Advertisement
ಸರಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸಮವಸ್ತ್ರ, ಪಠ್ಯಪುಸ್ತಕ, ಮಧ್ಯಾಹ್ನದ ಬಿಸಿಯೂಟ ಸಹಿತ ಎಲ್ಲ ಸೌಲಭ್ಯವನ್ನು ಸರಕಾರವೇ ಒದಗಿಸುತ್ತಿದೆ. ಜತೆಗೆ ಪೂರ್ವ ಪ್ರಾಥಮಿಕ ಶಾಲೆಗಳನ್ನು, ಆಂಗ್ಲ ಮಾಧ್ಯಮ ತರಗತಿಗಳನ್ನು ಹಂತ ಹಂತವಾಗಿ ಆರಂಭಿಸುತ್ತಿದೆ. ಆದರೆ ಕೆಲವೊಂದು ಶಾಲೆಗಳಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಅನುಮತಿ ಇಲ್ಲದೇ ಪೂರ್ವ ಪ್ರಾಥಮಿಕ ತರಗತಿಗಳನ್ನು, ಆಂಗ್ಲಮಾಧ್ಯಮ ಆರಂಭಿಸಿ, ಅದಕ್ಕಾಗುವ ಹೆಚ್ಚುವರಿ ಹೊರೆಯನ್ನು ವಿದ್ಯಾರ್ಥಿಗಳ ಪಾಲಕ, ಪೋಷಕರ ಮೇಲೆ ಹೊರಿಸಲಾಗುತ್ತಿದೆ.
ಸರಕಾರಿ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ಆರಂಭಿಸಬೇಕು ಎಂಬ ಚಿಂತನೆ ಸರಕಾರದ ಹಂತದಲ್ಲಿದೆ. ಶಾಲಾ ಕಾಂಪೌಂಡ್ ಒಳಗೆ ಇರುವ ಅಂಗನವಾಡಿಗಳನ್ನು ಎಲ್‌ಕೆಜಿ, ಯುಕೆಜಿಯಾಗಿ ಪರಿವರ್ತಿಸಿ, ಬೋಧನೆ ಮತ್ತು ಪೌಷ್ಟಿಕಾಹಾರವನ್ನು ಕ್ರಮವಾಗಿ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನೋಡಿಕೊಳ್ಳುವ ಬಗ್ಗೆಯೂ ಚರ್ಚೆ ನಡೆಯುತ್ತಿದ್ದು, ಯಾವುದೇ ತೀರ್ಮಾನ ಆಗಿಲ್ಲ. ಹೀಗಾಗಿ ಈವರೆಗೂ ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ ಮಾತ್ರ ಅಧಿಕೃತವಾಗಿ ಎಲ್‌ಕೆಜಿ, ಯುಕೆಜಿ ತೆರೆಯಲು ಅನುಮತಿ ನೀಡಲಾಗಿದೆ. ಆಂಗ್ಲ ಮಾಧ್ಯಮ ತರಗತಿ ನಡೆಸಲು ಕೆಲವು ಶಾಲೆಗಳಿಗೆ ಅಲ್ಲಿನ ಸೌಲಭ್ಯ, ಶಿಕ್ಷಕರ ಲಭ್ಯತೆ ಆಧಾರದಲ್ಲಿ ಅನುಮತಿ ಕಲ್ಪಿಸಲಾಗಿದೆ. ಸರಕಾರದ ಅನುಮತಿ ಪಡೆಯದೆ ಎಲ್‌ಕೆಜಿ, ಯುಕೆಜಿ ಆರಂಭಿಸಿರುವ ಶಾಲೆಗಳಲ್ಲಿ ಈ ತರಗತಿಯ ಮಕ್ಕಳಿಗೆ ಶಿಕ್ಷಣ ಬೋಧಿಸಲು ಅತಿಥಿ ಶಿಕ್ಷಕರನ್ನು ಸರಕಾರ ನೀಡುವುದಿಲ್ಲ. ಆಯಾ ಶಾಲೆ ಅಥವಾ ಎಸ್‌ಡಿಎಂಸಿಯೇ ವ್ಯವಸ್ಥೆ ಮಾಡಬೇಕು. ಇದರ ಸಂಪೂರ್ಣ ಜವಾಬ್ದಾರಿ ಆ ಶಾಲೆಗೆ ಸೇರಿರುತ್ತದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
Related Articles
ಇಲಾಖೆಯಿಂದ ಹೆಚ್ಚುವರಿ ಕಾರ್ಯಭಾರಕ್ಕೆ ಅನುಗುಣವಾಗಿ ಅತಿಥಿ ಶಿಕ್ಷಕರ ನೇಮಕಕ್ಕೆ ಅವಕಾಶ ನೀಡುತ್ತದೆ. ಅಲ್ಲದೆ ಆ ಶಿಕ್ಷಕರ ಗೌರವಧನವನ್ನು ಸರಕಾರವೇ ಭರಿಸುತ್ತದೆ. ಹೀಗಾಗಿ ಅತಿಥಿ ಶಿಕ್ಷಕರಿಗೆ ಮಕ್ಕಳಿಂದ ಶುಲ್ಕ ವಸೂಲಿ ಮಾಡಲು ಅವಕಾಶ ಇಲ್ಲ. ಇಲಾಖೆಯ ಗಮನಕ್ಕೆ ಬಾರದೇ ಅತಿಥಿ ಶಿಕ್ಷಕರನ್ನು ನೇಮಿಸಿಕೊಂಡಿದ್ದಲ್ಲಿ ಆಗ ಎಸ್‌ಡಿಎಂಸಿ ಅನುಮತಿ ಪಡೆದಿರಬೇಕು ಮತ್ತು ಅಂತಹ ಶಿಕ್ಷಕರಿಗೆ ಶಾಲೆಯಿಂದಲೇ ವೇತನ ನೀಡಬೇಕು. ಆಗಲೂ ಮಕ್ಕಳಿಂದ ಶುಲ್ಕ ಪಡೆಯುವಂತಿಲ್ಲ.
Advertisement
110ಕ್ಕೂ ಅಧಿಕ ಶಾಲೆಗಳಲ್ಲಿ …ದ.ಕ. ಜಿಲ್ಲೆಯಲ್ಲಿ ಎಸ್‌ಡಿಎಂಸಿ ಬೆಂಬಲ ದೊಂದಿಗೆ ಸುಮಾರು 70 ಹಾಗೂ ಉಡುಪಿ ಜಿಲ್ಲೆಯಲ್ಲಿ 40ಕ್ಕೂ ಅಧಿಕ ಸರಕಾರಿ ಶಾಲೆಯಲ್ಲಿ ಪೂರ್ವ ಪ್ರಾಥಮಿಕ ತರಗತಿ ನಡೆಯುತ್ತಿದೆ. ಸರಕಾರದ ಅನುಮತಿ ಇಲ್ಲದೇ ಆಂಗ್ಲ ಮಾಧ್ಯಮ ಹಾಗೂ ಎಸ್‌ಡಿಎಂಸಿ ಯಲ್ಲಿ ತೀರ್ಮಾ ನಿ ಸದೆ, ಅಗತ್ಯ ವ್ಯವಸ್ಥೆ ಮಾಡಿ ಕೊಳ್ಳದೆ ಎಲ್‌ಕೆಜಿ, ಯುಕೆಜಿ ತರಗತಿ ಗಳನ್ನು ನಡೆ ಸುವುದು ಸರಿಯಲ್ಲ. ಮುಂದೆ ವಿದ್ಯಾರ್ಥಿಗಳಿಗೆ ಸಮಸ್ಯೆ ಆಗದಂತೆ ಎಚ್ಚರ ವಹಿಸಬೇಕು.
– ಗೋವಿಂದ ಮಡಿವಾಳ ಮತ್ತು ಸುಧಾಕರ,
ಉಡುಪಿ, ದ.ಕ. ಡಿಡಿಪಿಐಗಳು ಕರ್ನಾಟಕ ಪಬ್ಲಿಕ್ ಶಾಲೆ ಸಹಿತ ಸರಕಾರದಿಂದ ಅನುಮತಿ ಪಡೆದ ಸರಕಾರಿ ಶಾಲೆ ಗಳಲ್ಲಿ ಅಲ್ಲಿನ ಶಿಕ್ಷಕರೆ ಎಲ್‌ಕೆಜಿ, ಯುಕೆಜಿಗೆ ಬೋಧನೆ ಮಾಡಲಿದ್ದಾರೆ. ಕೆಲವರಿಗೆ ಈಗಾಗಲೇ ತರಬೇತಿಯನ್ನೂ ನೀಡಲಾಗಿದೆ. ಆದರೆ ಎಲ್‌ಕೆಜಿ, ಯುಕೆಜಿ ಬೋಧನೆಗೆ ಸರಕಾರದಿಂದ ಅತಿಥಿ ಶಿಕ್ಷಕರನ್ನು ನೀಡುವುದಿಲ್ಲ. ಒಂದೊಮ್ಮೆ ಅತಿಥಿ ಶಿಕ್ಷಕರನ್ನು ಈ ತರಗತಿಗಳಿಗೆ ನೇಮಿಸಿ ಕೊಂಡಿದ್ದಲ್ಲಿ ಎಸ್‌ಡಿಎಂಸಿ ನಿರ್ಧಾರದಂತೆ ಅವರ ವೇತನ ಇತ್ಯಾದಿ ಇರಲಿದೆ.
-ಡಾ| ವಿಶಾಲ್,
ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ