ಕುರುಗೋಡು: ಸಾಲಬಾಧೆ ತಾಳಲಾರದೆ ರೈತನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕುರುಗೋಡು ಸಮೀಪದ ದಮ್ಮೂರು ಗ್ರಾಮದಲ್ಲಿ ನಡೆದಿದೆ.
ಸೋಮಪ್ಪ (48) ಮೃತ ರೈತ ಎಂದು ತಿಳಿದು ಬಂದಿದೆ.
ಕುರುಗೋಡು ಸಮೀಪದ ದಮ್ಮೂರು ಗ್ರಾಮದ ನಿವಾಸಿಯಾಗಿರುವ ಸೋಮಪ್ಪ ನಿನ್ನೆ ರಾತ್ರಿ ಮನೆಯ ಕುಟುಂಬಸ್ಥರು ಮಲಗಿದ ಮೇಲೆ ಬಾತ್ ರೂಮ್ ನಲ್ಲಿ ನೇಣು ಹಾಕಿಕೊಂಡಿದ್ದಾರೆ.
ಕಳೆದ ದಿನಗಳ ಹಿಂದೆ ವಾಯು ಬಾರು ಕುಸಿತದಿಂದ ಸುರಿದ ನಿರಂತರ ಮಳೆಯಿಂದ ಬೆಳೆ ನಾಶ ಗೊಂಡ ಹಿನ್ನಲೆ ಸುಮಾರು ಬ್ಯಾಂಕ್ ನಲ್ಲಿ 6 ಲಕ್ಷ ಹಾಗೂ ಕೈ ಸಾಲ 4 ಲಕ್ಷ ಒಟ್ಟು 10 ಲಕ್ಷ ಸಾಲ ಇರುವುದರಿಂದ ಮನನೊಂದು ಸಾವನ್ನಪಿದ್ದಾರೆ.
ಮೃತರಿಗೆ ಪತ್ನಿ ಸೇರಿದಂತೆ ಮೂರು ಹೆಣ್ಣು ಮತ್ತು 1 ಗಂಡು ಸೇರಿದಂತೆ ಅಪಾರ ಬಂದು ಬಳಗ ಅಗಲಿದ್ದಾರೆ.
ಪತ್ನಿ ಸೋಮಲಿಂಗಮ್ಮ ದೂರಿನ ಮೇರೆಗೆ ಕುರುಗೋಡು ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.