ಉಡುಪಿ: ಕೋಟ ಪೊಲೀಸ್ ಠಾಣಾ ವ್ಯಾಪ್ತಿಯ ಸಾಸ್ತಾನ ಟೋಲ್ ಗೇಟ್ ಬಳಿ ಜು. 12ರಂದು ಪತ್ತೆಯಾದ ಅಕ್ರಮ ಜಾನುವಾರು ಸಾಗಾಟ ಪ್ರಕರಣದಲ್ಲಿ ಆರೋಪಿ ಗಳಾಗಿರುವ 6 ಮಂದಿ ಪೊಲೀಸರ ಪೈಕಿ ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ವ್ಯಾಪ್ತಿಯ ನಾಲ್ವರು ಪೊಲೀಸರನ್ನು ಅಮಾನತು ಮಾಡಲಾಗಿದೆ ಎಂದು ಉಡುಪಿ ಎಸ್‌ಪಿ ನಿಶಾ ಜೇಮ್ಸ್ ತಿಳಿಸಿದ್ದಾರೆ.
ಆರೋಪಿಗಳಿಗೆ ಶೋಧ
ಕೋಟ: ಅಕ್ರಮ ಗೋ ಸಾಗಾಟಕ್ಕೆ ಸಹಕಾರ ನೀಡಿದ ಆರೋಪಿಗಳಾದ ಆರು ಮಂದಿ ಪೊಲೀಸ್ ಪೇದೆಗಳಲ್ಲಿ ಇಬ್ಬರನ್ನು ಬುಧವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ತಲೆ ಮರೆಸಿಕೊಂಡ ನಾಲ್ವರಿಗೆ ಶೋಧ ನಡೆದಿದೆ. ಕಾರ್ಯ ದಕ್ಷತೆಗೆ ಶ್ಲಾಘನೆ
ಪೊಲೀಸ್ ಇಲಾಖೆಯ ಸಿಬಂದಿ ಗೋಸಾಗಾಟ ಕೃತ್ಯಕ್ಕೆ ಸಹಕರಿಸುತ್ತಿದ್ದಾರೆ ಎಂದು ಗೊತ್ತಾದಾಗ ಮುಲಾಜಿಲ್ಲದೆ ಕ್ರಮಕ್ಕೆ ಮುಂದಾದ ಕೋಟ ಠಾಣಾಧಿಕಾರಿ ನಿತ್ಯಾನಂದ ಗೌಡರ ಬಗ್ಗೆ ಸಾರ್ವಜನಿಕ ವಲಯದಲ್ಲಿ ಶ್ಲಾಘನೆ ವ್ಯಕ್ತವಾಗಿದೆ.
Advertisement
ಕೋಟ ಠಾಣೆಯ ಹೆಡ್‌ಕಾನ್‌ಸ್ಟೆಬಲ್ ರಾಘವೇಂದ್ರ, ಉಡುಪಿ ಜಿಲ್ಲಾ ಸಶಸ್ತ್ರ ಪೊಲೀಸ್ ಪಡೆಯ ಸಹಾಯಕ ಉಪನಿರೀಕ್ಷಕ ಬಾಲಸುಬ್ರಹ್ಮಣ್ಯ, ಹೆಡ್ ಕಾನ್‌ಸ್ಟೆಬಲ್ ಪ್ರಶಾಂತ್ ಮತ್ತು ಕಾನ್‌ಸ್ಟೇಬಲ್ ಚಂದ್ರಶೇಖರ್ ಅಮಾನತು ಆದವರು. ಇವರೆಲ್ಲರೂ ತಲೆಮರೆಸಿಕೊಂಡಿದ್ದಾರೆ. ಉ.ಕ. ಮಂಕಿ ಠಾಣೆಯ ವಿನೋದ್, ಕರಾವಳಿ ಕಾವಲು ಪಡೆಯ ಸಂತೋಷ್ ನ್ಯಾಯಾಂಗ ಬಂಧನದಲ್ಲಿದ್ದಾರೆ.
ಕೋಟ: ಅಕ್ರಮ ಗೋ ಸಾಗಾಟಕ್ಕೆ ಸಹಕಾರ ನೀಡಿದ ಆರೋಪಿಗಳಾದ ಆರು ಮಂದಿ ಪೊಲೀಸ್ ಪೇದೆಗಳಲ್ಲಿ ಇಬ್ಬರನ್ನು ಬುಧವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ತಲೆ ಮರೆಸಿಕೊಂಡ ನಾಲ್ವರಿಗೆ ಶೋಧ ನಡೆದಿದೆ. ಕಾರ್ಯ ದಕ್ಷತೆಗೆ ಶ್ಲಾಘನೆ
ಪೊಲೀಸ್ ಇಲಾಖೆಯ ಸಿಬಂದಿ ಗೋಸಾಗಾಟ ಕೃತ್ಯಕ್ಕೆ ಸಹಕರಿಸುತ್ತಿದ್ದಾರೆ ಎಂದು ಗೊತ್ತಾದಾಗ ಮುಲಾಜಿಲ್ಲದೆ ಕ್ರಮಕ್ಕೆ ಮುಂದಾದ ಕೋಟ ಠಾಣಾಧಿಕಾರಿ ನಿತ್ಯಾನಂದ ಗೌಡರ ಬಗ್ಗೆ ಸಾರ್ವಜನಿಕ ವಲಯದಲ್ಲಿ ಶ್ಲಾಘನೆ ವ್ಯಕ್ತವಾಗಿದೆ.
ಜಿಲ್ಲಾ ಪೊಲೀಸ್‌ಗೆ ಮತ್ತೂಂದು ಕಪ್ಪುಚುಕ್ಕೆ
ಉಡುಪಿ: ಪೊಲೀಸ್ ಸಿಬಂದಿಯ ಅಕ್ರಮ ವ್ಯವಹಾರದಿಂದಾಗಿ ಇಲಾಖೆಗೆ ಕಸಿವಿಸಿಯ ಸ್ಥಿತಿ ಎದುರಾಗಿದೆ. ಸಾಸ್ತಾನ ಟೋಲ್ಗೇಟ್ ಬಳಿ ಜು.12ರಂದು ಪತ್ತೆಯಾದ ಅಕ್ರಮ ಜಾನುವಾರು ಸಾಗಾಟ ಪ್ರಕರಣದಲ್ಲಿ ಆರೋಪಿಗಳಾಗಿರುವ 6 ಮಂದಿ ಪೊಲೀಸ್ ಸಿಬಂದಿ ಪೈಕಿ ಉಡುಪಿ ಜಿಲ್ಲಾ ಪೊಲೀಸ್‌ನ 4 ಮಂದಿ ಸಿಬಂದಿ ಇದ್ದಾರೆ. ಜಿಲ್ಲಾ ಪೊಲೀಸ್‌ನ ಸಿಬಂದಿ ಅಕ್ರಮದಲ್ಲಿ ಪಾಲ್ಗೊಂಡ ಮೂರನೇ ದೊಡ್ಡ ಪ್ರಕರಣವಾಗಿದೆ. ಕಳೆದ ವರ್ಷದ ಮೇ ತಿಂಗಳಿನಲ್ಲಿ ಪೆರ್ಡೂರಿನ ಸೇನರಬೆಟ್ಟು ಎಂಬಲ್ಲಿ ದನದ ವ್ಯಾಪಾರಿ ಹುಸೈನಬ್ಬ ಕೊಲೆ ಪ್ರಕರಣದಲ್ಲಿ ಪಿಎಸ್‌ಐ ಹಾಗೂ ಇಬ್ಬರು ಪೊಲೀಸ್ ಸಿಬಂದಿ ಬಂಧನಕ್ಕೊಳಗಾಗಿದ್ದರು. ಹಲ್ಲೆಗೊಳಗಾಗಿದ್ದ ಹುಸೈನಬ್ಬ ಕಸ್ಟಡಿಯಲ್ಲೇ ಸಾವನ್ನಪ್ಪಿದ್ದರು. ಈ ಪ್ರಕರಣ ಸಿಐಡಿಗೆ ವಹಿಸಲಾಗಿತ್ತು. ಡಬಲ್ ಮರ್ಡರ್‌ನಲ್ಲೂ ಇದೇ ವರ್ಷದ ಜನವರಿಯಲ್ಲಿ ಕೋಟದಲ್ಲಿ ನಡೆದ ಡಬಲ್ ಮರ್ಡರ್ ಪ್ರಕರಣದಲ್ಲಿ ಆರೋಪಿಗಳಿಗೆ ಸಹಕರಿಸಿದ ಆರೋಪದ ಹಿನ್ನೆಲೆಯಲ್ಲಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಇಬ್ಬರನ್ನು ಬಂಧಿಸಲಾಗಿತ್ತು. ಈ ಹಿಂದೆ ನಡೆದ ಪ್ರಕರಣಗಳಲ್ಲಿ ಭಾಗಿಯಾದ ಪೊಲೀಸರನ್ನು ಅಮಾನತು ಮಾಡಲಾಗಿತ್ತು. ಆದರೆ ಮತ್ತೆ ಇಂತಹ ಘಟನೆಗಳು ಮುಜುಗರಕ್ಕೀಡು ಮಾಡಿದೆ.
ಬೇಸರವಾಗಿದೆ
Related Articles
ಅಕ್ರಮ ಚಟುವಟಿಕೆಗಳಿಗೆ ನಮ್ಮ ಕೆಲವು ಸಿಬಂದಿಯೇ ಸಹಕಾರ ನೀಡಿರುವುದು ಬೇಸರದ ಸಂಗತಿ. ಕೆಲವೇ ಕೆಲವು ಮಂದಿ ಮಾತ್ರ ಇಂಥ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದ ಮಾತ್ರಕ್ಕೆ ಇಡೀ ಇಲಾಖೆಯ ಮೇಲೆ ಆರೋಪ ಹೊರಿಸುವುದು ಸರಿಯಲ್ಲ. ತಪ್ಪು ಮಾಡಿದವರ ವಿರುದ್ಧ ಇಲಾಖೆ ಸರಿಯಾದ ಕ್ರಮ ತೆಗೆದುಕೊಳ್ಳುತ್ತಿದೆ. ಇಂಥ ಕಪ್ಪು ಕುರಿಗಳು ಬೇರೆ ಇಲಾಖೆಗಳಲ್ಲಿ, ಬೇರೆ ಜಿಲ್ಲೆಗಳಲ್ಲಿಯೂ ಇರುತ್ತವೆ. ಈ ಪ್ರಕರಣದಲ್ಲಿ ಭಾಗಿಯಾದವರ ವಿರುದ್ಧ ಕೂಡ ಇಲಾಖಾ ಕ್ರಮ ಜರಗುತ್ತದೆ.
– ನಿಶಾ ಜೇಮ್ಸ್,ಎಸ್‌ಪಿ, ಉಡುಪಿ
– ನಿಶಾ ಜೇಮ್ಸ್,ಎಸ್‌ಪಿ, ಉಡುಪಿ
Advertisement