Advertisement

ಅಂಗನವಾಡಿಗಳಲ್ಲೇ ಎಲ್‌ಕೆಜಿ, ಯುಕೆಜಿ ಆರಂಭವಾಗಲಿ

08:59 AM May 21, 2019 | Team Udayavani |

ಹಾಸನ: ಸರ್ಕಾರ ಈ ವರ್ಷದಿಂದ ಆರಂಭಿಸಲಿರುವ ಇಂಗ್ಲಿಷ್‌ ಮಾಧ್ಯಮದ ಎಲ್ಕೆಜಿ ಮತ್ತು ಯುಕೆಜಿ ಶಾಲೆಗಳಿಗೆ ಅಂಗನವಾಡಿ ಕಾರ್ಯಕರ್ತೆ ಯರು ಮತ್ತು ಸಹಾಯಕಿಯರನ್ನೇ ನೇಮಕ ಮಾಡಿ ಕೊಳ್ಳಬೇಕೆಂದು ರಾಜ್ಯ ಅಂಗನವಾಡಿ ಕಾರ್ಯ ಕರ್ತೆಯರ ಮತ್ತು ಸಹಾಯಕಿಯರ ಫೆಡರೇಶನ್‌ ಅಧ್ಯಕ್ಷ ಎಚ್.ಕೆ. ರಾಮಚಂದ್ರ ಅವರು ಒತ್ತಾಯಿಸಿದರು.

Advertisement

ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮ: ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳ ಸಂಖ್ಯೆ ಕಡಿಮೆ ಆಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ 276 ಕರ್ನಾಟಕ ಪಬ್ಲಿಕ್‌ ಶಾಲೆಗಳಲ್ಲಿ ಎಲ್ಕೆಜಿ ಮತ್ತು ಯುಕೆಜಿ ಇಂಗ್ಲಿಷ್‌ ಮಾಧ್ಯಮ ತರಗತಿಗಳನ್ನು ಆರಂಭಿಸಲು ಮುಂದಾಗಿದೆ. ಶಿಕ್ಷಣ ಇಲಾಖೆ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ನಿರ್ವಹಿಸಲಾಗುತ್ತಿದ್ದ ಅಂಗನವಾಡಿಗಳನ್ನು 4,100 ಸರ್ಕಾರಿ ಪ್ರಾಥಮಿಕ ಶಾಲೆಗಳ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಮುಂದಾಗಿದೆ ಇದರಿಂದ ಪ್ರಾಥ ಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ವತಿಯಿಂದ ಕಾರ್ಯನಿರ್ವಸುತ್ತಿರುವ ಕಿಂಡರ್‌ ಗಾರ್ಡನ್‌ಗಳ ಸಂಖ್ಯೆ 4,376ಕ್ಕೆ ಏರಲಿದೆ ಎಂದರು.

ಬಾಲ ಸ್ನೇಹಿ ಕೇಂದ್ರ: 2019-20ನೇ ಸಾಲಿ ನಿಂದಲೇ ಎಲ್ಲಾ ಅಂಗನವಾಡಿ ಕೇಂದ್ರಗಳನ್ನು ಹತ್ತಿರದ ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಸ್ಥಳಾಂತರಿಸಿ ಬಾಲ ಸ್ನೇಹಿ ಕೇಂದ್ರಗಳನ್ನಾಗಿ ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದು ಹೇಳಿದರು.

ಹಾಲಿ ಕೆಲಸ ಮಾಡುತ್ತಿರುವ ಅಂಗನವಾಡಿ ಕಾರ್ಯಕರ್ತೆಯರನ್ನು ಹಾಗೂ ಸಹಾಯಕಿಯರನ್ನು ಶಿಕ್ಷಕಿ ಹಾಗೂ ಬಾಲಸ್ನೇಹಿ ಕೇಂದ್ರಗಳ ಕೆಲಸಕ್ಕೆ ನೇಮಿಸಿಕೊಂಡು ಮಾಸಿಕ ಕನಿಷ್ಠ 18 ಸಾವಿರ ರೂ ಮಾಸಿಕ ವೇತನ ನಿಗದಿ ಮಾಡಬೇಕೆಂದು ಅವರು ಮನವಿ ಮಾಡಿದರು.

ಮೇಲ್ದರ್ಜೆಗೇರಿಸಿ: ಸಂಘಟನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಜಯಮ್ಮ ಮಾತನಾಡಿ, ಇರುವ ಅಂಗನವಾಡಿ ಕೇಂದ್ರಗಳನ್ನೇ ಮೇಲ್ದರ್ಜೆಗೇರಿಸಿ ಎಲ್ಕೆಜಿ ಮತ್ತು ಯುಕೆಜಿ ಇಂಗ್ಲಿಷ್‌ ತರಗತಿಗಳನ್ನು ಆರಂಭಿಸಬೇಕು. ಇಲ್ಲವಾದರೆ ಕಾರ್ಯಕರ್ತೆ ಯರು ತಮ್ಮ ಕೆಲಸವನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಆತಂಕವ್ಯಕ್ತಪಡಿಸಿದರು.

Advertisement

ಸಂಘಟನೆ ಜಿಲ್ಲಾ ಸಂಚಾಲಕ ಎಂ.ಸಿ. ಡೋಂಗ್ರೆ, ಸಕಲೇಶಪುರ ತಾಲೂಕು ಕಾರ್ಯದರ್ಶಿ ಪದ್ಮ, ಅರಸೀಕೆರೆ ತಾಲೂಕು ಅಧ್ಯಕ್ಷೆ ನೇತ್ರಾವತಿ, ಆಲೂರು ತಾಲೂಕು ಕಾರ್ಯದರ್ಶಿ ಜಯ, ಚನ್ನರಾಯಪಟ್ಟಣ ತಾಲೂಕು ಕಾರ್ಯದರ್ಶಿ ನಾಗರತ್ನ, ಅರಕಲಗೂಡು ತಾಲೂಕು ಕಾರ್ಯ ದರ್ಶಿ ಲೀನಾ ಡಯಾನ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next