Advertisement

ಸರಕಾರಿ ಶಾಲೆಗಳಲ್ಲಿ ಎಲ್ ಕೆಜಿ, ಯುಕೆಜಿ ತರಗತಿಗಳನ್ನು ಪ್ರಾರಂಭಿಸಲು ಚಿಂತನೆ

04:31 PM Sep 05, 2020 | keerthan |

ಮಣಿಪಾಲ: ರಾಜ್ಯದ ಸರಕಾರಿ ಶಾಲೆಗಳಲ್ಲಿ ಇನ್ನು ಮುಂದೆ ಎಲ್ ಕೆಜಿ, ಯುಕೆಜಿ ತರಗತಿಗಳನ್ನು ಪ್ರಾರಂಭಿಸಲು ರಾಜ್ಯ ಸರಕಾರ ನಿರ್ಧರಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಿಮ್ಮ ಅಭಿಪ್ರಾಯವೇನು ಎಂದು ಉದಯವಾಣಿ ಕೇಳಿದ್ದು, ಆಯ್ದ ಅಭಿಪ್ರಾಯಗಳು ಇಲ್ಲಿದೆ.

Advertisement

ಕೃಷ್ಣ ಜೋಶಿ: ಸುಧಾರಣೆ ಯಾವ ರೀತಿ ತರಬೇಕೆಂದರೆ ಸುಲಿಗೆ ಮಾಡುತ್ತಿರುವ ಖಾಸಗಿ ಶಾಲೆಗಳು ಮುಚ್ಚು ವಂತಾಗಬೇಕು. ಅದಕ್ಕೆ ಸರಕಾರಕ್ಕೆ ನಿಯತ್ತು ಬೇಕು

ಪರಂ ಪರಂ: ನಮ್ಮ ಧೇಶ ದಲ್ಲಿ ಸರ್ಕಾರಿ ನೌಕರರು ಮತ್ತು ಜನ ಪ್ರತಿನಿಧಿಗಳು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಲ್ಲೆ ವಿಧ್ಯಾಭ್ಯಾಸ ಕೊಡಬೇಕೆಂಬ ನಿಯಮ ಜಾರಿಗೆ ಬರಬೇಕು.

ನಟರಾಜನ್ ಸುರೇಶ್: ಸರ್ಕಾರಿ ಶಾಲೆ ಶಿಕ್ಷಕರು ಮಕ್ಕಳನ್ನು ಸೇರಿಸುವಂತೆ ಕೇಳುತ್ತಿದ್ದ ಪರಿಸ್ಥಿತಿ ಬದಲಾಗಿ ಪೋಷಕರು ಮಗು ಹುಟ್ಟುವ ಮುಂಚೆ ಖಾಸಗಿ ಶಾಲೆ ಗೇಟ್ ಬಳಿ ಅಹೋರಾತ್ರಿ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ಬದಲಾಗಬೇಕು. ಶಿಕ್ಷಣ ವ್ಯಾಪಾರ ಅಲ್ಲ. ಅದು ಸಾರ್ವಜನಿಕ ಸೇವೆ.

ವಿಜಯ್ ಗೌಡ: ನಿರ್ಧಾರವೇನೋ ಒಳ್ಳೆಯದು. ಆದರೆ ಸರ್ಕಾರಿ ಶಾಲೆಗಳಿಗೆ, ಸಮರ್ಪಕ ಕೊಠಡಿ ಹಾಗೂ ನುರಿತ ಶಿಕ್ಷಕರು ಇದ್ದರೆ ಒಳ್ಳೆಯದು. ಇಲ್ಲದಿದ್ದರೆ ಎಲ್ಲಾ ವ್ಯರ್ಥ. ಈಗಿನ ಸರ್ಕಾರಿ ಶಾಲೆಗಳ ಪರಿಸ್ಥಿತಿ ನೋಡುತ್ತಾ ಇದ್ದೇವೆ.

Advertisement

ರವೀಂದ್ರ ಅರಲಗುಪ್ಪೆ: ಸುಲಿಗೆ ಮಾಡುತ್ತಿರುವ ಖಾಸಗಿ ಶಾಲೆಗಳನ್ನು ಮುಚ್ಚಿ ಸರ್ಕಾರಿ ಶಾಲೆಗಳನ್ನು ತೆರೆದು ರಾಜಕಾರಣಿಗಳಿಗೆ ಸುಲಿಗೆ ಮಾಡುವ ಬಾರಿ ಅವಕಾಶ ಕೊಡಬೇಕು. ಏಕೆಂದರೆ ಅವರಿಗೆ ಈಗಾಗಲೇ ಸುಲಿಗೆ ಮಾಡುವ ಅಭ್ಯಾಸವಿರುತ್ತದೆ.

ನಾಗರಾಜ ಹೆಗ್ಡೆ: ಒಂದಿಷ್ಟು ಬದಲಾವಣೆಯೊಂದಿಗೆ ಆರಂಭಿಸೋದು ಉತ್ತಮ. ಸರಕಾರಿ ಶಾಲೆಯೂ ಉಳಿಯುತ್ತೆ. ಮಾತೃಭಾಷೆಯೂ ಉಳಿಯುತ್ತೆ.

ಸುರೇಶ್ ಕುಮಾರ್ ಕೆ: ಬರೀ ಶಾಲೆಗಳನ್ನು ನಿರ್ಮಿಸಿ ಏನು ಉಪಯೋಗ? ರಾಜಕಾರಣಿಗಳು, ಗುತ್ತಿಗೆದಾರರ ಜೇಬು ತುಂಬುತ್ತದೆ. ಶಿಕ್ಷಕರನ್ನು ನೇಮಿಸಿ, ಮೂಲಭೂತ ಸೌಲಭ್ಯ ಕಲ್ಪಿಸಿ, ಉತ್ತಮ ಕಲಿಕಾ ವಾತಾವರಣ ನಿರ್ಮಿಸಿ. ಕನ್ನಡ ಮಾಧ್ಯಮದ ಜೊತೆ ಅಂಗ್ಲ ಮಾಧ್ಯಮ ತೆರೆಯಿರಿ.

ವಿಜಯ ಗೌಡ: ಇಂದಿನ ದಿನಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗಿ, ಶಾಲೆಗಳು ಮುಚ್ಚುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಜನರು ತಮ್ಮ ಮಕ್ಕಳನ್ನು ಯಾಕೆ ಸರ್ಕಾರಿ ಶಾಲೆಗೆ ಸೇರಿಸದೆ, ಖಾಸಗಿ ಶಾಲೆಗೆ ಸೇರಿಸುತ್ತಿದ್ದಾರೆ ಅಂತ ಒಮ್ಮೆ ಅವಲೋಕಿಸಿ. ಶಿಕ್ಷಣದ ಗುಣಮಟ್ಟ ಪ್ರತಿ ವಿಷಯಕೊಬ್ಬರು ಶಿಕ್ಷಕರು. ಹೀಗೆ ಹಲವಾರು.

Advertisement

Udayavani is now on Telegram. Click here to join our channel and stay updated with the latest news.

Next