Advertisement
ಸುರತ್ಕಲ್ ಬಸ್ ನಿಲ್ದಾಣದ ಬಳಿ ಇಡಲಾದ ಇ-ಟಾಯ್ಲೆಟ್ ಎತ್ತರದಲ್ಲಿದ್ದು, ವಯೋವೃದ್ಧರು ಹತ್ತಲಾರದ ಸ್ಥಿತಿಯಲ್ಲಿದೆ. ಇನ್ನು ಇದಕ್ಕೆ ಎದುರು ಬದಿ ತಡೆಯಿಲ್ಲದ ಕಾರಣ ಎಲ್ಲರ ಮುಂಭಾಗದಲ್ಲಿ ಶೌಚಕ್ಕೆ ಒಳ ಹೋಗಲು ಸಾರ್ವಜನಿಕರು ಮುಜುಗರವಾಗುತ್ತದೆ.
ಸುರತ್ಕಲ್, ಬೈಕಂಪಾಡಿ ಮತ್ತಿತರೆಡೆ ಲಕ್ಷ ಲಕ್ಷ ಖರ್ಚು ಮಾಡಿ ಸಾರ್ವಜನಿಕ ಶೌಚಾಲಯ ಕಟ್ಟಿದರೂ ಬೀಗ ಜಡಿಯಲಾಗಿದೆ. ಹೀಗಾಗಿ ಬಳಕೆಗೆ ಸಿಗದೆ ಸ್ಥಳೀಯರು ಬಯಲು ಶೌಚಾಲಯಕ್ಕೆ ಹೋಗುವುದು ಅನಿವಾರ್ಯವೆನಿಸಿದೆ. ಬಹು ವೆಚ್ಚದ ಶೌಚಾಲಯ
ಸಾರ್ವಜನಿಕ ಶೌಚಾಲಯ ನಿರ್ವಹಣೆಗೆ ಮಂಗಳೂರು ಮಹಾನಗರ ಪಾಲಿಕೆಯ ಕಂದಾಯ ವಿಭಾಗ ಟೆಂಡರಿಗೆ
ಆಹ್ವಾನ ನೀಡಿದ್ದರೂ ಗುತ್ತಿಗೆದಾರರು ಬಾರದೆ ಇರುವುದು ಶೌಚಾಲಯಗಳು ಬಳಕೆಗೆ ಸಿಗದೆ ಇರಲು ಕಾರಣ.
ಸುಮಾರು 5ರಿಂದ 6 ಲಕ್ಷ ರೂ. ವೆಚ್ಚ ಮಾಡಿ ಶೌಚಾಲಯ ನಿರ್ಮಿಸಲಾಗಿದೆ. ನಿರ್ವಹಣೆಗೆ ನೀಡಿದಲ್ಲಿ ಶುಚಿತ್ವದ
ಸಮಸ್ಯೆ ಎದುರಾಗುತ್ತದೆ. ಹೀಗಾಗಿ ಅನಿವಾರ್ಯವಾಗಿ ಪಾಲಿಕೆ ಬೀಗ ಜಡಿದಿದೆ.
Related Articles
ಬೀಚ್ ಬಳಿ ಇರುವ ಶೌಚಾಲಯ ಸಮುದ್ರ ತೀರದಲ್ಲಿ ಆಟವಾಡಿ ಬಂದು ಸ್ನಾನ ಮಾಡಲು, ಬಟ್ಟೆ ಬದಲಾಯಿಸಲು
ಬಳಕೆಯಾಗುತ್ತಿತ್ತು. ಇದೀಗ ಬಾಗಿಲು ಮುರಿದಿದ್ದು, ಬಳಕೆ ಸಿಗದ ಸ್ಥಿತಿಯಲ್ಲಿದೆ. ಒಟ್ಟಿನಲ್ಲಿ ಲಕ್ಷ ಲಕ್ಷ ಖರ್ಚು ಮಾಡಿ
ನಿರ್ಮಿಸಿದ ಶೌಚಾಲಯಗಳು ಸಾರ್ವಜನಿಕರ ಬಳಕೆಗೆ ಸಿಗದೆ ಊಟಕ್ಕಿಲ್ಲದ ಉಪ್ಪಿನಕಾಯಿಯಂತೆ ಆಗಿದೆ.
Advertisement
ಪರಿಶೀಲನೆ ನಡೆಸಲಾಗುವುದುಸುರತ್ಕಲ್, ಬೈಕಂಪಾಡಿ ಸಹಿತ ವಿವಿಧೆಡೆ ಶೌಚಾಲಯ ಸಿದ್ಧಗೊಂಡಿದ್ದು, ಸಾರ್ವಜನಿಕರಿಗೆ ಲಭ್ಯವಿಲ್ಲ ಎಂಬುದು ತಿಳಿದಿಲ್ಲ. ಪಾಲಿಕೆಯ ಕಂದಾಯ ಇಲಾಖೆಗೆ ಒಳಪಟ್ಟಿದ್ದರೆ ಅದನ್ನು ಸ್ಥಳೀಯರಿಗೆ ನಿರ್ವಹಣೆ ಮಾಡಲು ನೀಡುವ ಬಗ್ಗೆ ಯೋಚಿಸಲಾಗುವುದು. ಶೌಚಾಲಯ ನಿರ್ವಹಣೆಯಿಂದ ಪಾಲಿಕೆ ಆದಾಯ ನಿರೀಕ್ಷಿಸುತ್ತಿಲ್ಲ. ಇನ್ನು ಇ-ಟಾಯ್ಲೆಟ್ ಎಲ್ಲೆಡೆ ಬಳಕೆಯಾಗುತ್ತಿದೆ. ಅನನುಕೂಲವಿದ್ದಲ್ಲಿ ಪರಿಶೀಲನೆ ನಡೆಸಲಾಗುವುದು.
– ಮೊಹಮ್ಮದ್ ನಝೀರ್, ಆಯುಕ್ತರು,
ಮನಪಾ