Advertisement

ಅಂತರರಾಷ್ಟ್ರೀಯ ಫ್ಯಾಷನ್ ಶೋಗೆ ಎಲ್ಕೆಜಿ ಓದುತ್ತಿರುವ ಆಧ್ಯಾ ಅಯ್ಕೆ.

06:12 PM Aug 07, 2019 | sudhir |

ವಿಜಯಪುರ : ಎಲ್ಕೆಜಿ ಓದುತ್ತಿರುವ ವಿಜಯಪುರದ ನಾಲ್ಕು ವರ್ಷದ ಪೋರಿ ಇಂಡೋನೇಷಿಯಾದಲ್ಲಿ ನಡೆಯುವ ಅಂತರಾಷ್ಟ್ರೀಯ ಮಟ್ಟದ ಫ್ಯಾಶನ್ ಶೋ ಸ್ಪರ್ಧೆಗೆ ಆಯ್ಕೆಯಾಗಿದ್ದಾಳೆ.

Advertisement

ನಗರದ ಬಿಎಸ್ಡಿ ಸಂಸ್ಥೆಯ ಬಿ ಎಂ ಪಾಟೀಲ್ ಪಬ್ಲಿಕ್ ಸ್ಕೂಲ್ ನ ಎಲ್ಕೆಜಿ ವಿದ್ಯಾರ್ಥಿನಿ ಆಧ್ಯಾ ಜಾಧವ್ ಎಂಬ ಬಾಲೆ ಅಂತರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾಳೆ.

ಮಂಗಳೂರಿನಲ್ಲಿ ಈಚೆಗೆ ಜರುಗಿದ ಎಬಿಸಿಡಿ ಫ್ಯಾಷನ್ಸ್ ಇನ್ಸಿಟಿಟ್ಯೂಟ್ ಏರ್ಪಡಿಸಿದ್ದ ರಾಷ್ಟ್ರಮಟ್ಟದ ಫ್ಯಾಶನ್ ಶೋ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಆಧ್ಯಾ ಪ್ರಥಮ ಸ್ಥಾನ ಪಡೆಯುವ ಮೂಲಕ _ಆಗಸ್ಟ್ 21 ರಂದು ಇಂಡೋನೇಶಿಯಾ ದ ಬಾಯಿಯಲ್ಲಿ ನಡೆಯುವ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಪಾಲ್ಗೊಳ್ಳುವ ಅರ್ಹತೆ ಪಡೆದಿದ್ದಾಳೆ.

ವಿದ್ಯಾರ್ಥಿನಿಯ ಈ ಸಾಧನೆಗೆ ಬಿ ಎಂ ಪಾಟೀಲ್ ಪಬ್ಲಿಕ್ ಶಾಲೆಯ ಪ್ರಾಚಾರ್ಯ ಬಂಧನ ಬ್ಯಾನರ್ಜಿ ಅಭಿನಂದಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next