ಸಂಕೇಶ್ವರ: ಗೋವಾ ರಾಜ್ಯದಿಂದ ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದ್ದ ವಿವಿಧ ಬಗೆಯ 18.30 ಲಕ್ಷ ರೂ. ಮೌಲ್ಯದ ಸಾರಾಯಿಯನ್ನು ಚಿಕ್ಕೋಡಿ ವಲಯದ ಅಬಕಾರಿ ಅಧಿಕಾರಿಗಳು ಲಾರಿ ಸಮೇತ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುವ ಘಟನೆ ಹುಕ್ಕೇರಿ ತಾಲೂಕಿನ ಕಮತನೂರ ಗೇಟ್ ಬಳಿ ರವಿವಾರ ಬೆಳಿಗ್ಗೆ ನಡೆದಿದೆ.
ಗೋವಾ ರಾಜ್ಯದಿಂದ ಅಂಬೋಲಿ ಮಾರ್ಗವಾಗಿ ಹುಕ್ಕೇರಿ ತಾಲೂಕಿನ ಕಮತನೂರ ಗೇಟ್ ಬಳಿಯಲ್ಲಿ ಗೋವಾ ರಾಜ್ಯದಿಂದ ಐಚರ್ ಲಾರಿಯೊಂದರಲ್ಲಿ ಸುಮಾರು 280 ಬಾಕ್ಸ್ ವಿವಿಧ ಬಗೆಯ ಸಾರಾಯಿ ಸಾಗಾಟ ಮಾಡುವಾಗ ಚಿಕ್ಕೋಡಿ ವಲಯದ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿ ಲಾರಿ ಸಮೇತ ವಶಪಡಿಸಿಕೊಂಡಿದ್ದು, ಚಾಲಕನ್ನು ವಶಕ್ಕೆ ಪಡೆಯಲಾಗಿದೆ.
ಅಕ್ರಮ ಸಾರಾಯಿ ಸಾಗಟ ಬಗ್ಗೆ ಖಚಿತ ಮಾಹಿತಿ ಮೇರೆಗೆ ಈ ದಾಳಿ ನಡೆಸಲಾಗಿದೆ. ಲಾರಿಯಲ್ಲಿ ಇದ್ದ ಸಾರಾಯಿ ಬಾಕ್ಸ್ ಗಳಲ್ಲಿ ಇಂಪಿರಿಯಲ್ ಬ್ಲ್ಯೂ, ಮೆಗ್ಡಾಲ್ ವಿಸ್ಕಿ, ರಾಯಲ್ ಸ್ಟ್ಯಾಗ್ ಸೇರಿದಂತೆ ವಿವಿಧ ಬಗೆಯ 280 ಬಾಕ್ಸ್ ಸಾರಾಯಿ ವಶಕ್ಕೆ ಪಡೆಲಾಗಿದೆ.
ಬೆಳಗಾವಿ ಖನಗಾವಿಯ ಆರೋಪಿ ಬಸವರಾಜ ದಿಂಡಲಕುಂಪಿ (36) ವಶಕ್ಕೆ ಪಡೆಯಲಾಗಿದೆ. ಬೆಳಗಾವಿ ಅಬಕಾರಿ ಆಯುಕ್ತ ಡಾ. ವೈ. ಮಂಜುನಾಥ, ಪಿರೋಜಖಾನ ಕಿಲ್ಲೇದಾರ ಇವರ ಮಾರ್ಗದರ್ಶನದಲ್ಲಿ ಈ ದಾಳಿ ನಡೆಸಲಾಗಿದೆ ಎಂದು ಅಬಕಾರಿ ಚಿಕ್ಕೋಡಿ ವಲಯ ಉಪ ಆಯುಕ್ತ ಜಗದೀಶ್ ಕುಲಕರ್ಣಿ ಹೇಳಿದರು.
ದಾಳಿಯಲ್ಲಿ ಅನಿಲಕುಮಾರ ನಂದಿಶ್ವರ (ಚಿಕ್ಕೋಡಿ ಡಿಎಸ್ ಪಿ). ಸಿಎಸ್.ಪಾಟೀಲ (ಬೆಳಗಾವಿ), ಪ್ರವೀಣ ರಂಗಸುಭೆ, ವಿಜಯಕುಮಾರ್ ಮೆಳವಂಕಿ (ಹುಕ್ಕೇರಿ), ಲಿಂಗರಾಜ (ಬೆಳಗಾವಿ), ಶ್ರೀಶೈಲ ಗುಡಮೆ (ಚಿಕ್ಕೋಡಿ), ಸಿಬ್ಬಂದಿಗಳಾದ ಹಸನ್ ಸಾಬ್ ನಧಾಪ್, ಮಹಾಬಲ ಉಗಾರ, ಶಂಕರ ಮುದೋಳ (ಸಂಕೇಶ್ವರ) ಇವರು ದಾಳಿಯಲ್ಲಿ ಭಾಗವಹಿಸಿದ್ದರು.