾಡಿದ ಆದೇಶ ಪತ್ರ ವಿತರಿಸಿ ಮಾತನಾಡಿದರು. ಸಣ್ಣ ಮತ್ತು ಅತಿ ಸಣ್ಣ ಬೀದಿ ಬದಿ  ವ್ಯಾಪಾರಸ್ಥರನ್ನು ಆರ್ಥಿಕವಾಗಿ ಪುನಶ್ಚೇತನಗೊಳಿಸಲು ಅವರು ಮಾಡುವ ವ್ಯಾಪಾರಕ್ಕನುಸಾರ ಹಣಕಾಸಿನ ಅವಶ್ಯಕತೆಗೆ ಅನುಗುಣವಾಗಿ ಸಾಲ ನೀಡಲಾಗುವುದು.

ಅಲ್ಲದೆ ಸಲೂನ್‌ ಅಂಗಡಿ, ಮಡಿವಾಳ ಸೇರಿದಂತೆ ಹಿಂದುಳಿದ ವರ್ಗದವರು ಮಾಡುವ  ಕುಲ ಕಸುಬುಗಳ ವ್ಯಾಪಾರದ ಅಂಗಡಿಗಳಿಗೆ ಬ್ಯಾಂಕ್‌ ಯಾವುದೇ ರೀತಿಯ ಆಧಾರ ಇಲ್ಲದೆ ಸಾಲದ ಚೆಕ್‌ಗಳನ್ನು ನೇರವಾಗಿ ಅವರ ಖಾತೆಗೆ ಜಮಾ ಮಾಡಲಿದೆ ಎಂದರು. ಸಾಲ ಸೌಲಭ್ಯ ಪಟ್ಟಣಕ್ಕೆ ಸೀಮಿತವಾಗದೇ ಗ್ರಾಮೀಣ ಪ್ರದೇಶದ  ಬೀದಿ ಬದಿ ವ್ಯಾಪಾರಿಗಳಿಗೂ ಸಹಕಾರ ಸಂಘಗಳ ಮೂಲಕ ಪಕ್ಷಾತೀತವಾಗಿ ಎಲ್ಲರಿಗೂ ಸೌಲಭ್ಯ ನೀಡಲಾಗುವುದೆಂದು ತಿಳಿಸಿದರು.

ಬ್ಯಾಂಕ್‌ ನಿರ್ದೇಶಕರಾದ ಬಿ.ಶಿವಣ್ಣ, ಬಿ.ಎಸ್‌. ದೇವರಾಜ್‌, ಎಂ.ಡಿ. ಕುಬೇಂದ್ರನಾಯ್ಕ, ಸ್ಥಳೀಯ ಬ್ಯಾಂಕ್‌ ವ್ಯವಸ್ಥಾಪಕ ದಯಾಸಾಗರ್‌, ವಿಎಸ್‌ಎಸ್‌ ಎನ್‌ ಅಧ್ಯಕ್ಷರಾದ ಗಂಗಶಾನಯ್ಯ, ಐ.ಜಿ.ರಮೇಶ್‌, ಬೋರೇಗೌಡ, ಉಪಾಧ್ಯಕ್ಷ ಹಾಲುವಾಗಿಲು ಸ್ವಾಮಿ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ರಂಗಣ್ಣಗೌಡ, ಪುರಸಭಾ ಸದಸ್ಯ ರಂಗಸ್ವಾಮಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next