ಕುರುಗೋಡು: ತುಂಗಭದ್ರಾ ಬಲದಂಡೆ ಕೆಳಮಟ್ಟದ ಎಲ್‌ಎಲ್‌ಸಿ ಕಾಲುವೆ ಶುಕ್ರವಾರ ಒಡೆದು ಬಸವಪುರ ಮತ್ತು ಹೊಸಗೆಣಿಕೆಹಾಳು ಮಧ್ಯದ ಭತ್ತದ ಗದ್ದೆಗಳು ಜಲಾವೃತವಾಗಿವೆ. ಕಾಲುವೆಯ ಸುಮಾರು 62 ಕಿ.ಮೀ. ದೂರದಲ್ಲಿ ಅಂದಾಜು 30 ಅಡಿ ಅಗಲ ಮತ್ತು 20 ಅಡಿ ಆಳದಷ್ಟು ಕಾಲುವೆ ಒಡೆದು ಹೋಗಿದ್ದರಿಂದ ಗೆಣಿಕೆಹಾಳು, ಹೊಸಗೆಣಿಕೆಹಾಳು, ಕ್ಯಾದಿಗೆ ಹಾಳು ಹಾಗೂ ಇನ್ನಿತರ ಗ್ರಾಮಗಳಲ್ಲಿ ನಾಟಿ ಮಾಡಿದ ಸುಮಾರು 2,500 ಎಕರೆ ಭತ್ತದ ಗದ್ದೆಗಳಿಗೆ ಅಪಾರ ಪ್ರಮಾಣದ ನೀರು ನುಗ್ಗಿದೆ. ಕಾಲುವೆ ಒಡೆದ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದ ತುಂಗಭದ್ರಾ ರೈತ ಸಂಘದ ಜಿಲ್ಲಾಧ್ಯಕ್ಷ ದರೂರು ಪುರುಷೋತ್ತಮ ಗೌಡ, ಗುಂಡಿಗೆನೂರು ಗ್ರಾಮದಲ್ಲಿ ಕುಡಿಯಲು ಜನ-ಜನಾವಾರುಗಳಿಗೆ ಹಾಗೂ ನಾಟಿ ಮಾಡಿದ ಭತ್ತದ ಬೆಳೆಗಳಿಗೆ ನೀರು ಇಲ್ಲವಾಗಿದೆ. ಹೀಗಾಗಿ ರೈತರು ಕಾಲುವೆ ಒಡೆದಿರುವುದಾಗಿ ತುಂಗಭದ್ರಾ ಮಂಡಳಿ ಅಧಿಕಾರಿಗಳು ಆರೋಪಿಸುತ್ತಿದ್ದಾರೆ ಎಂದರು.
ಕೂಡಲೇ ಟ.ಬಿ.ಡ್ಯಾಮ್‌ನಿಂದ ಬರುವ ನೀರಿನ ಹರಿವನ್ನು ಕಡಿಮೆ ಮಾಡಿ ಕಾಲುವೆ ದುರಸ್ತಿ ಮಾಡಲು ಅಧಿಕಾರಿಗಳಿಗೆ
ತಿಳಿಸಲಾಗುವುದು. ಕಾಲುವೆ ಒಡೆದ ಸಮಯದಲ್ಲಿ 2000ಕ್ಕೂ ಹೆಚ್ಚು ಕ್ಯೂಸೆಕ್ ನೀರು ಹರಿಯುತ್ತಿತ್ತು. ಕಳೆದ 2 ವರ್ಷದ
ಹಿಂದೆ ಇದೆ ಸ್ಥಳದಲ್ಲಿ 50 ಅಡಿಗೂ ಹೆಚ್ಚು ಕಾಲುವೆ ಒಡೆದು ಅಪಾರ ಪ್ರಮಾಣದ ನೀರು ಕೆರೆಗೆ ಹರಿದು ಹೋಗಿದ್ದು, ನಂತರ ಕಾಲುವೆವನ್ನು ಭದ್ರಗೊಳಿಸಲಾಗಿತ್ತು ಎಂದು ಎಂದು ತುಂಗಭದ್ರಾ ಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.
ಮುಷ್ಟಗಟೆ ಭೀಮನಗೌಡ, ಮಲ್ಲಪ್ಪ, ಶಿವಯ್ಯ, ಶರಣಪ್ಪ, ಗೋವಿಂದಪ್ಪ, ವೀರೇಶ, ಕೊಟ್ರೇಶ್, ತುಂಗಭದ್ರಾ ಮಂಡಳಿ
ಅಧಿಕಾರಿಗಳಾದ, ನಾಗಮೋಹನ ರೆಡ್ಡಿ , ವಿಶ್ವನಾಥ, ರಾಮಕೃಷ್ಣ, ಜೈನುರುದ್ದೀನ್ ಇತರರು ಇದ್ದರು.