ನವ ದೆಹಲಿ : ಕೋವಿಡ್ ಸೋಂಕಿನ ನಿರ್ವಹಣೆಯಲ್ಲಿ ಪ್ರಧಾನಿ ನರೇಂದ್ರ ಮೊದಿಯವರ ನೇತೃತ್ವದ ಸರ್ಕಾರ ಎಡವಿದ ಎಂಬ ಆರೋಪಗಳು ಸಾರ್ವಜನಿಕ ಹಾಗೂ ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿರುವ ಹಿನ್ನಲೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತೆ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೊಶ ವ್ಯಕ್ತಪಡಿಸಿದ್ದಾರೆ.
ಕೋವಿಡ್ ಸೋಂಕಿನ ಕಾರಣದಿಂದಾಗಿ ಇಡೀ ವಿಶ್ವದ ನಾಗರಿಕ ವ್ಯವಸ್ಥೆ ಅಡಿಮೇಲಾಗಿದ್ದು, ಜಾಗತಿಕವಾಗಿ ಬಡತನದ ಮಟ್ಟ ಏರಿಕೆಯಾಗಿದೆ ಹಾಗೂ ಸಾಮಾನ್ಯ ಮಧ್ಯಮ ವರ್ಗದವರ ಆದಾಯ ಇಳಿಮುಖವಾಗಿದೆ ಎಂಬ ವರದಿಗಳಾಗುತ್ತಿವೆ.
ಇದನ್ನೂ ಓದಿ : ಅಂಬಾನಿ ಮನೆ ಬಳಿ ಸ್ಫೋಟಕ ಪತ್ತೆ ಪ್ರಕರಣ: ಮಾಜಿ ಎನ್ ಕೌಂಟರ್ ಸ್ಪೆಷಲಿಸ್ಟ್ ಶರ್ಮಾ ಬಂಧನ
ತಮ್ಮ ಅಧಿಕೃತ ಟ್ವೀಟರ್ ಖಾತೆ ಮೂಲಕ ಜಾಗತಿಕ ಬಡತನಕ್ಕೆ ಭಾರತದ ಶೇಕಡಾ 50ಕ್ಕಿಂತ ಹೆಚ್ಚು ಕೊಡುಗೆ ಇದೆ ಎಂಬ ಅಂತಾರಾಷ್ಟ್ರೀಯ ಮಟ್ಟದ ಸುದ್ದಿ ಸಂಸ್ಥೆಯೊಂದರ ವರದಿಯ ತುಣಕಿನ ಜೊತೆಗೆ ಟ್ವೀಟ್ ಮಾಡಿದ ಗಾಂಧಿ, ಇದು ಭಾರತ ಸರ್ಕಾರ ಸಾಂಕ್ರಾಮಿಕದ ಪರಿಸ್ಥಿತಿಯಲ್ಲಿ ಮಾಡಿದ ಕೆಟ್ಟ ನಿರ್ವಹಣೆಯ ಫಲಿತಾಂಶವಾಗಿದೆ ಎಂದು ಅವರು ಬರೆದುಕೊಂಡಿದ್ದಾರೆ.
Related Articles
ನಾವು ಈಗ ಭವಿಷ್ಯವನ್ನು ನೋಡಬೇಕು. ಪ್ರಧಾನಿ ತನ್ನ ತಪ್ಪುಗಳನ್ನು ಒಪ್ಪಿಕೊಂಡಾಗ ಮತ್ತು ತಜ್ಞರ ಸಹಾಯವನ್ನು ಪಡೆದಾಗ ನಮ್ಮ ದೇಶ ಪುನರ್ ನಿರ್ಮಾಣದ ಆರಂಭಕ್ಕೆ ಸಾಧ್ಯವಾಗುತ್ತದೆ. ನಿರಾಕರಣೆಯಲ್ಲಿಯೇ ಬದುಕುವುದು ಯಾವುದನ್ನೂ ಪರಿಹರಿಸುವುದಿಲ್ಲ ಎಂದು ಅವರು ಸೌಮ್ಯವಾಗಿಯೇ ಆಕ್ರೋಶ ಹೊರ ಹಾಕಿದ್ದಾರೆ.
ಇನ್ನು, ಅವರು ಟ್ವೀಟ್ ನಲ್ಲಿ ಸೇರಿಸಿದ ವರದಿಯ ತುಣುಕಿನಲ್ಲಿ ಜಾಗತಿಕ ಬಡತನ ಮಟ್ಟಕ್ಕೆ ಶೇಕಡಾ. 57. 3 ರಷ್ಟು ಭಾರತದ ಕೊಡುಗೆ ಇದೆ ಎಂದು ಉಲ್ಲೇಖಿಸಿದೆ.
ಇದನ್ನೂ ಓದಿ : ಮೋದಿ ತಾವೊಬ್ಬ ದುರ್ಬಲ ನಾಯಕರೆಂದು ಸಾಬೀತುಪಡಿಸಿದ್ದಾರೆ : ಸಿದ್ದು ವ್ಯಂಗ್ಯ